LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | State News

ವೈಭವದ ‘ಚೆನ್ನಮ್ಮನ ಕಿತ್ತೂರು ಉತ್ಸವ - 2026’  ನಾಳೆಯಿಂದ ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲ

ಬೆಳಗಾವಿ:ಕನ್ನಡದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟ ಮಾಡಿದ ಭಾರತದ ಮೊದಲ ಮಹಿಳೆ,ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಕೆಚ್ಚೆದೆಯ, ಕಿತ್ತೂರು ನಾಡಿನ ಹೆಮ್ಮೆಯ ತಾಯಿ ಕಿತ್ತೂರು ಚನ್ನಮ್ಮನ ಇತಿಹಾಸ ಜಗತ್ತಿಗೆ ಹಬ್ಬವಾದ ಕಿತ್ತೂರು ಉತ್ಸವವು  ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ 2026ನೇ ಸಾಲಿನ 'ಚೆನ್ನಮ್ಮನ ಕಿತ್ತೂರು ಉತ್ಸವ'ವನ್ನು ಅಕ್ಟೋಬರ್ 23, 24 ಮತ್ತು 25ರಂದು ಕಿತ್ತೂರು  ಪಟ್ಟಣದ  ಕೋಟೆ ಆವರಣದಲ್ಲಿ ಅತ್ಯಂತ ವೈಭವದಿಂದ ಆಯೋಜಿಸಲಾಗಿದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದ್ದಾರೆ.

ಅವರು ಗುರುವಾರ ಬೆಳಿಗ್ಗೆ ಕಿತ್ತೂರು ಕೋಟೆ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ವಿವರಗಳನ್ನು ಹಂಚಿಕೊಂಡರು.

news_1792667396_0_440.webp

ಅಕ್ಟೋಬರ್ 23: ಚಾಲನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು : ಉತ್ಸವದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 23 ರಂದು  ಶುಕ್ರವಾರ ಸಂಜೆ 7 ಘಂಟೆಗೆ  ನಡೆಯಲಿದ್ದು, ರಾಜಯೋಗೀಂದ್ರ ಮಹಾಸ್ವಾಮಿಗಳು, ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಬಸವ ಮೃತ್ಯುಂಜಯ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ರೈತ ಸಂಘದ ನಾಯಕಿ ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯ ಬಳಿಕ ರಸಮಂಜರಿ, ಸಂಗೀತ, ವಚನ ಗಾಯನ, ಭಜನೆ, ತತ್ವಪದ ಹಾಗೂ ‘ರಾಯಣ್ಣ’ ರೂಪಕ ಸೇರಿದಂತೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅಕ್ಟೋಬರ್ 24 ರಂದು ಶನಿವಾರ  ರಾಜ್ಯ ಮಟ್ಟದ ಮಹಿಳಾ ವಿಚಾರ ಸಂಕಿರಣ : ಅಕ್ಟೋಬರ್ 24 ರಂದು  ಶನಿವಾರದಂದು ‘ಕಿತ್ತೂರು ರಾಣಿ ಸಂಸ್ಥಾನ’ದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಮಾಜಿ ಸಚಿವೆ  ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಡಾ. ಸರಸ್ವತಿ ಭಗವತಿ ಭಾಗವಹಿಸಲಿದ್ದಾರೆ. ಡಾ. ಕವಿತಾ ಕುಸಗಲ್ಲ ಆಶಯ ನುಡಿಗಳನ್ನು ಹೇಳಲಿದ್ದಾರೆ.

ಅಕ್ಟೋಬರ್ 25 ರಂದು  ವಿಚಾರ ಸಂಕಿರಣ, ಜಾನುವಾರು ಜಾತ್ರೆ ಹಾಗೂ ಸಮಾರೋಪ : ಅಕ್ಟೋಬರ್ 25ರ ಭಾನುವಾರದಂದು ಬೆಳಿಗ್ಗೆ ಕೋಟೆ ಆವರಣದ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಇದನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಲಿದ್ದು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ಲ ಆಶಯ ನುಡಿಗಳನ್ನು ಹೇಳಲಿದ್ದಾರೆ . ಶ್ರೀಮತಿ ಲೀಲಾವತಿ ಪ್ರಸಾದ್ ಹಾಗೂ ಶೀಲಾಧರ ಯಲ್ಲಪ್ಪ ಮುಗಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಅಂದೇ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ, ಸಚಿವ ಶಿವರಾಜ ತಂಗಡಗಿ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜಗುರು ಸಂಸ್ಥಾನ ಕಲ್ಮಠ, ನಿಚ್ಚಣಕಿಯ ಗುರುಮಡಿವಾಳೇಶ್ವರ ಮಠ, ಕಾದರವಳ್ಳಿಯ ಸೀಮಿಮಠ ಹಾಗೂ ಬೈಲೂರಿನ ನಿಷ್ಕಲ ಮಂಟಪದ ಪೂಜ್ಯ ಶ್ರೀಗಳು ಉಪಸ್ಥಿತರಿರಲಿದ್ದಾರೆ.

news_1792667413_0_151.webp

ಮೊದಲ ಬಾರಿಗೆ ಕ್ರೀಡಾ ಸಂಭ್ರಮ, ಜಾನುವಾರು ಜಾತ್ರೆ : ಇದೆ ಮೊದಲ  ಬಾರಿಯ ಉತ್ಸವದ ವಿಶೇಷ ಆಕರ್ಷಣೆಯಾಗಿ ಪ್ರಥಮ ಬಾರಿಗೆ ಜಾನುವಾರು ಜಾತ್ರೆ ಜರುಗಲಿದೆ.ಈ ಜಾನುವಾರು ಜಾತ್ರೆಯಲ್ಲಿ ವಿವಿಧ ತಳಿಯ ಎತ್ತು, ಹೋರಿ, ಆಕಳು, ಎಮ್ಮೆ ಹಾಗೂ ವಿವಿಧ ಜಾನುವಾರುಗಳು ಈ ಮೇಳದಲ್ಲಿ ಪಾಲ್ಗೊಳುತ್ತಿದ್ದು, ಉಳಿದಂತೆ ಕುಸ್ತಿ ಪಂದ್ಯಾವಳಿ ಹಾಗೂ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ  ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಪ್ರವೀಣ ಜೈನ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ಲ, ಡಿ ಎಸ್ ಪಿ ಡಾ. ವೀರಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ,ಬಿ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ನಾನಾಸಾಹೇಬ ಪಾಟೀಲ, ಕಿತ್ತೂರು  ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ,ಸರ್ಕಾರಿ ಅಧಿಕಾರಿಗಳು, ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಬನ್ನಿ ವಿನಿಮಯ ಸೌಹಾರ್ದತೆ, ಸಂಬಂಧ ಬೆಸೆಯಲಿದೆ-ಶಾಸಕ ರಾಜುಗೌಡ ವ್ಯಕ್ತಿಯ ಕಾಣೆ ಠಾಣೆಗೆ ದೂರು * ಮೂರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ, ವಿಚಾರ ಸಂಕಿರಣ, ಕ್ರೀಡಾಕೂಟ ಇಂದಿನಿಂದ  ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲಸ್ವಾತಂತ್ರ್ಯ ಹೋರಾಟದ ಮೊದಲ ಕಿಚ್ಚು ಹೊತ್ತಿಸಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಾಜಿರೈತರು ಹಾಗೂ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನಜನ ಮನ ಸೆಳೆದ ಮಹಿಳೆಯರ ಬೈಕ್ ರ್‍ಯಾಲಿ ವೈಭವದ ‘ಚೆನ್ನಮ್ಮನ ಕಿತ್ತೂರು ಉತ್ಸವ - 2026’  ನಾಳೆಯಿಂದ ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲ ಮೂರು ಕಾಮಗಾರಿಗಳಿಗೆ ಭೂಮಿಪೂಜೆ, ಚಿಕ್ಕುಬಾಗ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್