ಚನ್ನಮ್ಮನ ಕಿತ್ತೂರು. ವೀರ ರಾಣಿ ಕಿತ್ತೂರು ಚನ್ನಮ್ಮ 2026 ನೇ ಉತ್ಸವದ ಅಂಗವಾಗಿ ಮನ್ನಾದಿನವಾದ ಗುರುವಾರದಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರ ಧರ್ಮಪತ್ನಿ ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಅವರ ನೇತೃತ್ವದಲ್ಲಿ ಹುಲಿಕಟ್ಟಿಯ ಎ ಪಿ ಜೆ ಅಬ್ದುಲ್ ಕಲಾಂ ವಸತಿ ಶಾಲೆಯಿಂದ ಶಾಸಕ ಬಾಬಾಸಾಹೇಬ ಪಾಟೀಲ ಅವರಿಂದ ಕ್ಷೇತ್ರದ 300 ಕ್ಕೂ ಹೆಚ್ಚು ಮಹಿಳೆಯರ ಬೈಕ್ ರ್ಯಾಲಿ ಉದ್ಘಾಟನೆಯಾಗಿ ಅಲ್ಲಿಂದ ಚನ್ನಮ್ಮ ವೃತ್ತಕ್ಕೆ ಬಂದು ತಾಯಿಗೆ ಪೂಜೆ ಸಲ್ಲಿಸುವುದರ ಮೂಲಕ ಪೇಟೆ ಗಲ್ಲಿಯ ಮೂಲಕ ಕಿತ್ತೂರು ಪಟ್ಟಣ ಸಂಚರಿಸಿ ಕೋಟೆ ಅವರಣದಲ್ಲಿ ಸಮಾರೋಪಗೊಂಡಿತು.
ತಾಯಿ ಚನ್ನಮ್ಮಾಜಿ ನಮಗೆ ಪ್ರೇರಣೆ:ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜಯಶಾಲಿಯಾಗಿ, ಮತ್ತೊಮ್ಮೆ ಕುತಂತ್ರದ ಮೂಲಕ ಸೋಲು ಅನುಭವಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಿತ್ತೂರು ಚನ್ನಮ್ಮಾಜಿ ನಮಗೆ ಪ್ರೇರಣೆ ಎಂದು ಕೆಪಿಸಿಸಿ ಸದಸ್ಯರಾದ ಶ್ರೀಮತಿ ರೋಹಿಣಿ ಪಾಟೀಲ ಹೇಳಿದರು. 300 ಹೆಚ್ಚು ಮಹಿಳೆಯರು ಸೀರೆ ಉಟ್ಟು, ಪೆಟ್ ಧರಿಸಿ, ಬೈಕ್ ಚಲಾವಣೆ ಮಾಡಿ ಬೈಕ್ ರ್ಯಾಲಿಯನ್ನು ಯಶಸ್ವಿಗೊಳಿಸಿದರು.