LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

25ಕ್ಕೂ ಹೆಚ್ಚು ನಕ್ಸಲರ ಶರಣಾಗತಿ

ರಾಂಚಿ (ಜಾರ್ಖಂಡ್): 

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ 25ಕ್ಕೂ ಹೆಚ್ಚು ನಕ್ಸಲರು ಒಟ್ಟಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತೊರೆದು ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ. ಶರಣಾದ ನಕ್ಸಲರು ಪೊಲೀಸರಿಗೆ ಶಸ್ತ್ರಾಸ್ತ್ರ ಮತ್ತು ಕಾರ್ಟ್ರಿಜ್‌ಗಳನ್ನು ಹಸ್ತಾಂತರಿಸಿದ್ದಾರೆ.

ಶರಣಾದವರಲ್ಲಿ ಸಿಪಿಐ (ಮಾವೋವಾದಿ) ನ 25 ಸದಸ್ಯರು ಮತ್ತು ಜೆಜೆಎಂಪಿ ಉಗ್ರಗಾಮಿ ಸಂಘಟನೆಯ ಇಬ್ಬರು ಸದಸ್ಯರು ಸೇರಿದ್ದಾರೆ. ಈ ಪೈಕಿ ಎಂಟು ನಕ್ಸಲರ ತಲೆಗೆ ಒಟ್ಟು 33 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಲಾಗಿತ್ತು. ಒಟ್ಟಾರೆಯಾಗಿ, ಅವರ ವಿರುದ್ಧ 426 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಸಾರಂಡಾದಲ್ಲಿ ಸಕ್ರಿಯವಾಗಿರುವ ಎರಡು ಡಜನ್‌ಗೂ ಹೆಚ್ಚು ನಕ್ಸಲರು, ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಕಾಡಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ, ಭದ್ರತಾ ಸಂಸ್ಥೆಗಳು ಅವರನ್ನು ಕಾಡಿನಿಂದ ಸುರಕ್ಷಿತವಾಗಿ ಹೊರ ಕರೆತಂದಿದ್ದಾರೆ. ರಾಜ್ಯ ರಚನೆಯಾದ ಬಳಿಕ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಬೆಳಗ್ಗೆ 11 ಗಂಟೆಗೆ ಧುರ್ವಾದಲ್ಲಿರುವ ಜಾರ್ಖಂಡ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಎಲ್ಲಾ ನಕ್ಸಲರು ಅಧಿಕೃತವಾಗಿ ಒಟ್ಟಿಗೆ ಶರಣಾದರು. ಶರಣಾಗತಿಯ ಜೊತೆಗೆ, ನಕ್ಸಲರು ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಹಸ್ತಾಂತರಿಸಿದರು. ಇವುಗಳಲ್ಲಿ ಒಂದು ಲೈಟ್ ಮೆಷಿನ್ ಗನ್ (LMG), ಐದು INSAS ರೈಫಲ್‌ಗಳು, ಒಂಬತ್ತು SLR ರೈಫಲ್‌ಗಳು, ಒಂದು ಬೋಲ್ಟ್-ಆಕ್ಷನ್ ರೈಫಲ್, ಒಂದು ಪಿಸ್ತೂಲ್, 31 ಮ್ಯಾಗಜೀನ್‌ಗಳು ಮತ್ತು 3,000 ಲೈವ್ ರೌಂಡ್‌ಗಳು ಸೇರಿವೆ.

ವಲಯ ಕಮಾಂಡರ್‌ಗಳು 7, ಏರಿಯಾ ಕಮಾಂಡರ್‌ಗಳು 7, ಸಕ್ರಿಯ ಕೇಡರ್ 13 ಸೇರಿದಂತೆ 25ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ.

ಶರಣಾದ ಪ್ರಮುಖ ನಕ್ಸಲೀಯರು: 

ವಂದನಾ ಅಲಿಯಾಸ್ ಶಾಂತಿ, ಸುನೀತಾ ಸರ್ದಾರ್, ಡಂಗುರ್ ಬೋಯಿಪೈ, ಬಸಂತಿ ದೇವಗಂ, ಮುನ್ನಿರಾಮ್ ಮುಂಡಾ, ಅನಿಶಾ ಕೋಡಾ ಅಲಿಯಾಸ್ ರಾಣಿ, ಸಪ್ನಾ ಅಲಿಯಾಸ್ ಸುರು ಕಲುಂಡಿಯಾ, ಸುಸಾರಿ ಅಲಿಯಾಸ್ ದಸ್ಮಾ ಕಲುಂಡಿಯಾ, ಬಿರ್ಸಾ ಕೊಡಾ ಅಲಿಯಾಸ್ ಹರಿಸಿಂಗ್, ನುವಾಸ್, ಬುಮ್ಲಿ ತಿಯು, ನಿತಿ ತ್ರಿಯಂಬಲಿ ಶರಣಾದ ಪ್ರಮುಖ ನಕ್ಸಲೀಯರು. ಇವರೆಲ್ಲರ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಜೆಜೆಎಂಪಿ ಸಂಘಟನೆಯ ಇಬ್ಬರು ಸದಸ್ಯರು ಸಹ ಶರಣಾಗಿದ್ದಾರೆ. ಗುಮ್ಲಾದ ಅಪ್ಪರ್ ಘಾಟ್ ನಿವಾಸಿ ಸಚಿನ್ ಬ್ಯಾಕ್ ಮತ್ತು ಕಲಿಗಾ ನಿವಾಸಿ ಶ್ರವಣ್ ಶರಣಾದ ನಕ್ಸಲರು. ಸಚಿನ್ ಬ್ಯಾಕ್ ಅವರನ್ನು ಬಂಧಿಸಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಅವರ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದರೆ ಶ್ರವಣ್ ಗೋಪೆ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಹಾಗೂ ಸಿಇಟಿ ವಿಶೇಷ ಮಾರ್ಗದರ್ಶನ ಕಾರ್ಯಾಗಾರಸಣ್ಣ ನೀರಾವರಿ ಇಲಾಖೆ ಕಛೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ.೧೨೫ ದಿನಗಳ ಉದ್ಯೋಗ ಖಾತರಿ: ರಾಮದುರ್ಗ ತಾಲೂಕಿನಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆಮಹಾದೇವಪ್ಪ ಯಾದವಾಡ ಅಭಿಮಾನಿ ಬಳಗದಿಂದ ಉಚಿತ ಹೆಲ್ಮೆಟ್ ವಿತರಣೆರಾಮದುರ್ಗದಲ್ಲಿ ಉಚಿತ ಉಚಿತ ಹೃದಯ ಹಾಗೂ ಆರೋಗ್ಯ ತಪಾಸಣಾ ಶಿಬಿರಚಚಡಿ ಏತ ನೀರಾವರಿ ಶೀಘ್ರ  ಯೋಜನೆ ಅನುಷ್ಠಾನಕ್ಕೆ ಅಗ್ರಹಿಸಿ ರೈತರಿಂದ ದಿ. 24 ರಂದು ರಸ್ತಾರೋಖೊ.ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣಕ್ಕೆ ಖಂಡನೆ: ಕಾಗವಾಡದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಶೆಲ್ ನೆಕ್ಸ್ ಪ್ಲೋರರ್ಸ್ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿ ರಿಫ್ರೆಶರ್ ತರಬೇತಿ-೭  ಕಂಚವೀರ ನಗರ ನಿವಾಸಿಗಳ ಗ್ರಾಮ ಪಂ ವಿರುದ್ದ ಆಕ್ರೋಶ