LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕಾರಹುಣ್ಣಿಮೆ ಸಂಭ್ರಮ ಸಡಗರದಿಂದ ಆಚರಣೆ


ಇಂಡಿ,ಜೂ,೩೦: ಇಂಡಿ ನಗರ ಸೇರಿದಂತೆ ಇಂಗಳಗಿ ಆಳೂರ, ಲಚ್ಯಾಣ ಎಲ್ಲ ಗ್ರಾಮಗಳಲ್ಲಿ  ಸೋಮವಾರರಂದು  ಕಾರಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ತಾಲೂಕಿನಾದ್ಯಂತ ಆಚರಿಸಲಾಯಿತು. 
ಎತ್ತುಗಳಿಗೆ ಬಣ್ಣ ಬಳಿದು ಬಣ್ಣ ಬಣ್ಣದ ಶೃಂಗರಿಸಿ ನಗರದಲ್ಲಿ ಹಾಗೂ ಗ್ರಾಮಗಳಲ್ಲಿ ಬಾಜಾ ಬಜಂತ್ರಿಯೊಂದಿಗೆ ಗುಂಪು ಗುಂಪಾಗಿ ಎತ್ತುಗಳ ಮೇರವಣಿಗೆ ವಿಜ್ರಂಭಣೆಯಿಂದ ಮಾಡಿದರು. ನಂತರ ಜೊಡು ಎತ್ತುಗಳ ಕಾಲು ಬಂಡಿ ಹಾಗೂ ಬಂಡಿಗಳ ಓಡಿಸುವ ಮೂಲಕ ರೈತರು ಯುವಕರು ಸಂಭ್ರಮಿಸುತ್ತಿರುವುದು ನೋಡುಗರಿಗೆ ಮನರಂಜಿಸಿದರು.
ಸಂಜೆಯಾಗುತ್ತಿದಂತೆ ನಗರ ಹಾಗೂ ಗ್ರಾಮದ ಅಗಸಿಯಿಂದ ಎತ್ತು ಹಾಗೂ ಬಂಡಿ ಓಡಿಸುವ ಮೂಲಕ ಕರಿ ಹರಿದರು. ಇದರಿಂದ ಹಿಂಗಾರು ಮುಂಗಾರು ಬೆಳೆಗಳ ಬಗ್ಗೆ ತಿಳಿದುಕೊಂಡರು. ನಂತರ ಹಿಂಗಾರು ಮುಂಗಾರು ಕಲ್ಲು ಬಂಡಿಯನ್ನು ಎತ್ತಿ ಮಳೆ ಬೆಳೆ ಬಗ್ಗೆ ಅಲೋಕನ ಮಾಡಿದರು. ಬಳಿಕ ಊರ ಅಗಸಿ ಬಳಿ ಭಾರ ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಯುವಕರು, ರೈತರು ಭಾರವಾದ ಕಲ್ಲು ಎತ್ತಿ ತಮ್ಮ ತಮ್ಮ ಬಲ ಪ್ರದರ್ಶಿಸಿದರು.
ಪೊಟೋ ಕ್ಯಾಪ್ಸನ್ ೨೯ ಇಂಡಿ ೦೧: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಎತ್ತುಗಳಿಗೆ ಬಣ್ಣ ಬಳಿದು ಬಣ್ಣ ಬಣ್ಣದ ಶೃಂಗರಿಸಿ ನಗರದಲ್ಲಿ ಹಾಗೂ ಗ್ರಾಮಗಳಲ್ಲಿ ಬಾಜಾ ಬಜಂತ್ರಿಯೊಂದಿಗೆ ಗುಂಪು ಗುಂಪಾಗಿ ಎತ್ತುಗಳ ಮೇರವಣಿಗೆ ವಿಜ್ರಂಭಣೆಯಿಂದ ಮಾಡಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಬ್ಬಳ್ಳಿಯ ಪುಷ್ಕರಣಿ ವಿಚಾರದಲ್ಲಿ ಬೆಲ್ಲದ ರಾಜಕಾರಣ ಬಿಡಲಿ,  ದೀಪಕ ಚಿಂಚೋರೆ ವಾಗ್ದಾಳಿಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಡೋರಿ ಗ್ರಾಮಕ್ಕೆ ಜಿಲ್ಲಾಧಿಕಾರಿ- ಸ್ನೇಹಲ್ ಆರ್. ಭೇಟಿ  ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ  ಎ. ರುಕ್ಮಿಣಿತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ಮಾತು ಮನೆ ಕಟ್ಟುತ್ತದೆ, ಮಾತೇ ಮನೆಯನ್ನು ಕೆಡಿಸುತ್ತದೆ - ಶಿದ್ದಲಿಂಗಶ್ರೀ*ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ದತ್ತಾ ವಾಸ್ಟರ್ ಅವಿರೋಧವಾಗಿ ಆಯ್ಕೆ*ಪ್ರಾಮಾಣಿಕತೆ ಇದ್ದಲ್ಲಿ ಲಾಭ ಹೆಚ್ಚಿರುತ್ತದೆ - ಗುರುಪಾದ ಶ್ರೀಭಾಜಪ ಜಿಲ್ಲಾಧ್ಯಕ್ಷ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ