ಇಂಡಿ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭೀಣಿಯರಿಗೆ ಸ್ತ್ರೀಯರ ಬಾಣತನಕ್ಕೆ ವೈದ್ಯರಿಲ್ಲ ಎಂದು ಆಗ್ರಹಿಸಿ ಇಂದು ಅಯೂಬ ನಾಟಿಕಾರ ಇವರ ನೇತೃತ್ದಲ್ಲಿ ಜೆಡಿಎಸ್ ಕಾರ್ಯಕರ್ತರು ಆಡಳಿತಸೌಧ ಎದುರು ಪ್ರತಿಭಟನೆ ಮಾಡಿದರು.
ಜೆಡಿಎಸ್ ಧುರೀಣ ಅಯೂಬ ನಾಟಿಕಾರ ಮಾತನಾಡಿ ಚಿಕಿತ್ಸೆಗಾಗಿ ಆಗಮಿಸುತ್ತಿರುವ ಬಡ ರೋಗಿಗಳಿಗೆ ಅಗತ್ಯವಾದ ಸ್ತ್ರೀ ರೋಗ ತಜ್ಞರಿಲ್ಲ. ಇದರಿಂದ ತಾಲೂಕಿನ ಗರ್ಭೀಣಿ ಸ್ತ್ರೀಯರಿಗೆ ಅತೀವ ತೊಂದರೆಯಾಗುತ್ತದೆ. ಅಲ್ಲಿಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಸೋಲಾಪುರಕ್ಕೆ ಹೋಗಿರಿ ಎಂದು ಹೇಳುತ್ತಾರೆ ಎಂದರು. ಈ ಕುರಿತು ತಾಲೂಕಾ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದರು.
ಒಂದು ವೇಳೆ ಸಮಸ್ಯೆ ಬಗೆ ಹರಿಸದಿದ್ದರೆ ಜಿಲ್ಲಾ ವೈದ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವದೆಂದು ಎಚ್ಚರಿಕೆ ನೀಡಿದರು.
ವಿಕಾಸ ಹೊಸಮನಿ, ಇರಫಾನ ಅಥಣಿಕರ ಸೇರಿದಂತೆ ಜೆಡಿ ಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಇವರಿಗೆ ಮನವಿ ಸಲ್ಲಿಸಿದರು.
