ತಾಳಿಕೋಟೆ: ಪಟ್ಟಣದ ರಜಪೂತ ಸಮಾಜದ ಬಾಂಧವರ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ದೇವಿ ಮೂರ್ತಿಯ ಭವ್ಯ ಮೆರವಣಿಗೆಯನ್ನು ಬುಧವಾರರಂದು ಭಕ್ತಿಭಾವದಿಂದ ನೆರವೇರಿಸಲಾಯಿತು.
ಪಟ್ಟಣದ ಶ್ರೀ ದೇವಿಯ ಪ್ರತಿಷ್ಠಾಪನಾ ಸ್ಥಳವಾದ ರಜಪೂತ ಸಮಾಜದ ಬಡಾವಣೆಯಿಂದ ಆರಂಭಗೊಂಡ ಮೆರವಣಿಗೆಯು ಶ್ರೀ ಖಾಸ್ಗತೇಶ್ವರ ಮಠದ ಮುಂಭಾಗದಿಂದ ಕತ್ತರಿ ಬಜಾರ್, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜ್ ಚೌಕ್ ಮಾರ್ಗವಾಗಿ ಮಹಾರಾಣಾ ಪ್ರತಾಪಸಿಂಹ್ ವೃತ್ತದವರೆಗೆ ಸಾಗಿ ಸಂಪನ್ನಗೊಂಡಿತು. ಮೆರವಣಿಗೆಯುದ್ದಕ್ಕೂ ಭಕ್ತರು ಭಕ್ತಿಶ್ರದ್ಧೆಯಿಂದ ಪಾಲ್ಗೊಂಡು ಶ್ರೀ ದೇವಿಯ ಆರಾಧನೆ ಮಾಡಿದರು.
ಒಂಬತ್ತು ದಿನಗಳ ಕಾಲ ಶ್ರೀ ದೇವಿಯ ಮೂರ್ತಿಯ ಸನ್ನಿಧಿಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ನವರಾತ್ರಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜದ ಬಾಂಧವರು ಹಾಗೂ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ಈ ಮೇರವಣಿಗೆಯ ನೇತೃತ್ವವನ್ನು ರಜಪೂತ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಮಾಜ ಬಾಂದವರು, ವಹಿಸಿದ್ದರು.