ತಾಳಿಕೋಟೆ, ಪಟ್ಟಣದ ಶ್ರೀ ಶಿವಚಿದಂಬರೇಶ್ವರ ಸೇವಾ ಸಮಿತಿ ಹಾಗೂ ಬ್ರಾಹ್ಮಣ ಸಮಾಜ ತಾಳಿಕೋಟೆ ಇವರ ವತಿಯಿಂದ ಶ್ರೀ ಶಿವಚಿದಂಬರೇಶ್ವರ ದಿಂಡಿ ಪ್ರಾರಂಭೋತ್ಸವ ಹಾಗೂ ಶ್ರೀ ಕ್ಷೇತ್ರ ಮುರಗೋಡದಿಂದ ಬಂದಂತಹ ಪವಿತ್ರ ವೀಣೆಯ ಶೋಭಾಯಾತ್ರೆಯು ಇಂದು ದಿ.೩೧ ಶುಕ್ರವಾರರಂದು ಪಟ್ಟಣದಲ್ಲಿ ನಡೆಯಲಿದೆ.
ಬೆಳಿಗ್ಗೆ ೬ ಗಂಟೆಗೆ ಶ್ರೀ ಶಿವಚಿದಂಬರೇಶ್ವರ ಸ್ವಾಮಿಗೆ ಕಾಕಡಾರುತಿ ಜರುಗಲಿದೆ ನಂತರ ಬಸವೇಶ್ವರ ವೃತ್ತದಿಂದ ಶ್ರೀ ಕ್ಷೇತ್ರ ಮುರಗೋಡದಿಂದ ಬಂದಂತಹ ಪವಿತ್ರ ವೀಣೆಯ ಶೋಭಾಯಾತ್ರೆಯು ಪ್ರಾರಂಭಗೊಂಡು ರಾಣಾಪ್ರತಾಪಸಿಂಹ್ ಸರ್ಕಲ್, ಶಿವಾಜಿ ಮಹಾರಾಜರ ವೃತ್ತ, ವಿಠ್ಠಲ ಮಂದಿರ, ಶ್ರೀ ಕೃಷ್ಣಮಂದಿರದ ಮೂಲಕ ಶ್ರೀ ವೇಂಕಟೇಶ್ವರ ದೇವಸ್ಥಾನ ತಲುಪುವದು.
ನಂತರ ೧೧ ಗಂಟೆಗೆ ವೈದಿಕ ಪ್ರತಿಷ್ಠಾನದಿಂದ ವೀಣೆಗೆ ಷೋಡಶೋಪಚಾರ ಪೂಜಾ ಮತ್ತು ಸ್ಥಾಪನೆ ಶ್ರೀ ಶಿವಚಿದಂಬರ ಜಪ, ನಂತರ ಸಭಾ ಕಾರ್ಯಕ್ರಮ ಜರುಗುವದು.
ಮಧ್ಯಾಹ್ನ ೧ ಗಂಟೆಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ಜರುಗಲಿದೆ ಕಾರಣ ಭಕ್ತಾಧಿಗಳು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಶಿವಚಿದಂಬರೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿವಚಿದಂಬರೇಶ್ವರ ಸೇವಾ ಸಮಿತಿ ಹಾಗೂ ಬ್ರಾಹ್ಮಣ ಸಮಾಜ ಪ್ರಕಟನೆ ಮೂಲಕ ತಿಳಿಸಿದೆ.
