LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ರೈತರು ಹಾಗೂ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ

 

ಯರಗಟ್ಟಿ:  ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಾಗೂ ಕೈಗಾರಿಕಾ ಉದ್ಯಮಗಳಿಗೆ ಸಮರ್ಪಕ ಮತ್ತು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ರೈತರು ಹಾಗೂ ಕೈಗಾರಿಕಾ ಉದ್ಯಮಿಗಳು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ತೀವ್ರ ಸಂಕ? ಎದುರಿಸುತ್ತಿದ್ದಾರೆ. ಪದೇಪದೇ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಬೆಳೆಗಳಿಗೆ ಸಕಾಲದಲ್ಲಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಳು ಹಾನಿಗೊಳಗಾಗುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಅದೇ ರೀತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗದ ಪರಿಣಾಮ ಉತ್ಪಾದನಾ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ವಿದ್ಯುತ್ ವ್ಯತ್ಯಯದಿಂದ ಉದ್ಯಮಿಗಳು ಆರ್ಥಿಕ ನ? ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹೆಸ್ಕಾಂ ಎಇಇ ಮಹೇಂದ್ರ ವಿಶಾಪೂರಕರ ಮಾತನಾಡಿ, ಪಟ್ಟಣದ ಮತ್ತು ಸುತ್ತಮುತ್ತಲಿನ ವಿದ್ಯುತ್ ಗ್ರಿಡ್‌ಗಳಿಂದ ರೈತರ ಜಮೀನುಗಳಿ ವಿದ್ಯುತ್ ಸರಬರಾಜು ಇದೆ. ಎರಡು ವಿದ್ಯುತ್ ಕೇಂದ್ರಗಳ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ರೈತರಿಗೆ ಶಾಶ್ವತ ಪರಿಹಾರಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆನೆ’ ಎಂದು 
ತಿಳಿಸಿದರು.ಹೆಸ್ಕಾಂ ಎಇ ಕಾಡಣ್ಣಾ ಜೈನ್ ಮಾತನಾಡಿ, ಪಟ್ಟಣದ ರೈತರಿಗೆ ಹಾಗೂ ಉದ್ಯಮಿದಾರರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ನವೆಂಬರ ೧ ರಿಂದ ಸಮರ್ಫಕ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ಭರವಸೆನಂತರ ರೈತರು ಹಾಗೂ ಕೈಗಾರಿಕಾ ಉದ್ಯಮಿದಾರರು ಪ್ರತಿಭಟನೆಯನ್ನು ಹಿಂಪಡೆದರು.ರೈತ ಮುಖಂಡರಾದ ರಾಜೇಂದ್ರಗೌಡ ಪಾಟೀಲ, ವೆಂಕಟೇಶ ದೇವರಡ್ಡಿ, ಕೃ?ಪ್ಪ ಮಿಕಲಿ, ಗಿರೇಪ್ಪ ಗೌಡರ, ಹನುಮಂತ ಪಾಟೀಲ, ಗಿರೀಶ ಪಾಟೀಲ, ಗೋವಿಂದ ದೇವರಡ್ಡಿ, ಕೃ? ಅರಶೀನಗೋಡಿ, ಹನಮಂತ ಹಾರುಗೋಪ್ಪ, ಬಸವರಾಜ ಜರಗು, ಸದಾನಂದ ಪಾಟೀಲ, ರಾಜು ದೇವರಡ್ಡಿ, ಮಲ್ಲಪ್ಪ ಕರಿಗಾರ, ವೆಂಕಟೇಶ ಮಿಕಲಿ, ಪಾಂಡು ಕಡಕೋಳ, ವೆಂಕಟೇಶ ವಜ್ರಮಟ್ಟಿ, ನಂದಗೋಪಾಲ ಕಡೇಮನಿ, ಫಕ್ಕೀರಪ್ಪ ಕಿಲಾರಿ, ಉದ್ಯಮಿಗಳಾದ ಹುಸೇನಸಾಬ ದಿಲಾವರನಾಯ್ಕ, ಕಾಶೀಮಅಲಿ ನದಾಫ, ಮಂಜುನಾಥ ತೋಟಗಿ, ಆನಂದ ಬಡಿಗೇರ, ಮದಾರಸಾಬ ಚಾಂಖಾನ್ನವರ ರೈತರು ಹಾಗೂ ಕೈಗಾರಿಕಾ ಉದ್ಯಮಿದಾರರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಬನ್ನಿ ವಿನಿಮಯ ಸೌಹಾರ್ದತೆ, ಸಂಬಂಧ ಬೆಸೆಯಲಿದೆ-ಶಾಸಕ ರಾಜುಗೌಡ ವ್ಯಕ್ತಿಯ ಕಾಣೆ ಠಾಣೆಗೆ ದೂರು * ಮೂರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ, ವಿಚಾರ ಸಂಕಿರಣ, ಕ್ರೀಡಾಕೂಟ ಇಂದಿನಿಂದ  ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲಸ್ವಾತಂತ್ರ್ಯ ಹೋರಾಟದ ಮೊದಲ ಕಿಚ್ಚು ಹೊತ್ತಿಸಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಾಜಿರೈತರು ಹಾಗೂ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನಜನ ಮನ ಸೆಳೆದ ಮಹಿಳೆಯರ ಬೈಕ್ ರ್‍ಯಾಲಿ ವೈಭವದ ‘ಚೆನ್ನಮ್ಮನ ಕಿತ್ತೂರು ಉತ್ಸವ - 2026’  ನಾಳೆಯಿಂದ ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲ ಮೂರು ಕಾಮಗಾರಿಗಳಿಗೆ ಭೂಮಿಪೂಜೆ, ಚಿಕ್ಕುಬಾಗ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್