ತಾಳಿಕೋಟೆ: ತಾಲೂಕಿನ ಲಿಂಗದಳ್ಳಿ ತಾಂಡಾದ ೬೯ ವರ್ಷದ ಮಾಲಪ್ಪ ಹರಿಶ್ಚಂದ್ರಪ್ಪ ರಾಠೋಡ ಎಂಬ ವೃದ್ಧ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆಂದು ಪುತ್ರ ಸುರೇಶ ಮಾಲಪ್ಪ ರಾಠೋಡ ಅವರು ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದಿನಾಂಕ ೧೩-೦೮-೨೦೨೬ರಂದು ಮಧ್ಯಾಹ್ನ ೧ ಗಂಟೆಗೆ ತಮ್ಮ ಮನೆಯಿಂದ ಮುದ್ದೇಬಿಹಾಳಕ್ಕೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ತೆರಳಿ ಮರಳಿ ಮನೆಗೆ ಬಂದಿಲ್ಲಾವೆಂದು ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ತಂದೆಯನ್ನು ಕುಟುಂಬದವರು ಹಾಗೂ ಪರಿಚಯಸ್ಥರ ಬಳಿ ವಿಚಾರಿಸಿ, ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ದೂರು ನೀಡಿದ್ದು ಕಾಣೆಯಾದ ಮಾಲಪ್ಪ ರಾಠೋಡ ಗೋಧಿ ಮೈಬಣ್ಣ, ದುಂಡು ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಸುಮಾರು ೫.೫ ಅಡಿ ಎತ್ತರವಿದ್ದಾರೆ. ಕನ್ನಡ, ಮರಾಠಿ, ಬಂಜಾರ ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಲುಂಗಿ ಮತ್ತು ಬಿಳಿ ಬಣ್ಣದ ನೆಹರು ಶರ್ಟ್ ಧರಿಸಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಾಳಿಕೋಟಿ ಪೊಲೀಸ್ ಠಾಣೆ: ೦೮೩೫೬-೨೬೬೩೩೩/೯೪೮೦೮೦೪೨೬೫, ೯೪೮೦೮೦೪೨೩೭ ಸಂಪರ್ಕಿಸಿ ತಿಳಿಸಬೇಕೆಂದು ಪಿಎಸ್ಐ ಶ್ರೀ ಮತಿ ಜ್ಯೋತಿ ಖೋತ್ ಅವರು ತಿಳಿಸಿದ್ದಾರೆ.