Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದ್ರಾವಿಡ ಚಳವಳಿಯ ವಿರೋಧದ ನಡುವೆಯೇ ಬೆಳೆದು ಬಂದಿರುವೆ; ಉದಯನಿಧಿ ಸ್ಟಾಲಿನ್

ಚೆನ್ನೈ (ತಮಿಳುನಾಡು):

ಸನಾತನ ಧರ್ಮ ತಮ್ಮ ಹೇಳಿಕೆ ಕುರಿತು ಬರುವ ಯಾವುದೇ ಟೀಕೆಗಳಿಗೂ ತಾವು ಹೆದರುವುದಿಲ್ಲ ಎಂದು ತಮಿಳುನಾಡು ವಿಧಾನಸಭಾ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್​ ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ತಮ್ಮ ಚೊಚ್ಚಲ ಭಾಷಣ ಮಾಡಿದ ಉದಯನಿಧಿ ಸ್ಟಾಲಿನ್​, ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರಿ ಖಂಡನೆ ವ್ಯಕ್ತವಾಗಿತ್ತು.

Advertisement

ತಮ್ಮ ಈ ನಿಲುವಿನ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಹಾಕಿ ಸ್ಪಷ್ಟನೆ ನೀಡಿರುವ ಉದಯನಿಧಿ ಸ್ಟಾಲಿನ್​, ಜನರನ್ನು ವಿಭಜಿಸುವ ಸನಾತನ ನಿರ್ಮೂಲನೆ ಮಾಡಬೇಕು ಎಂಬ ತಮ್ಮ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನು ಅಲ್ಲ. ದ್ರಾವಿಡ ಚಳವಳಿಯ ವಿರೋಧದ ನಡುವೆಯೇ ಬೆಳೆದು ಬಂದಿರುವ ವ್ಯಕ್ತಿ ನಾನು. ಈ ಕುರಿತು ಸಂಕ್ಷಿಪ್ತ ಸ್ಪಷ್ಟೀಕರಣವನ್ನು ನೀಡಲು ಬಯಸುತ್ತೇನೆ.

ಸನಾತನ ಧರ್ಮ ನಿರ್ಮೂಲನೆ ಎಂಬುದು ಮೇಲ್ಜಾತಿ ಮತ್ತು ಕೆಳಜಾತಿ ಎಂದು ವಿಭಜಿಸುವ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂಬದಾಗಿದೆ. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎನ್ನುವುದರ ಅರ್ಥ ಯಾರು ದೇವಸ್ಥಾನಕ್ಕೆ ಹೋಗುವುದು ಬೇಡ ಎಂದು ಅಲ್ಲ. ಬದಲಾಗಿ ಹೋಗಲು ಸಮಾನ ಅವಕಾಶ ಇರಬೇಕು ಎಂಬುದಾಗಿದೆ. ಕೇವಲ ದೇಗುಲ ಮಾತ್ರವಲ್ಲ ಸಮಾಜದಲ್ಲೂ ಸಮಾನ ಅವಕಾಶ ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಪೆರಿಯಾರ್, ಅಂಬೇಡ್ಕರ್, ಅಣ್ಣಾ ಮತ್ತು ಕಲೈನಾರ್ ಅವರು ಹೇಳಿದ ತತ್ವಗಳ ಬಗ್ಗೆಯೂ ನಾನು ಮಾತನಾಡಿದ್ದೇನೆ. ದೇವರಲ್ಲಿ ಯಾರ ನಂಬಿಕೆಗೂ ನಾವು ವಿರೋಧಿಯಲ್ಲ. ಆದರೆ ಅಸಮಾನತೆ ಮತ್ತು ದಬ್ಬಾಳಿಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ನಾವು ಅಸಮಾನತೆ ಮತ್ತು ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ವಳ್ಳುವರ್ ಘೋಷಿಸಿದಂತೆ, ಹುಟ್ಟಿನಿಂದ ಎಲ್ಲಾ ಜೀವಗಳು ಸಮಾನ. ಅದು ನಮ್ಮ ಮಾರ್ಗದರ್ಶಿ ಎಂದು ತಿಳಿಸಿದ್ದಾರೆ. ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್​ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿಲ್ಲ. ಈ ಹಿಂದೆ ಕೂಡ ಅವರು ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕೊರೋನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದರು.

ಇವರ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಈ ಸಂಬಂಧ ಷರತ್ತುಬದ್ಧ ಜಾಮೀನನ್ನು ಉದಯನಿಧಿ ಸ್ಟಾಲಿನ್​ ಪಡೆದಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಉಪನ್ಯಾಸಕ ಬಂಧನಸರ್ಕಾರಿ ಜಾಗದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ: ಶಾಸಕ ಬಾಬಾಸಾಹೇಬ ಪಾಟೀಲವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಜಾಗೃತಿ ಜಾಥಾ: ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಸಿಓ ಪ್ರಶಾಂತ ಸಿ. ಕರೆದಲಿತ ನಾಯಕರ ಅವಹೇಳನ ಸಹಿಸುವುದಿಲ್ಲ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ದಲಿತ ಮುಖಂಡ ಸಂಜಯ ತಳವಲ್ಕರ್!ಮುದ್ದೇಬಿಹಾಳದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅರ್ಥಪೂರ್ಣ ಆಚರಣೆ"ಸತ್ಯ ಸಂಶೋಧನೆಯ ಭಾಗವೇ ಪತ್ರಕರ್ತ : ಡಾ||ಆನಂದ ಮಹಾರಾಜ ಗೋಸಾವಿ,ಎಲ್ ನಿನೋ ಪರಿಣಾಮ ಎದುರಿಸಲು ರಾಜ್ಯ ಸಜ್ಜಾಗಿದೆ: ಈಶ್ವರ ಖಂಡ್ರೆ ವಚನ ಸಾಹಿತ್ಯ ಸಂರಕ್ಷಣೆಗೆ ಡಾ. ಫ.ಗು. ಹಳಕಟ್ಟಿ  ಅವರ ಕೊಡುಗೆ ಅಪಾರ: ಡಾ. ಔದ್ರಾಮಜು.೫ರಂದು ೧೬ನೇ ಶಿವಯೋಗ ಸಮಾಧಿಯ ಮುಕ್ತಾಯ ಸಮಾರಂಭ