ತಾಳಿಕೋಟೆ, ಐತಿಹಾಸಿಕ ನಗರ ತಾಳಿಕೋಟೆ ಪಟ್ಟಣದಲ್ಲಿರುವ ಖಾಸ್ಗತೇಶ್ವರ ಮಠದ ಕೀರ್ತಿ ರಾಜ್ಯದಾದ್ಯಂತ ಬೆಳಗುತ್ತಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ನಾಯಕ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಹೇಳಿದರು.
ಪಟ್ಟಣದ ಐತಿಹಾಸಿಕ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬುಧವಾರರಂದು ಭೇಟಿ ನೀಡಿ ಶ್ರೀ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರಿಂದ ಆಶೀರ್ವಾದ ಪಡೆದುಕೊಂಡು ಅವರು ಅಜ್ಜನ ಜಾತ್ರೆಯ ಕುರಿತು ಮಾತನಾಡಿದರು.
ಪ್ರಸಾದದ ವ್ಯವಸ್ಥೆ ವಿಶಿಷ್ಟತೆ ಕುರಿತು ಅನಿಸಿಕೆ ಹಂಚಿಕೊಂಡ ಅವರು, ಭಕ್ತರಿಗೆ ಶೆಂಗಾ ಹೋಳಿಗೆ, ಸಜ್ಜಕ, ಜಾಮೂನು, ಮಿರ್ಚಿ ಬಜಿ ಒಳಗೊಂಡು ಅನೇಕ ವಿಶಿಷ್ಠತೆಯ ಪ್ರಸಾದವನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು. ಇಡೀ ತಾಳಿಕೋಟೆ ನಗರ ಅಜ್ಜನ ಜಾತ್ರೆಯ ಸಡಗರದಲ್ಲಿ ಮಿಂದೇಳುತ್ತಿದೆ ಎಂದು ಹೇಳಿದ ಅವರು ಶ್ರೀಮಠದಿಂದ ಕೈಗೊಳ್ಳುವ ಪ್ರತಿ ಕಾರ್ಯಗಳಿಗೆ ನಾನು ಸದಾ ಬೆನ್ನೇಲುಬಾಗಿ ಶ್ರೀಗಳ ಜೊತೆಗೆ ನಿಲ್ಲಲಿದ್ದೇನೆ ಎಂದು ಹೇಳಿದರು.
ಇದೇ ಸಮಯದಲ್ಲಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಬಸನಗೌಡ ಪಾಟೀಲ(ಯಡಿಯಾಪೂರ) ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಮಠದ ಉಸ್ತುವಾರಿ ವೇ.ಮುರಘೇಶ ವಿರಕ್ತಮಠ, ಶರಗೌಡ ಕರಿಭಾವಿ, ಶಳ್ಳಗಿ ರೆಡ್ಡಿ(ನಾಯ್ಕಲ್), ಬಸನಗೌಡ ಮಾಲಿಪಾಟೀಲ, ಅಭಿಷೇಕ ಇದ್ದರು.
---
ಶ್ರೀ ಖಾಸ್ಗತ ಮಠವು ಭಕ್ತರ ಮಠವಾಗಿದೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಆದ್ಯಾತ್ಮೀಕ ಶಕ್ತಿಯ ಪರಂಪರೆಯನ್ನು ಹೊಂದಿದ ಮಠವಾಗಿದೆ ಈ ಜಾತ್ರೋತ್ಸವಕ್ಕೆ ಪ್ರತಿವರ್ಷ ಆಗಮಿಸಿ ಶ್ರೀಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ದರ್ಶನವನ್ನು ಪಡೆದುಕೊಂಡಿದ್ದೇನೆ. ಶ್ರೀಮಠದ ವತಿಯಿಂದ ಪ್ರಸಾದದಲ್ಲಿ ವಿಶಿಷ್ಠತೆ ಒಳಗೊಂಡಿರುವದು ಎಲ್ಲ ಭಕ್ತರಿಗೂ ಸಂತಸ ತಂದಿದೆ.
ಬಸನಗೌಡ ಪಾಟೀಲ(ಯಡಿಯಾಪೂರ)
ಜಿಪಂ ಮಾಜಿ ಅಧ್ಯಕ್ಷ