ನೇಸರಗಿ.ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರ 54 ನೇ ಜನ್ಮ ದಿನದ ನಿಮಿತ್ಯ ಮಂಗಳವಾರದಂದು ಸಂಪಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನo-4 ಶಾಲೆಗೆ ಶಾಸಕರು ಆಗಮಿಸಿ ಮಂಜುನಾಥ ಶಿಡ್ಲೆವ್ವಗೋಳ ಅವರು ದೇಣಿಗೆ ನೀಡಿದ ಜಾಮೆಟ್ರಿ ಬಾಕ್ಸ್ (ಕಂಪಾಸ್) 4 ರಿಂದ 7 ನೇ ತರಗತಿ ವರೆಗೆ ಮತ್ತು1-3 ನೇ ತರಗತಿಯ ಎಲ್ಲಾ ಮಕ್ಕಳಿಗೆ ನೋಟಬುಕ್ ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸಿ ನೆರವೇರಿಸಿದರು.
ನಂತರ ಮಕ್ಕಳಿಗೆ ನೋಟ ಬುಕ್ ಮತ್ತು ಕಂಪಾಸ ಗಳನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಶಾಸಕರನ್ನು ಗ್ರಾಮದ ವತಿಯಿಂದ ಸನ್ಮಾನ ಮಾಡಿ ಶುಭಾಶಯಗಳನ್ನು ಕೋರಿದರು. ಮಕ್ಕಳಿಗೆ ದೇಣಿಗೆ ನೀಡಿದ ಮಂಜುನಾಥ ಶಿಡ್ಲೆವ್ವಗೋಳ ದಂಪತಿ ಸಮೇತ ಶಾಲೆ ಪರವಾಗಿ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಎಸ್ ಡಿ ಗಂಗಣ್ಣವರ, ಮಾಜಿ ಗ್ರಾ ಪಂ ಅಧ್ಯಕ್ಷ ಬಸವರಾಜ್ ನೇಸರಗಿ ಎಸ್ ಎಸ್ ಉಳ್ಳಾಗಡ್ಡಿ, ಸುರೇಶ ಹತ್ತಿ, ಸುರೇಶ ಕುರಬರ, ಯಮನಪ್ಪ ತಳವಾರ, ಸೋಮಲಿಂಗ ಕೆಳಗೇರಿ, ಶ್ರೀಶೈಲ ಹಿರೇಮಠ, ಪ್ರಧಾನ ಗುರುಗಳಾದ ಇಂಗಳೇ, ಎಲ್ಲ ಶಾಲೆಗಳ ಪಾಲಕರು, ಪೋಷಕರ, ಮುಖಂಡರು, ಕಾರ್ಯಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.