Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾಸಿಕ ವೇತನವನ್ನು ಹೆಚ್ಚಿಸಿ : ಹೊರಗುತ್ತಿಗೆ ನೌಕರರಿಂದ ಡಿ ಎಚ್ ಓ ಗೆ  ಮನವಿ 

ಬಳ್ಳಾರಿ, ಜು. 22:: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ರಾಜ್ಯ ಸರ್ಕಾರವು 22-05-2026 ರಂದು ನಿಗದಿಪಡಿಸಿರುವ ವೇತನವನ್ನು ತಕ್ಷಣದಿಂದಲೇ ಜಾರಿಗೊಳಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಳ್ಳಾರಿ ಜಿಲ್ಲೆ ಹಾಗೂ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಡಾಟಾ ಆಪರೇಟರ್‌ಗಳು, ಅಂಬುಲೆನ್ಸ್ ಚಾಲಕರು, ಅಡುಗೆಯವರು, ಅಟೆಂಡರ್‌ಗಳು, ರಾತ್ರಿ ಕಾವಲುಗಾರರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. 
ಆದರೆ ಪ್ರಸ್ತುತ ನೀಡುತ್ತಿರುವ ವೇತನವು ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ, ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯ ಮೂಲಕ 22-05-2026ರಂದು ಹೊರಡಿಸಿರುವ ವೇತನ ಪರಿಷ್ಕರಣೆ ಆದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಜಾರಿಗೊಳಿಸಿ, ಹೊರಗುತ್ತಿಗೆ ಸಿಬ್ಬಂದಿಗೆ ಸರ್ಕಾರ ನಿಗದಿಪಡಿಸಿರುವ ವೇತನವನ್ನು ನೀಡುವಂತೆ ಸಂಘವು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕರ ಸಂಘದ ಅಧ್ಯಕ್ಷ ಲಕ್ಷ್ಮಣ ನೇತೃತ್ವದಲ್ಲಿ ಮಲ್ಲಿಕಾರ್ಜುನ ಯಾಳ್ಪಿ, ಸಿದ್ದೇಶ್ ಮುಂಡರಗಿ, ಶರಣಪ್ಪ ಬಂಡಿಹಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಮಕ್ಕಳಿಗೆ ಕಂಪಾಸ, ನೋಟಬುಕ್ ವಿತರಿಸಿದ ಶಾಸಕ ಪಾಟೀಲ ನೇಗಿನಹಾಳ ಗ್ರಾಮದಲ್ಲಿ  ಪಾಟೀಲರಿಂದ  ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಮುಂದಿನ ಎರಡು ವರ್ಷದಲ್ಲಿ  ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಬಾಬಾಸಾಹೇಬ ಪಾಟೀಲ ಹೊಸ ಸಂಕಲ್ಪಪರಿಸರ ಸ್ನೇಹಿ ಗಣೇಶೋತ್ಸವ ಅಭಿಯಾನಜಿಲ್ಲೆಯಲ್ಲಿ ಮುಂಗಾರು ಕ್ಷೀಣ: ರೈತರ ನೆರವಿಗೆ ಜಿಲ್ಲಾಡಳಿತ ಸದಾ ಸಿದ್ದಒಳಮೀಸಲಾತಿ ಜಾರಿಗೊಳಿಸಿ  ಕೆಎಂಎಫ್ ನೇಮಕಾತಿ ಮಾಡಿ  : ಎಲ್ ಮಾರೆಣ್ಣ ಒತ್ತಾಯ ಅಧಿಕಾರದಿಂದ ವಿದ್ಯುತ್ ದುರ್ಬಳಕೆ, ಸಾರ್ವಜನಿಕರ ಕೆಲಸಗಳಿಗೆ ನಿರ್ಲಕ್ಷ್ಯ : ಶಂಕರ ಬಂಡೆ  ಗ್ರಾಮಸ್ಥರ ಆಕ್ರೋಶಮಾಸಿಕ ವೇತನವನ್ನು ಹೆಚ್ಚಿಸಿ : ಹೊರಗುತ್ತಿಗೆ ನೌಕರರಿಂದ ಡಿ ಎಚ್ ಓ ಗೆ  ಮನವಿ ಶಿಸ್ತು, ಶ್ರಮ ಮತ್ತು ಸಂಕಲ್ಪವೇ ಯಶಸ್ಸಿನ ಮೆಟ್ಟಿಲುಗಳು : ಜಯಪ್ರಕಾಶ್  ಜೆ.ಗುಪ್ತಾಕುರುಗೋಡು ತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಭೇಟಿ: ವಿಬಿ-ಜಿ ರಾಮ್-ಜಿ ಕಾಮಗಾರಿಗಳ ಪರಿಶೀಲನೆ