LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಇಂದಿನಿಂದ ಕನಕದುರ್ಗಮ್ಮ ದೇವಸ್ಥಾನದಲ್ಲಿ ದಸರಾ ನವರಾತ್ರಿ ಉತ್ಸವ: ಪೂಜಾರಿ ಗಾದೆಪ್ಪ 

ವಿಜಯದಶಮಿಯಂದು ಸಂಜೆ 6ಕ್ಕೆ ಪ್ರಧಾನ ಪಲ್ಲಕ್ಕಿ ಉತ್ಸವ;  ದೀಪಾಲಂಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಬಳ್ಳಾರಿ, ಅ.10: ನಗರದ ಅಧಿದೇವತೆ  ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ಇಂದಿನಿಂದ 10 ದಿನಗಳ ಕಾಲ  ದಸರಾ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
 ದೇವಸ್ಥಾನದ  ಧರ್ಮಕರ್ತ ಪೂಜಾರಿ ಗಾದೆಪ್ಪ ತಿಳಿಸಿದರು.
ಅವರು ನಗರದ ಕನಕದುರ್ಗಮ್ಮ ದೇವಸ್ಥಾನದ ಯಾತ್ರಿ ನಿವಾಸದಲ್ಲಿ  ಶನಿವಾರದಂದು ಸುದ್ದಿಗೋಷ್ಠಿಯನ್ನು ನಡೆಸಿ  ಮಾತನಾಡಿ , ನವರಾತ್ರಿ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ನವದುರ್ಗೆಯರ ಅಲಂಕಾರ, ಲಲಿತ ಸಹಸ್ರನಾಮ ಪಠಣ, ಪುರಾಣ ಪಠಣ, ಭಜನೆ, ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಜಯದಶಮಿಯಂದು ದೇವಿಯ ಪ್ರಧಾನ ಪಲ್ಲಕ್ಕಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ದಸರಾ ಮಹೋತ್ಸವದ ಅಂಗವಾಗಿ ನಗರದ ಎನ್.ಪಿ. ಸರ್ಕಲ್‌ನಿಂದ ಕನಕದುರ್ಗಮ್ಮ ದೇವಸ್ಥಾನದವರೆಗೆ, ರಾಯಲ್ ಸರ್ಕಲ್ ರಸ್ತೆ ಅಂಡರ್ ಬೆಡ್ಸ್  ಸೇತುವೆ, ಮೋಕಾ ರಸ್ತೆ, ರೇಣುಕ ಕಿಚನ್ ಹಾಗೂ ಕಪ್ಪಗಲ್ಲು ರಸ್ತೆ ಲಯನ್ಸ್ ಕ್ಲಬ್‌ವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ದೇವಸ್ಥಾನದ ಒಳ ಆವರಣದಲ್ಲಿಯೂ ವಿಶೇಷ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತರ ಅನುಕೂಲಕ್ಕಾಗಿ ಶಾಮಿಯಾನ, ಬ್ಯಾರಿಕೇಡ್‌ಗಳು ಹಾಗೂ ವೇದಿಕೆ ವ್ಯವಸ್ಥೆ ಮಾಡಲಾಗುವುದು. ದುರ್ಗಾಷ್ಟಮಿ ಮತ್ತು ವಿಜಯದಶಮಿ ದಿನಗಳಂದು ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನವರಾತ್ರಿ ಉತ್ಸವದ ಹತ್ತು ದಿನಗಳಲ್ಲೂ ದೇವಿಗೆ ಪ್ರತಿದಿನ ವಿಭಿನ್ನ ಅಲಂಕಾರಗಳನ್ನು ಮಾಡಲಾಗುತ್ತದೆ. ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪ್ರತಿದಿನ ದೇವಿಯ ವಿವಿಧ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುವುದು. ಮೂಲ ದೇವಿಗೆ ವಿಶೇಷವಾಗಿ ಬಂಗಾರದ ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ದೇವಸ್ಥಾನದ ಒಳ ಆವರಣದಲ್ಲಿ ಪ್ರತಿದಿನ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ವಿಜಯದಶಮಿಯಂದು ದೇವಿಯ ಪ್ರಧಾನ ಪಲ್ಲಕ್ಕಿ ಉತ್ಸವವನ್ನು ಹೊರಗಡೆ ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಲಾಗಿದೆ. ಪುಷ್ಕರಣಿ, ಪಲ್ಲಕ್ಕಿ ಉತ್ಸವ ಹಾಗೂ ಇತರ ಧಾರ್ಮಿಕ ವ್ಯವಸ್ಥೆಗಳಿಗೂ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರತಿದಿನ ದೇವಿಗೆ ನವದುರ್ಗೆಯರ ವಿಶೇಷ ಅಲಂಕಾರ : ಅ.11ರಂದು ಶೈಲಪುತ್ರಿ ಅಲಂಕಾರ, ಅ.12ರಂದು ಬ್ರಹ್ಮಚಾರಿಣಿ ಅಲಂಕಾರ, ಅ.13ರಂದು ಚಂದ್ರಘಂಟಾ ಅಲಂಕಾರ, ಅ.14ರಂದು ಕೂಷ್ಮಾಂಡಾ ಅಲಂಕಾರ, ಅ.15ರಂದು ಸ್ಕಂದಮಾತಾ ಅಲಂಕಾರ, ಅ.16ರಂದು ಕಾತ್ಯಾಯಿನಿ ಅಲಂಕಾರ, ಅ.17ರಂದು ಕಾಲರಾತ್ರಿ ಅಲಂಕಾರ, ಅ.18ರಂದು ಮಹಾಗೌರಿ ಅಲಂಕಾರ, ಅ.19ರಂದು ಸಿದ್ಧಿದಾತ್ರಿ ಅಲಂಕಾರ, ಅ.20ರಂದು ಸರಸ್ವತಿ ಅಲಂಕಾರ ಹಾಗೂ ಅ.21ರಂದು ಆದಿಶಕ್ತಿ ಅಲಂಕಾರಗಳೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು .
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀ ಕನಕದುರ್ಗಮ್ಮ ದೇವಸ್ಥಾನದ ವತಿಯಿಂದ ನಡೆಯುವ ಈ ನವರಾತ್ರಿ ಮಹೋತ್ಸವದಲ್ಲಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು  ಮನವಿ ಮಾಡಿದರು.
ವಿಜಯದಶಮಿಯಂದು ಸಂಜೆ 6 ಗಂಟೆಗೆ ಶ್ರೀ ಕನಕದುರ್ಗಮ್ಮ ದೇವಿಯ ಪ್ರಧಾನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ದೇವಿಯ ಮೆರವಣಿಗೆಯನ್ನು ವೈಭವದಿಂದ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ. ರಾವಣ ದಹನದ ಬದಲಿಗೆ ಪಟಾಕಿ ಸಿಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವದ ಅವಧಿಯಲ್ಲಿ ನೆರೆದ  ಭಕ್ತರಿಗೆ ಪ್ರತಿದಿನ ಅನ್ನಪ್ರಸಾದ ಏರ್ಪಾಡು ಮಾಡಲಾಗಿದೆ  ಎಂದು  ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ (ಇಒ) ಸೇಲ್ವಮಣಿ, ರಾಮಾಂಜನೇಯಲು, ಲಕ್ಷ್ಮಣ, ವಿಜಯಕುಮಾರ್, ರಾಮಾಂಜಿನಿ ಕೌಶಿಕ್  ಸೇರಿದಂತೆ ಇತರರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳದೈನಂದಿನ ಜೀವನದಲ್ಲಿ ಪ್ರಾಣಾಯಾಮದಿಂದ ಆರೋಗ್ಯ ಮತ್ತು ಮನಃಶಾಂತಿ: ಅಮೃತಾಂನಂದ ಮಹಾಸ್ವಾಮಿಗಳ ಬೋಧನೆಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ 59ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಕೊಪ್ಪಳದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಸಾಮೂಹಿಕ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣಬಳ್ಳಾರಿಯ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ  11ನೇ ವರ್ಷದ ಶರನ್ನವರಾತ್ರಿ ಉತ್ಸವ ಇಂದು ಹನುಮಾನ್ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಮೂಳೆಯ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಆಂಕರ್‌ರಹಿತ ರಿಪೇರ್‌ಗೆ ನೆರವಾಗುವ ಸಾಧನ ಅಭಿವೃದ್ಧಿಹೊಸಪೇಟೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇ?ರು: ಧರೆಪ್ಪ ಸಾಂಗ್ಲೀಕರ