ತಾಳಿಕೋಟೆ, ಪಟ್ಟಣದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಪ್ರತಿನಿತ್ಯ ವಿಶೇಷವಾದ ಪ್ರಸಾದ ರೂಪದಲ್ಲಿ ಭಕ್ತಾಧಿಗಳಿಗಾಗಿ ಪಕ್ವಾನ್ ಭೋಜನ ತಯಾರಿಸಲಾಗುತ್ತಿದ್ದು ಅದರಂತೆ ಈ ಭಾರಿ ಗುರುವಾರರಂದು ಭಕ್ತಾಧಿಗಳು ಮಿರ್ಚಿ ಬಜಿ, ಫಲಾವ್ ರೈಸ್, ಶೇಂಗಾ ಹೋಳಿಗೆ, ಬೊಂದೆ, ಖಡಕ್ ರೊಟ್ಟಿ ಸಾಂಬಾರ ಸವಿದರು.
ಸುಮಾರು ೯ ದಿನಗಳಕಾಲ ಜರುಗಲಿರುವ ಈ ಜಾತ್ರೋತ್ವಕ್ಕೆ ಆಗಮಿಸುವ ಭಕ್ತರಿಗೆ ಪ್ರತಿವರ್ಷವು ಶ್ರೀಮಠದಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು ಈ ಹಿಂದೆ ೫೦ ಸಾವಿರ ಹೂರಣದ ಹೋಳಿಗೆಯನ್ನು ಹಾಗೂ ೧ ಲಕ್ಷ ಪಾನಿಪುರಿಯನ್ನು ಹಾಗೂ ೧ ಲಕ್ಷ ಜೀಲೇಬಿಯನ್ನು ತಯಾರಿಸಿ ಭಕ್ತಾಧಿಗಳಿಗೆ ನೀಡಲಾಗಿತ್ತು ಈ ಭಾರಿ ಪ್ರತಿನಿತ್ಯ ೨೦ ಸಾವಿರ ಜನಕ್ಕೆ ಸಾಲುವಷ್ಟು ಫಕ್ವಾನ್ ಭೋಜನೆಯನ್ನು ತಯಾರಿಸಿ ನೀಡಲಾಗುತ್ತಿದೆ. ಗುರುವಾರರಂದು ಮಿರ್ಚಿ ಬಜಿ ಜೊತೆಗೆ ಫಲಾವು ಶೆಂಗಾದ ಹೋಳಿಗೆಯನ್ನು ಭಕ್ತರ ಅಪೇಕ್ಷೆಯಂತೆ ಭಕ್ತಾಧಿಗಳಿಗೆ ಸಿದ್ದಲಿಂಗಶ್ರೀಗಳು ಉಣಬಡಿಸಿದರು.
ಅದರ ಜೊತೆಗೆ ಈ ಜಾತ್ರೋತ್ಸವದಲ್ಲಿ ಸಜ್ಜಕ, ತುಪ್ಪ, ಗೋದಿ ಹುಗ್ಗಿ, ಅನ್ನ ಸಾಂಬಾರು, ಶೀರಾ, ಬೋಂದಿ, ಅಲ್ಲದೇ ಈ ಭಾಗದ ಪ್ರಸಿದ್ದವಾದ ಜೋಳದ ಹಾಗೂ ಸಜ್ಜಿ ರೋಟ್ಟಿ ವಿವಿಧ ತರಹದ ಪಲ್ಲೆ, ಒಳಗೊಂಡಂತೆ ವಿವಿಧ ಬಗೆಯ ಫಕ್ವಾನ ಭೋಜನೆದಂತೆ ಶ್ರೀಮಠದಿಂದ ಪ್ರಸಾದದ ವ್ಯವಸ್ಥೆ ನಡೆಯಲಿದೆ.
ಇಂದು ಫನ್ನಿರ ಮಸಾಲ ೫೦ ಸಾವಿರ ಚಪಾತಿ
ಶ್ರೀ ಖಾಸ್ಗತೇಶ್ವರ ಮಠದ ಜಾತ್ರೋತ್ಸವ ಅಂಗವಾಗಿ ಶುಕ್ರವಾರರಂದು ಸುಮಾರು ೩೦೦ ಕೆಜಿ ಪನ್ನಿರ ಫನ್ನಿರ ಮಸಾಲಾ, ೫೦ ಸಾವಿರ ಚಪಾತಿ, ಖಡಕ್ ರೊಟಿ, ಅನ್ನ ಸಾಂಬರು ನೀಡಲು ಶ್ರೀಮಠದಿಂದ ನಿರ್ದರಿಸಿದ್ದು ಈ ಪ್ರಸಾದಕ್ಕೆ ಸಂಬಂದಿಸಿ ಈಗಾಗಲೇ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಏಷ್ಟೇ ಭಕ್ತರು ಬಂದರೂ ಕೂಡಾ ಶ್ರೀ ಖಾಸ್ಗತನ, ವಿರಕ್ತಜ್ಜನ ಪ್ರಸಾದಕ್ಕೆ ಕೊರತೆ ಇಲ್ಲದಂತೆ ಸಾಗಿದೆ ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ ಎಲ್ಲವನ್ನು ಭಕ್ತರೇ ನೋಡಿಕೊಳ್ಳುತ್ತಿದ್ದಾರೆ.
ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು
ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ