ಬಳ್ಳಾರಿ೧೫:: ಪ್ರಸ್ತುತ ಬಳ್ಳಾರಿಯ ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠದಲ್ಲಿ ಪ್ರಾಕಾರೋತ್ಸವಕ್ಕೆ ಒಂದು ಭವ್ಯ ರಥವಿದ್ದು, ಶ್ರೀ ಗುರುರಾಯರ ಆರಾಧನಾ ಮಹೋತ್ಸವದಲ್ಲಿ ರಾಜಬೀದಿಯ ಮಹಾರಥೋತ್ಸವಕ್ಕೆ ಒಂದು ದೊಡ್ಡದಾದ ಸುಂದರ, ಭವ್ಯ ರಥವನ್ನು ನಿರ್ಮಾಣ ಮಾಡಲು ಗುರುಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆದೇಶದಂತೆ ನಿಶ್ಚಯಿಸಲಾಗಿದೆ, ಭಕ್ತರು ನೂತನ ರಥ ನಿರ್ಮಾಣದ ಸೇವೆಯಲ್ಲಿ ಭಾಗವಹಿಸಿ, ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು
ಎಂದು ಇಲ್ಲಿನ ಸತ್ಯನಾರಾಯಣಪೇಟೆ ಬಡಾವಣೆಯ ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠದ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ನೂತನ ರಥ ನಿರ್ಮಾಣಕ್ಕೆ ಸುಮಾರು ೧೨ ಲಕ್ಷ ರೂ.ಆಗಬಹುದು ಎಂದು ಅಂದಾಜಿಸಲಾಗಿದೆ. ನಮ್ಮ ನಮ್ಮ ಮನೋರಥಗಳ ಪೂರ್ಣವಾಗಲೂ, ಶ್ರೀ ಗುರುರಾಜರಿಗೆ ಸಮರ್ಪಿಸಲಿರುವ ಈ ನೂತನ ರಥ ನಿರ್ಮಾಣ ಸೇವೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ, ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ದೇಣಿಗೆ ಸಲ್ಲಿಸುವ ಪ್ರತಿಯೊಬ್ಬ ಭಕ್ತರು, ಶ್ರೀಮಠದ ಕಾರ್ಯಾಲಯದಲ್ಲಿ ನೀಡಿ ಅಧಿಕೃತ ರಶೀದಿ ಪಡೆಯಬೇಕು. ಆನ್ ಲೈನ್ ಮೂಲಕ ಸೇವೆ ಸಲ್ಲಿಸುವ ಭಕ್ತರು ಕರ್ನಾಟಕ ಬ್ಯಾಂಕ್ ಬಳ್ಳಾರಿ ಶಾಖೆಯ S/ಃ ಂಅಅ ಓಔ: ೦೭೪೨೫೦೦೧೦೦೪೪೨೪೦೧, ISಈಅ ಏಂಖಃ೦೦೦೦೦೭೪ ಖಾತೆಗೆ ಜಮಾ ಮಾಡಬಹುದು ಎಂದು ಮನವಿ ಮಾಡಿದ್ದಾರೆ.