Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಳಮೀಸಲಾತಿ ಜಾರಿಗೊಳಿಸಿ  ಕೆಎಂಎಫ್ ನೇಮಕಾತಿ ಮಾಡಿ  : ಎಲ್ ಮಾರೆಣ್ಣ ಒತ್ತಾಯ 

ಬಳ್ಳಾರಿ, ಜು. 22: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಕೆಎಂಎಫ್)ದಲ್ಲಿ ನಡೆಯುತ್ತಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಿ ನೇಮಕಾತಿಯನ್ನು ನಡೆಸಬೇಕು ಇಲ್ಲದಿದ್ದರೆ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಎಂದು ಕೆಪಿಸಿಸಿ ಸದಸ್ಯ ಎಲ್ ಮಾರಣ್ಣ ಒತ್ತಾಯಿಸಿದರು 
 ಈ ಕುರಿತು ಅವರಿಂದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ,  ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸದೇ ಮುಂದುವರಿಸಿರುವುದು ಸರ್ಕಾರದ ಆದೇಶ ಹಾಗೂ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ ಅವರು ನಮ್ಮ ಮನವಿಯನ್ನು ಕೆಎಂಎಫ್ ನಿರ್ಲಕ್ಷಿಸಿದಲ್ಲಿ ಸಂಘಟನೆ ವತಿಯಿಂದ lರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಮಾದರ ಮಹಾಸಭಾ (ರಿ) ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಮಾರಣ್ಣ ಎಚ್ಚರಿಕೆ ನೀಡಿದರು.
ಜೂನ್ 30 ರಂದು ನಡೆದ 353ನೇ ಆಡಳಿತ ಮಂಡಳಿ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಾಗಿದ್ದು, ಬಳಿಕ ಜುಲೈ 20ರಂದು ನಡೆದ ನೇಮಕಾತಿ ಉಪಸಮಿತಿ ಸಭೆಯಲ್ಲಿ 1:5 ಅನುಪಾತದಲ್ಲಿ ನೇಮಕಾತಿ ಆದೇಶ ಹೊರಡಿಸುವ ಕುರಿತು ನಿರ್ಧಾರ ಮಾಡಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಪರಿಗಣಿಸದಿರುವುದು ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಈಗಾಗಲೇ ನಡೆದಿರುವ ನೇಮಕಾತಿ ಆದೇಶ ಹಾಗೂ ಸಂಬಂಧಿತ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ತಳವಾರ, ಸಿದ್ದೇಶ್, ಗಂಗಾಧರ್, ಹುಲುಗಪ್ಪ, ಶ್ರೀನಿವಾಸ ಬಂಡಾರಿ, ಗೋವರ್ಧನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಮಕ್ಕಳಿಗೆ ಕಂಪಾಸ, ನೋಟಬುಕ್ ವಿತರಿಸಿದ ಶಾಸಕ ಪಾಟೀಲ ನೇಗಿನಹಾಳ ಗ್ರಾಮದಲ್ಲಿ  ಪಾಟೀಲರಿಂದ  ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಮುಂದಿನ ಎರಡು ವರ್ಷದಲ್ಲಿ  ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಬಾಬಾಸಾಹೇಬ ಪಾಟೀಲ ಹೊಸ ಸಂಕಲ್ಪಪರಿಸರ ಸ್ನೇಹಿ ಗಣೇಶೋತ್ಸವ ಅಭಿಯಾನಜಿಲ್ಲೆಯಲ್ಲಿ ಮುಂಗಾರು ಕ್ಷೀಣ: ರೈತರ ನೆರವಿಗೆ ಜಿಲ್ಲಾಡಳಿತ ಸದಾ ಸಿದ್ದಒಳಮೀಸಲಾತಿ ಜಾರಿಗೊಳಿಸಿ  ಕೆಎಂಎಫ್ ನೇಮಕಾತಿ ಮಾಡಿ  : ಎಲ್ ಮಾರೆಣ್ಣ ಒತ್ತಾಯ ಅಧಿಕಾರದಿಂದ ವಿದ್ಯುತ್ ದುರ್ಬಳಕೆ, ಸಾರ್ವಜನಿಕರ ಕೆಲಸಗಳಿಗೆ ನಿರ್ಲಕ್ಷ್ಯ : ಶಂಕರ ಬಂಡೆ  ಗ್ರಾಮಸ್ಥರ ಆಕ್ರೋಶಮಾಸಿಕ ವೇತನವನ್ನು ಹೆಚ್ಚಿಸಿ : ಹೊರಗುತ್ತಿಗೆ ನೌಕರರಿಂದ ಡಿ ಎಚ್ ಓ ಗೆ  ಮನವಿ ಶಿಸ್ತು, ಶ್ರಮ ಮತ್ತು ಸಂಕಲ್ಪವೇ ಯಶಸ್ಸಿನ ಮೆಟ್ಟಿಲುಗಳು : ಜಯಪ್ರಕಾಶ್  ಜೆ.ಗುಪ್ತಾಕುರುಗೋಡು ತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಭೇಟಿ: ವಿಬಿ-ಜಿ ರಾಮ್-ಜಿ ಕಾಮಗಾರಿಗಳ ಪರಿಶೀಲನೆ