Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುದ್ದೇಬಿಹಾಳ:

ಮುದ್ದೇಬಿಹಾಳ: ಜೆಡಿಎಸ್ ಪಕ್ಷಕ್ಕೆ ಸೀಮಿತವಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ತಳಹಂತದ ಚುನಾವಣೆಯಿಂದ ವಿಧಾನಸಭಾ ಚುನಾವಣೆಯವರೆಗೂ ಪಕ್ಷವನ್ನು ಸಂಘಟಿಸಿ ಮುದ್ದೇಬಿಹಾಳ ಕ್ಷೇತ್ರವನ್ನು ಕಾಂಗ್ರೇಸ್ ತೆಕ್ಕೆಗೆ ತೆಗೆದುಕೊಂಡ ಹಿರಿಮೆ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರದು. ಪ್ರತಿ ಬಾರಿಯೂ ಅವರಿಗೆ ಮಂತ್ರಿ ಸ್ಥಾನ ನೀಡದೆ ಅಪಮಾನ ಮಾಡುತ್ತಿರುವುದಾದರೂ ಯಾಕೇ ಎಂಬ ಪ್ರಶ್ನೇ ಇದೀಗ ಉದ್ಭವವಾಗಿದೆ. ಸಧ್ಯ ಅವರಿಗೆ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ಕೊಡಲೇಬೇಕು ಎಂದು  ಸರಕಾರದ ಪಂಚ ಗ್ಯಾರಂಟಿ ಯೋಜನೆ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಹೇಳಿದರು.

 ಪಟ್ಟಣದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೇಗಳು ಹಾಗೂ ವಿವಿಧ ವ್ಯಾಪಾರಸ್ಥರು ಗಣ್ಯರು   ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ  ಶುಕ್ರವಾರ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ಬಂದ ಕರೆ ಹಾಗೂ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
 ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಾಗರಬೆಟ್ಟ ಏತ ನಿರಾವರಿ, ಚಿಮ್ಮಲಗಿ ಏತನಿರಾವರಿ ಸೇರಿದಂತೆ ಅನೇಕ ಸಂಪೂರ್ಣ ನಿರಾವರಿಯೋಜನೆ ಅನುಷ್ಠಾನಗೊಳಿಸಿದ ಕೀರ್ತಿ ನಾಡಗೌಡರಿಗೆ ಸಲ್ಲುತ್ತದೆ ಅವರ ಹಿರಿತನ ಹಾಗೂ ಅನುಭವವನ್ನು ಗುರ್ತಿಸಿಯಾದರೂ ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಬೇಕು ಒಂದು ವೇಳೆ ನಾಡಗೌಡ ಅವರಿಗೆ ಸಚಿವಸ್ಥಾನ ನೀಡದಿದ್ದರೆ ಕ್ಷೇತ್ರದಲ್ಲಿ ಪಕ್ಷದ ನಾನಾ ಹುದ್ದೆಯಲ್ಲಿರುವ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜಿನಾಮೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಈ ವೇಳೆ ಮುಖಂಡ ಸುರೇಶಗೌಡ ಪಾಟೀಲ ಅವರು ಮಾತನಾಡಿ ೪೦ ವರ್ಷದಂದ ಶಾಂತಿಯುತವಾಗಿ ಪಕ್ಷಕ್ಕೆ ಯಾವುದೇ ದಕ್ಕೆಯಾಗದಂತೆ ಪಕ್ಷ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿರುವ ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕೆರೆಯ ಕಟ್ಟೆ ಒಡೆದಂತಾಗುತ್ತದೆ  ಕಳೇದ ೪೦ ವರ್ಷಗಳಿಂದ ಸೌಮ್ಯ ಹಾಗೂ ಸನ್ನಡತೆಗೆ ಹೆಸರಾದ ಅಪ್ಪಾಜಿ ನಾಡಗೌಡರ ಅವರನ್ನು ಕಡೆಗಣಿಸುತ್ತಿರುವುದು ಮತಕ್ಷೇತ್ರದ ಜನರಿಗೆ ತುಂಬಾ ನೋವವನ್ನುಂಟು ಮಾಡಿದೆ ಕಾರಣ ಈ ಬಾರಿಯಾದರೂ ನಾಡಗೌಡ ಅವರನ್ನು ಸಚಿವ ಸ್ಥಾನ ನೀಡಿ ಗೌರವಿಸಬೇಕು ಇಲ್ಲದಿದ್ದರೆ ಈ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ಅಸ್ಥಿತ್ವ ಕಳೆದುಕೊಳ್ಳಲಿದೆ ಎಂಬುವುದು ಕಾಂಗ್ರೇಸ್ ಪಕ್ಷದ ಹೈಕಮಾಂಡ್ ತಿಳಿದುಕೊಳ್ಳಬೇಕಿದೆ ಎಂದರು

Advertisement

 ಮುಖಂಡ ವಾಯ್ ಎಚ್ ವಿಜಯಕರ ಮಾತನಾಡಿ ರಾಜ್ಯದ ಕಾಂಗ್ರೇಸ್ ಪಕ್ಷದ ಎಲ್ಲಾ ಶಾಸಕರಲ್ಲಿಯೂ ನಮ್ಮ ಸಿ.ಎಸ್.ಅಪ್ಪಾಜಿ ನಾಡಗೌಡ ಅವರು ತಮ್ಮ ೪೦ ವರ್ಷದ ರಾಜಕಾರಣದಲ್ಲಿ ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದ ರಾಜಕಾರಣಿಯಾಗಿದ್ದಾರೆ. ಅಲ್ಲದೇ ಪ್ರತಿ ಬಾರಿಯೂ ಸಚಿವ ಸ್ಥಾನದ ಪಟ್ಟಿಯಲ್ಲಿದ್ದ ಇವರನ್ನು ಪಕ್ಷದ ನಿಲುವಿಗಾಗಿ ಕೊನೆಯ ಗಳಿಗೆಯಲ್ಲಿ ಕೈಬಿಟ್ಟರೂ ಪಕ್ಷದ ವಿರುದ್ಧ ಯಾವುದೇ ಮಾತು ಹೇಳದೇ ಪಕ್ಷಕ್ಕೆ ಪ್ರಾಮಾಣಿಕವಾಗಿರುವ ಇವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಪಕ್ಷದ ಸರ್ವ ಸದಸ್ಯರೂ ರಾಜಿನಾಮೆ ನೀಡಬೇಕಾಗುತ್ತದೆ  ಎಂದರು.


ಚುನಾವಣೆಯಲ್ಲಿ ಮಾತ್ರ ಚುನಾವಣೆಯನ್ನು ಮಾಡಿ ನಂತರ ದಿನಗಳಲ್ಲಿ ಎಲ್ಲರೂ ನಮ್ಮವರೇ ಎಂಬ ಭಾವನೆಯನ್ನು ಹೊಂದಿದವರು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಎಂಬುವುದಕ್ಕೆ ಮುದ್ದೇಬಿಹಾಳ ಪಟ್ಟಣದ ಜನ ಇಂದು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ತಮ್ಮ ಒಂದು ದಿನದ ವ್ಯಾಪಾರ ವಹಿವಾಟನ್ನು ಬದಿಗಿಟ್ಟಿರುವುದೇ ಸಾಕ್ಷಿಯಾಗಿದೆ. ಇಂತಹ ಅಜಾತಶತ್ರು ವ್ಯಕ್ತಿಗೆ ಸಚಿವ ಸ್ಥಾನ ದೊರಕದಿದ್ದರೆ ಕ್ಷೇತ್ರದಲ್ಲಿ ಪಕ್ಷಕ್ಕೆ ಯಾವುದೇ ಮರ್ಯಾದೆ ಇರುವುದಿಲ್ಲ ಎಂದು ಪಕ್ಷದ ಯುವ ಮುಖಂಡ ಶರಣಸಬು ಚಲವಾದಿ ಹೇಳಿದರು.

ಕ್ಷೇತ್ರದಲ್ಲಿ ೪೦ ವರ್ಷಗಳಿಂದ ರಾಜಕಾರಣದ ಅನುಭವ ಹೊಂದಿರುವ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಸಚಿವಗಿರಿ ಅಗತ್ಯವಿಲ್ಲ. ಮುದ್ದೇಬಿಹಾಳ ಕ್ಷೇತ್ರದ ದೀನ ದಲಿತರಿಗೆ, ಸಾಮಾನ್ಯ ಕಾರ್ಯಕರ್ತರಿಗೆ ಸಚಿವಸ್ಥಾನ ಬೇಕಾಗಿದೆ. ಅಪ್ಪಾಜಿ ನಾಡಗೌಡ ಅವರು ರಾಜಕೀಯ ಅನುಭವದಿಂದ ಈಗಾಗಲೇ ಸಚಿವರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಉಳಿವಿಕೆಗಾಗಿ ಸಚಿವಗಿರಿ ಅಗತ್ಯವಾಗಿದೆ ಎಂಬುವುದು ಪಕ್ಷದ ವರಿಷ್ಠರು ತಿಳಿದುಕೊಳ್ಳಬೇಕಿದೆ ಎಂದ ಪಕ್ಷದ ಯುವ ಮುಖಂಡ ತಿಪ್ಪಣ್ಣ ದೊಡ್ಡಮನಿ ಹೇಳಿದರು.

 

ಪಟ್ಟಣದಲ್ಲಿ ಶಾಸಕ ಅಪ್ಪಾಜಿ ಸಿ.ಎಸ್.ನಾಡಗಡೌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ನಡೆದ ಸ್ವಯಂ ಘೋಷಿದ ಮುದ್ದೇಬಿಹಾಳ ಬಂದ್ ಕರೆಗೆ ಬೆಂಬಲಿಸಿ ವಿವಿಧ ಮುಖಂಡರು ಹಾಗೂ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಮಾತನಾಡಿದರು.


ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ ಜಿಲ್ಲೆಯಲ್ಲಿಯೇ ಸರಳ ಸಜ್ಜನಿಕ ರಾಜಕಾರಣಿ ಮಾಡುತ್ತಾ ಬಂದು ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಶ್ರಮಿಸಿದ ಶಾಸಕ ಅಪ್ಪಾಜಿ ನಾಡಗೌಡ ಅವರು. ಇಂತಹ ವ್ಯಕ್ತಿಗೆ ಸಾಕಷ್ಟು ಬಾರಿ ಸಚಿವ ಸ್ಥಾನದಿಂದ ವಂಚಿತರಾಗುವಂತೆ ಕಾಣದ ಕೈಗಳು ಕೆಲಸ ಮಾಡುತ್ತಾ ಬಂದಿವೆ. ಇದರಿಂದ ಕ್ಷೇತ್ರದ ಜನರಿಗೆ ಪಕ್ಷದ ಮೇಲೆ ವಿಶ್ವಾಸವಿಲ್ಲದಂತಾಗಿದೆ.  ಕಳೇದ ಬಾರಿಯೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರೂ ಕೂಡ ಈ ಬಾರಿ ಅಪ್ಪಾಜಿ ನಾಡಗೌಡರನ್ನು ಗೆಲ್ಲಿಸಿದರೇ ನಮ್ಮ ಕ್ಯಾಬಿನೇಟನ್ಲ್ಲಿ ಉನ್ನತ ಹುದ್ದೇಯ ಮಂತ್ರಿಯಾಗಿ ಮಾಡುತ್ತೇನೆ ಎಂದು ಹೇಳಿದ ಆಸ್ವಾಸನೆ ಕೂಡ ನೆರವೇರಿಸಲಿಲ್ಲ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಜತೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರವರು ಹಾಗೂ ಅಪ್ಪಾಜಿ ನಾಡಗೌಡರು ಸಮಕಾಲಿನ ರಾಜಕಾರಣಿಗಳು ಜತೆಗೆ ಒಳ್ಳೆಯ ಸ್ನೇಹಿತರು ಕೂಡ ಇದ್ದಾರೆ ಕಾರಣ ಕೂಡಲೇ ನಾಡಗೌಡರಿಗೆ ಸಚಿವ ಸ್ಥಾನವನ್ನು ನೀಡಿ ಗೌರವಿಸಬೇಕು ಇದರಿಂದ ಮತಕ್ಷೇತ್ರದಲ್ಲಿ  ಕಾಂಗ್ರೇಸ್ ಪಕ್ಷಕ್ಕೆ ಮತ್ತಷ್ಟು ಆನೆಬಲಬಂದಂತಾಗುತ್ತದೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ತಲಹದಿಯಿಂದ ಸಂಘಟಿಸಿ ಭದ್ರಬುನಾದಿ ಕ್ಷೇತ್ರವನ್ನು ಮಾಡಿದ ಹಿರಿಮೆ ಶಾಸಕ ನಾಡಗೌಡ ಅವರಿಗೆ ಸಲ್ಲುತ್ತದೆ. ಇಂತಹ ಸರಳಸಜ್ಜನಿಕ ವ್ಯಕ್ತಿಗೆ ಸಂಪುಟದಲ್ಲಿ ಸ್ಥಾನಮಾನ ನೀಡದಿರುವುದು ವಪರ್ಯಾಸದ ಸಂಗತಿಯಾಗಿದೆ. ರಾಜ್ಯ ಸರಕಾರದ ಎರಡನೇ ಸಂಪುಟ ಪಟ್ಟಿಯಿಂದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರನ್ನು ಕೈಬಿಟ್ಟರೆ ನಾವು ಆತ್ಮಹತ್ಯಗೂ ಮುಂದಾಗಬೇಕಾಗುತ್ತದೆ ಎಂದು ಅಕ್ಷತಾ ಚಲವಾದಿ ಹಾಗೂ ಸರಸ್ವತಿ ಪೀರಾಪೂರ ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಮೆರವಣಿಗೆಯು ಇಂದಿರಾ ವೃತ್ತ, ಗ್ರಾಮದೇವತೆ ಕಟ್ಟೆ ಮೂಲಕ ಬಸವೇಶ್ವರ ವೃತ್ತದ ವರೆಗೂ ಶಾಂತಿಯುತವಾಗಿ ನಡೆಸಲಾಯಿತು.
ಯಶಸ್ವಿಯಾದ ಸ್ವಯಂ ಘೋಷಿತ ಬಂದ್:
ಮುದ್ದೇಬಿಹಾಳ ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ ಇತ್ತಿಚಿಗಷ್ಟೆ ಕ್ಷೇತ್ರವನ್ನು ಬಂದ್ ಮಾಡುವ ಮೂಲಕ ಪಕ್ಷದ ಹೈಕಮಾಂಡ್‌ಗೆ ಕ್ಷೇತ್ರದ ಕಾರ್ಯಕರ್ತರ ನಿಲುವನ್ನು ತೋರಿಸಬೇಕು ಎಂಬ ಕರೆಗೆ ಬೆಂಬಲಿಸಿದ ಪಟ್ಟಣದ ಎಲ್ಲ ವ್ಯಾಪಾರಸ್ಥರು, ಗಣ್ಯ ಉದ್ಯಮಿದಾರರು ಹಾಗೂ ಸಂಘ ಸಂಸ್ಥೆಯವರು ಶುಕ್ರವಾರ ಮುದ್ದೇಬಿಹಾಳ ಪಟ್ಟಣವನ್ನು ಬಂದ್ ಮಾಡಿ ಕಾಂಗ್ರೇಸ್ ಪಕ್ಷಕ್ಕೆ ಪಕ್ಷಾತೀತವಾಗಿ ಅಪ್ಪಾಜಿ ಸಿ.ಎಸ್.ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡೊಣ ಎಂದು ಸ್ವಯಂ ಘೋಷಿಸಿದ್ದರು. ಅದರಂತೆ ಶುಕ್ರವಾರ ಪಟ್ಟಣದ ಎಲ್ಲ ವ್ಯಾಪಾರಸ್ಥರೂ ತಮ್ಮ ಒಂದು ದಿನದ ವ್ಯಾಪಾ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ ಮಾಡುವ ಮೂಲಕ ಸುಮಾರು ೪ರಿಂದ ೫ ಸಾವಿರ ಜನ ಕಾರ್ಯಕತೃಉ, ಮುಖಂಡರು ವಿವಿಧ ಸಂಶಗಟನೆಗಳ ಮುಖಂಡರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಪ್ರತಿಭಟನಾ ಮೇರವಣಿಗೆಯಲ್ಲಿ ಬಾಗವಹಿಸುವ ಮೂಲಕ ಯಶಸ್ವಿಗೊಳಿಸಿದರು.
ಪ್ರಯಾಣಿಕರ ಪರದಾಟ:
ಬುಧವಾರವೇ ಬಂದ್ ಘೋಷಣೆಯಾದ ಹಿನ್ನೆಲೆ ಸಾರಿಗೆ ಇಲಾಖೆ ವ್ಯವಸ್ಥಾಪಕರು ಮುನ್ನೆಚ್ಚರಿಕೆ ಅಂಗವಾಗಿ ಬಸ್ ಸಂಚಾರವನ್ನು ಪಟ್ಟಣದ ಒವ ಪ್ರವೇಶವನ್ನು ಮಾತ್ರ ಸ್ಥಗಿತಗೊಳಿಸಿ ಗ್ರಾಮೀಣ ಭಾಗದಿಂದ ಬರು ಪ್ರಯಾಣಿಕರನ್ನು ಪಟ್ಟಣದ ಹೊರವಲಯದಲ್ಲಿ ಇಳಿದುಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಿದರು. 
ಟಾಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ:
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಪಕ್ಷದ ಮುಖಂಡರು ಮಾತನಾಡುತ್ತಿರುವ ಸಂದರ್ಭದಲ್ಲಿ ಆಲಿಮಟ್ಟಿ ರಸ್ತೆಯಲ್ಲಿ ಯುವಕರು ಟಾಯರ್‌ಗೆ ಬೆಂಕಿ ಹಚ್ಚುವ ಮೂಲಕ ನಾಡಗೌಡ ಅವರಿಗೆ ಸಚಿವ ಸ್ಥಾನ ಸಿಗಲೇಬೇಕೆಂದು ಸಿಎಂ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಒತ್ತಾಯಿಸಿದರು. ಆದರೆ ಈ ಘಟನೆಯಲ್ಲಿ ಯಾವುದೇ ರೀತಿಯ ಹಾನಿಕರವಾಗದಂತೆ ಪೋಲಿಸರು ಎಚ್ಚರವಹಿಸಿದರು.
ಪೋಲಿಸ್ ಬೀಗಿಬಂದೂಬಸ್ತ್:
ಮುದ್ದೇಬಿಹಾಳ ಪಟ್ಟಣದ ಶುಕ್ರವಾರ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಸಿಪಿಐ ಮೊಹ್ಮ್ ಫಸಿವುದ್ದೀನ್ ಹಾಗೂ ಪಿಎಸ್‌ಐ ಸಂಜಯ ತಿಪ್ಪರಡ್ಡಿ ಅವರು, ಕೂಡಗಿ, ನಿಡಗುಂದಿ, ಬ.ಬಾಗೇವಾಡಿ, ತಾಳಿಕೋಟಿ ಠಾಣೆಯಿಂದ ಹೆಚ್ಚುವರಿ ಪೋಲಿಸ್ ಸಿಬ್ಬಂದಿಗಳನ್ನು ಹಾಗೂ ವಿಜಯಪುರ ಜಿಲ್ಲೆಯಿಂದ ಶಷತ್ರ ಮೀಸಲುಪಡೆಯಿಂದ ಶುಕ್ರವಾರ ಬೀಗಿಬಂದೂಬಸ್ತ್ ಒದಗಿಸಿದ್ದರು. 

ತಾಳಿಕೋಟಿಯ ಮುಖಂಡರಾದ ಬಿ ಎಸ್ ಪಾಟೀಲ(ಯಾಳಗಿ)ಬಾಪುರಾಯ ದೇಸಾಯಿ(ಹಡಗಲಿ), ಬಿ.ಕೆ.ಬಿರಾದಾರ, ಸಂಗನಗೌಡ ಬಿರಾದರ(ಜಿಟಿಸಿ), ಕಾಮರಾಜ ಬಿರಾದಾರ, ಶಿವಪ್ಪಗೌಡ ತಾತರಡ್ಡಿ, ಮಲ್ಲಿಕಾರ್ಜುನ ಅಪರಾಧಿ, ಸಿ.ಎಲ್.ಬಿರಾದರ, ಎಸ್.ಎಸ್.ಮಾಲಗತ್ತಿ, ಶ್ರೀಶೈಲ ಮರೋಳ, ರಾಜು ಕೊಂಗಿ, ಬಸವರಾಜ ಇಸ್ಲಾಂಪೂರ, ಆಶೋಕ ಚೆಟ್ಟೆರ, ಮೈಬೂಬ ಗೊಳಸಂಗಿ, ಶಿವಗೌಡ ತಾಳಿಕೋಟಿ, ಪ್ರದೀಪ ನಾಡಗೌಡ, ಸದು ಮಠ, ಸಂಗನಗೌಡ ಪಾಟೀಲ, ಕೆ.ಎಸ್.ಪಾಟೀಲ, ಬಾಪುಗೌಡ ಪೀರಾಪೂರ, ಪಿಂಟು ಸಾಲಿಮನಿ, ಅಮರೇಶ ಗೂಳಿ, ಬಸವರಾಜ ಭಜಂತ್ರಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿದ್ದರು.

 

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST