Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಸುಲಭವಾಗಿ ಲಭ್ಯವಾಗಲಿವೆ : ಸಚಿವ ಸತೀಶ ಜಾರಕಿಹೊಳಿ

ಯರಗಟ್ಟಿ ತಾಲ್ಲೂಕು ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆ ಹಾಗೂ ತಾಲೂಕ ಪಂಚಾಯಿತಿ ಕಚೇರಿ ಉದ್ಘಾಟನೆ 

ಯರಗಟ್ಟಿ: ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈ ಯೋಜನೆಯಿಂದ ಯರಗಟ್ಟಿ ಭಾಗದ ಆಡಳಿತ ವ್ಯವಸ್ಥೆ ಮತ್ತ? ಬಲಗೊಳ್ಳಲಿದ್ದು, ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಸುಲಭವಾಗಿ ಲಭ್ಯವಾಗಲಿವೆ. ವೇಗ, ಪಾರದರ್ಶಕತೆ ಹಾಗೂ ಜನಸ್ನೇಹಿ ಆಡಳಿತಕ್ಕೆ ಇದು ಸಹಕಾರಿಯಾಗಲಿದೆ. ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಸಮಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು.

ಯರಗಟ್ಟಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯೇ ಹೊಸ ತಾಲ್ಲೂಕು ಪಂಚಾಯಿತಿಯಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುವರು. ಆದ? ಬೇಗ ಅಧಿಕಾರಿಯನ್ನು ನೇಮಕ ಮಾಡಿಸಲಾಗುವುದು’ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತ ಕಚೇರಿಯನ್ನು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.

Advertisement

ಶಾಸಕ ವಿಶ್ವಾಸ ವೈದ್ಯ  ಮಾತನಾಡಿ, ‘ಹೊಸ ತಾಲ್ಲೂಕಿನ ಗಡಿ ಭಾಗದೂ ಜನರಿಗೆ ಸರ್ಕಾರದ ಸವಲತ್ತು ಗಳು ಆದ? ಬೇಗ ಸಿಗಲೆಂಬ ಉದ್ದೇಶ, ತಾಲ್ಲೂಕಿನ ಆಡಳಿತವನ್ನು ಸುಗಮವಾಗಿ ನಡೆಸಲು ಹಂತ ಹಂತವಾಗಿ ಕಚೇರಿಗಳನ್ನು ತೆರೆಯಲಾಗುತ್ತಿದೆ. 

ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಅವಳಿ ತಾಲ್ಲೂಕುಗಳನ್ನು ಸಮಾನವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಉದ್ದೇಶ’ ಎಂದರು.

ಇದೇ ವೇಳೆ ೮.೬೦ ಕೋಟಿ ವೆಚ್ಚದಲ್ಲಿ ಹೊಸ ವೆಚ್ಚದಲ್ಲಿ ಹೊಸ ಪ್ರಜಾ ಸೌಧ ಕಟ್ಟಡವನ್ನು ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. 

ಈ ವೇಳೆ ವಿಧಾನ ಪರಿ?ತ್ ಸದಸ್ಯ ಚನ್ನರಾಜ ಹಟ್ಟಿಹೊಳ್ಳಿ, ಯರಗಟ್ಟಿ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ, ಸವದತ್ತಿ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾ. ಪಂ. ಇಓ ಆನಂದ ಬಡಕುಂದ್ರಿ, ಪಿಡೆಬ್ಲೂಡಿ ಎಇಇ ವಿಜಯ ಸಂಗಪ್ಪನ್ನವರ, ಪಿ.ಆರ್.ಇ.ಡಿ. ಎಇಇ ಬಸವರಾಜ ಅಯ್ಯನಗೌಡರ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಸಿಪಿಐ ಐ. ಎಂ. ಮಠಪತಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಮಾಜಿ ತಾಪಂ ಸದಸ್ಯ ವಿಠ್ಠಲಗೌಡ ದೇವರಡ್ಡಿ, ಜಿಪಂ ಮಾಜಿ ಸದಸ್ಯ ಫಕ್ಕೀರಪ್ಪ ಹದ್ದನ್ನವರ, ಟಿಎಪಿಎಂಸಿ ಅಧ್ಯಕ್ಷ ರವೀಂದ್ರ ಯಲಿಗಾರ, ಮಾಜಿ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಕಲ್ಪನಾ ಜೋಶಿ, ಪ್ರಕಾಶ ವಾಲಿ, ನಿಖಿಲ ಪಾಟೀಲ, ಶಿವಾನಂದ ಪಟ್ಟಣಶೆಟ್ಟಿ, ಸಲೀಮಬೇಗ ಜಮಾದಾರ, ಹನಮಂತ ಹಾರುಗೊಪ್ಪ, ಬಾಸ್ಕರ ಹಿರೇಮೆತ್ರಿ, ಸಂತೋಷ ಚನ್ನಮೇತ್ರಿ, ಬಸವರಾಜ ಚನ್ನಮೇತ್ರಿ, ಸುರೇಶ ಭಜಂತ್ರಿ, ಪುಂಡಲೀಕ ಮೇಟಿ, ಗೌಡಪ್ಪ ಉದಪುಡಿ, ಮಲಿಕಸಾಬ ಬಾಗವಾನ, ಬಸವರಾಜ ಪೂಜೇರ, ಬಂಗಾರೆಪ್ಪ ಹರಳಿ, ಫಕ್ಕೀರಪ್ಪ ಕಿಲಾರಿ, ಮಂಜುನಾಥ ತಡಸಲೂರ,  ಸೇರಿದಂತೆ ಇತರರಿದ್ದರು.

ಬಾಕ್ಸ್ : ಈಗಾಗಲೇ ಪೂರ್ಣ ಪ್ರಮಾಣದಲ್ಲಿ ತಾಲೂಕು ತಹಸೀಲ್ದಾರ ಕಚೇರಿ, ಪೊಲೀಸ್ ಠಾಣೆ ಹಾಗೂ ಅಗ್ನಿ ಶಾಮಕ ಕಛೇರಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿವೆ. ತಾಲೂಕು ಕೋರ್ಟ್‌ಗೆ, ಪಟ್ಟಣ ಪಂಚಾಯತಿ ನೂತನ ಕಟ್ಟಡಕ್ಕೆ ಜಾಗ ಮಂಜೂರಾಗಿದ್ದು, ಶೀಘ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಪೂಜೆ ನೆರವೇರಿಸಲಾಗುತ್ತಿದೆ. ಈ ಭಾಗದ ಸಮಗ್ರ ಅಭಿವೃದ್ಧಿ ಬದ್ಧರಾಗಿ ಕೆಲಸ ಮಾಡುತ್ತಿದ್ದೇನೆ.

ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಸುಲಭವಾಗಿ ಲಭ್ಯವಾಗಲಿವೆ : ಸಚಿವ ಸತೀಶ ಜಾರಕಿಹೊಳಿಬಳ್ಳಾರಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಗುರುವಿನ ಆಶೀರ್ವಾದವೆ ಜೀವನಕ್ಕೆ ದಾರಿದೀಪ : ಗುರುಮಹಾಂತ ಶ್ರೀಗಳುಧರ್ಮದಿಯಾ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಕಲಿಕಾ ಕಿಟ್ ವಿತರಣೆಬಾಲಚಂದ್ರ ಮಡಿವಾಳರಿಗೆ ಪಿಎಚ್‌ಡಿ ಪದವಿಇಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭಡಾ. ಪುಷ್ಪಲತಾ ಅವರ ವರ್ಗಾವಣೆಗೆ ಸಾರ್ವಜನಿಕರ ಆಕ್ರೋಶ"ಪೋಲಿಯೋ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ" ಕೆಂಪೇಗೌಡರ ಆಡಳಿತ ಮಂತ್ರವು ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ : ಬಂಡೆ ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಕೈಜೋಡಿ ಯಶಸ್ವಿಗೊಳಿಸಬೇಕು : ಪ್ರದೀಪಕುಮಾರ ಹಿರೇಮಠ