Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

೬೧ನೇ ದಿನದ ಸಂತ್ರಸ್ತರ ಅಹೋರಾತ್ರಿ ಧರಣಿಗೆ : ಎಸ್.ಆರ್.ನವಲಿಹಿರೇಮಠ ಬೆಂಬಲ 


ಹುನಗುಂದ,ಜು,೦೬: ತಾಲೂಕಿನ ಇದ್ದಲಗಿ ಗ್ರಾಮ ಸೇರಿದಂತೆ ಹತ್ತು ಮುಳಗಡೆ ಗ್ರಾಮಗಳ ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಲಭ್ಯ ಕಲ್ಪಿಸುವುದು, ನಾಲ್ಕು ಗುಂಟೆ ನಿವೇಶನ ಮತ್ತು ಎರಡನೇ ಕಂತಿನ ಪರಿಹಾರ ಹಣ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ  ಸಮಾಜ ಸೇವಕ ಹಾಗೂ ಎಸ್.ಆರ್.ಎನ್.ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಸಂತ್ರಸ್ತರ ಧರಣಿಗೆ ನೈತಿಕ ಬೆಂಬಲ ಸೂಚಿಸಿದರು.
ಈ ವೇಳೆ ಎಸ್.ಆರ್ ನವಲಿಹಿರೇಮಠ ಮಾತನಾಡಿ ಕಳೆದ ೧೯ ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿ ಅನುಭವಿಸುತ್ತಿರುವ ಸಂತ್ರಸ್ತರ ಸಂಕಷ್ಟಗಳನ್ನು ಪರಿಹರಿಸದೇ ಇರುವರು ಮತ್ತು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳದವ ನಿಜವಾದ ಜನಪ್ರತಿನಿಧಿ ಅಲ್ಲವೇ ಅಲ್ಲ. ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬಗಳಿಗೆ ಸರ್ಕಾರ  ಕೊಟ್ಟ ಒಂದು ಗುಂಟೆ ಜಾಗೆ ಸಾಕಾಗದು. ಸಂತ್ರಸ್ತರು ಕೇಳುತ್ತಿರುವ ನಾಲ್ಕು ಗುಂಟೆ ನಿವೇಶನದ ಬೇಡಿಕೆ ನ್ಯಾಯಯುತವಾಗಿದೆ.
ಕೃಷ್ಣ ಮತ್ತು ಮಲಪ್ರಭಾ ನದಿಗಳ ದಡದಲ್ಲಿರುವ ೪೦ಕ್ಕೂ ಹೆಚ್ಚು ಹಳ್ಳಿಗಳು ಯುಕೆಪಿ ಅಡಿಯಲ್ಲಿ ಮುಳಗಡೆಯಾಗಬೇಕಿತ್ತು.ಆದರೆ ಸಧ್ಯ ೩೪ ಹಳ್ಳಿಗಳು ಮಾತ್ರ ಯುಕೆಪಿಯಡಿಯಲ್ಲಿ ಮುಳಗಡೆಯಾಗಿವೆ. ಇನ್ನು ೧೧ಕ್ಕೂ ಹೆಚ್ಚು ಹಳ್ಳಿಗಳ ಜನರು ಇನ್ನು ಪಡಬಾರದ ಕಷ್ಟ ಪಡುತ್ತಿದ್ದಾರೆ.೪೦ ಗ್ರಾಮಗಳ ಜನರು ಸೇರಿಕೊಂಡು ಒಂದು ಕಮೀಟಿ ರಚಿಸಿ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡಿ ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ನಾಡಗೌಡರ, ಹಸನಸಾಬ ಪಿಂಜಾರ ಅವರು ಹತ್ತು ಗ್ರಾಮಗಳ ಸಂತ್ರಸ್ತರ ಬೇಡಿಕೆ ಕುರಿತು ಮಾತನಾಡಿದರು.
ಹಿರಿಯ ಸಹಕಾರಿ ಧುರೀಣ ಎಲ್.ಎಮ್.ಪಾಟೀಲ, ಮಹಾಂತೇಶ ಮೂಲಿಮನಿ, ನಿಂಗನಗೌಡ ಜಾಲಿಹಾಳ,ಭೀಮಣ್ಣ ಶಿರೂರ, ಮಹಾಂತೇಶ ಚೌಡಾಪುರ, ರವಿ ಬಾನಿ, ಜಗದೀಶ ಹೊಸಮನಿ, ಷಡಕ್ಷರಯ್ಯ ಹಿರೇಮಠ, ಮಲ್ಲಣ್ಣ ಕಮರಿ ಸೇರಿದಂತೆ ಹತ್ತು ಮುಳುಗಡೆ ಗ್ರಾಮಗಳ ಸಂತ್ರಸ್ತರು ಇದ್ದರು.
ಬಾಕ್ಸ್; ಸಂತ್ರಸ್ತರು ವಿಧಾನಸೌಧ ಮುತ್ತಿಗೆ ಹಾಕಿದಾಗ ಮಾತ್ರ ಬೇಡಿಕೆಗಳು ಈಡೇರಲು ಸಾಧ್ಯ ***ಇದ್ದಲಗಿ ಗ್ರಾಮ ಸೇರಿದಂತೆ ಹತ್ತು ಹಳ್ಳಿಗಳ ಸಂತ್ರಸ್ತರು ೫೯ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಕುರಿತು ತಾಲೂಕಿನ ೪೦ ಗ್ರಾಮಗಳ ಸಂತ್ರಸ್ತರನ್ನು ಕರೆದುಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಜಲಸಂಪನ್ಮೂಲ ಸಚಿವರಿಗೆ ಮತ್ತು ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಿ ಬೇಡಿಕೆ ಈಡೇರಿಕೆಗೆ ೨೦ ದಿನಗಳ ಗಡುವು ನೀಡಿ, ಅಷ್ಟರಲ್ಲಿ ಬೇಡಿಕೆ ಈಡೇರದಿದ್ದರೆ ೪೦ ಹಳ್ಳಿಯ ಜನರು ವಿಧಾನಸಭೆ ಮುತ್ತಿಗೆ ಹಾಕುವ ಕೆಲಸವಾಗಲಿ. ಸರ್ಕಾರ ಬಜೆಟನಲ್ಲಿ ಅನುದಾನ ಮೀಸಲಿಟ್ಟರೆ ಮಾತ್ರ ನಿಮ್ಮಗಳ ಬೇಡಿಕೆಗಳು ಈಡೇರಲು ಸಾಧ್ಯ. ನೀವು ವಿಧಾನಸಭೆ ಮುತ್ತಿಗೆ ಹಾಕಲು ಹೋಗಲು ನಿರ್ದಾರ ಕೈಗೊಂಡರೆ ಅದಕ್ಕೆ ಬೇಕಾದ ವಾಹನ ವ್ಯವಸ್ಥೆ ಮತ್ತು ಊಟೋಪಚಾರ ಮಾಡಿಸಲು ನಾನು ಮಾಡುತ್ತೇನೆ. ಎಸ್.ಆರ್.ನವಲಿಹಿರೇಮಠ.ಅಧ್ಯಕ್ಷರು, ಎಆರ್‌ಎನ್‌ಇ ಫೌಂಡೇಶನ್ ಹುನಗುಂದ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ ೧೧ ರಂದು ರಾಮದುರ್ಗ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಧರಣಿ ಮಳೆರಾಯನ ಅನುಗ್ರಹಕ್ಕಾಗಿ ಪ್ರಾರ್ಥಿಸಿದ ಗ್ರಾಮಸ್ಥರು ಹಡಪದ ಅಪ್ಪಣ್ಣ ಸಮುದಾಯ ಭವನ ಅಭಿವೃದ್ಧಿಗೆ ಚಾಲನೆ.ಪ್ರತಿಯೊಬ್ಬರೂ ಎಸ್‌ಐಆರ್ ಮಾಹಿತಿಗೆ ಸ್ಪಂದಿಸಿ: ಆರ್ ಬಿ ತಿಮ್ಮಾಪೂರ ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಆಸೀಫ್ ಸೇಠ್ವೈದ್ಯರು ರೋಗಿಗಳನ್ನು ದೇವರಂತೆ ಕಾಣಬೇಕು: ಡಾ. ಜಿ.ಎಸ್. ಗಲಗಲಿ  ಇಂದಿನ ತಂತ್ರಜ್ಞಾನ ಯುಗದಲ್ಲಿ ಜೀವನಕ್ಕೆ ಅಗತ್ಯ : ಜಿ.ಬಿ.ವಡವಡಗಿದೇವಸ್ಥಾನಗಳನ್ನು ಮರು ನಿರ್ಮಿಸಿ ಹಿಂದೂ ಧರ್ಮ ರಕ್ಷಿಸಿದ ರಾಜಮಾತೆ ಹೊಳಕರ : ಶ್ರೀಮಂತ ಮಹಾರಾಜ್ ಪುಸ್ತಕವಿತರಣೆಯಿಂದ ಬಡ ವಿದ್ಯಾರ್ಥಿಗಳ ಓದಿಗೆ ಪ್ರೇರಣೆ- ಈರಣ್ಣ ಹಲಗತ್ತಿ