Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಲೇರಿಯಾ, ಡೆಂಘೀ ಪ್ರಕರಣಗಳಿಗೆ ಅಗತ್ಯ ಕ್ರಮಕೈಗೊಳ್ಳಿ

ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸುರಕ್ಷತಾ ಅಧಿಕಾರಿಗಳ ಸಭೆಯಲ್ಲಿ ಡಾ.ಜಗದೀಶ ಜಿಂಗಿ ಸೂಚನೆ

ಹಸಿರು ಕ್ರಾಂತಿ ವರದಿ ಬೆಳಗಾವಿ
ಸೊಳ್ಳೆಗಳಿಂದ ಹರಡಬಹುದಾದ ಮಲೇರಿಯಾ, ಡೆಂಘೀ, ಚಿಕುನಗುನ್ಯಾ ಹಾಗೂ ಜೆಇ(ಮೆದುಳು ಜ್ವರ) ಪ್ರಕರಣಗಳ ಕುರಿತು ಚರ್ಚಿಸಲು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಗದೀಶ ಜಿಂಗಿ ಅಧ್ಯಕ್ಷತೆಯಲ್ಲಿ ಬೆಳಗಾವಿ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ತಾಲೂಕು ವ್ಯಾಪ್ತಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸಭೆ ಬುಧವಾರ ಜರುಗಿತು.


ಜಿಲ್ಲೆಯಲ್ಲಿ ಜನವರಿ-ಜೂನ್‌ ರವರೆಗೆ 12 ಮಲೇರಿಯಾ, 44 ಡೆಂಘೀ, 13 ಚಿಕುನಗುನ್ಯಾ, ಹಾಗೂ 8 ಸಂಶಯಾಸ್ಪದ ಜೆಇ ಪ್ರಕರಣಗಳು ವರದಿಯಾಗಿ ಯಾವುದೇ ಮರಣದ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಬೆಳಗಾವಿ ತಾಲೂಕಿನಲ್ಲಿ ಜೂನ್‌ ಅಂತ್ಯದವರೆಗೆ ಬೆಳಗಾವಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 7 ಮಲೇರಿಯಾ, 15 ಡೆಂಘೀ, 10 ಚಿಕುನಗುನ್ಯಾ ಹಾಗೂ 6 ಸಂಶಯಾಸ್ಪದ ಮೆದುಳು ಜ್ವರ (ಜೆಇ) ಪ್ರಕರಣಗಳಲ್ಲಿ ಹೊರ ರಾಜ್ಯದ್ದಾಗಿರುತ್ತದೆ. ಶೇ.50 ರಷ್ಟು ಪ್ರಕರಣಗಳು ಬೆಳಗಾವಿ ತಾಲೂಕಿನಲ್ಲಿ ವರದಿಯಾಗಿದ್ದು, ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ರೋಗ ಹರಡುವ ಕುರಿತು ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಸಿಬ್ಬಂದಿ ಹಾಗೂ ವೈದ್ಯರೊಂದಿಗೆ ಚರ್ಚಿಸಿ ರೋಗ ಉಲ್ಬಣವಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.


ಎಲ್ಲ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ತಮ್ಮ ಕಾರ್ಯ ಕ್ಷಮತೆ ಅರಿತು ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸಿ ಯಾವುದೇ ಮರಣದ ಪ್ರಕರಣಗಳು ವರದಿಯಾಗದಂತೆ ನೋಡಿಕೊಳ್ಳಲು ಹಾಗೂ ವೈದ್ಯರು ಸೂಚಿಸಿದ ಎಲ್ಲ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ ಶೀಘ್ರ ಪತ್ತೆ ಹಚ್ಚಲು ಕ್ರಮವಹಿಸುವಂತೆ ಪ್ರಯೋಗಾಲಯ ತಂತ್ರಜ್ಞರಿಗೆ ತಿಳಿಸಲಾಯಿತು.
ಮಲೇರಿಯಾ ಹೆಣ್ಣು ಅನಾಪೇಲಿಸ್ ಸೊಳ್ಳೆ, ಡೆಂಘೀ ಹಾಗೂ ಚಿಕುನಗುನ್ಯಾ ಈಡಿಸ್‌ ಸೊಳ್ಳೆ, ಜೆಇ ವೈಶ್ನವಿ ಕ್ಯೂಲೆಕ್ಷ ಜಾತಿಯ ಸೊಳ್ಳೆ ಕಚ್ಚುವ ಮೂಲಕ ಪ್ರಸಾರವಾಗುತ್ತದೆ. ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ತಮ್ಮ ಮನೆಯ ಒಳಗೆ ಹಾಗೂ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ನೀರಿನ ಪರಿಕರಗಳನ್ನು, ತೊಟ್ಟೆಗಳನ್ನು ಪರಿಶೀಲಿಸಿ(CHECK), ಸ್ವಚ್ಛಗೊಳಿಸಿ (CLEAN) ಭದ್ರವಾಗಿ ಮುಚ್ಚಿಡಲು (CLOSE), ಕ್ರಮವಹಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಹಾಗೂ ವಲಯ ಕೀಟಶಾಸ್ತ್ರಜ್ಞರು ಹಾಜರಿದ್ದು, ಲಾರ್ವಾ ಸಮೀಕ್ಷೆ ಸೊಳ್ಳೆಗಳ ನಾಸಪಡಿಸುವಿಕೆ ಮತ್ತು ಕೀಟಗಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಹಾಗೂ ಜಿಲ್ಲಾಮಟ್ಟದ ಮೇಲ್ವಿಚಾರಕ ಸಿಬ್ಬಂದಿ ಹಾಜರಾಗಿದ್ದರು.


ಕ್ಷೇತ್ರಮಟ್ಟದಲ್ಲಿ ಎಲ್ಲ ಜ್ವರದ ಪ್ರಕರಣಗಳನ್ನು ಸಮೀಕ್ಷೆ ಕೈಗೊಂಡು ಸಂಶಯಾಸ್ಪದ ಜ್ವರದ ಪ್ರಕರಣಗಳನ್ನು ಗುರುತಿಸಿ ಸಮಂಜಸವಾದ ಪರೀಕ್ಷೆಗೆ ಒಳಪಡಿಸಿ ಶೀಘ್ರ ಪತ್ತೆ ಹಚ್ಚಿ, ತ್ವರಿತವಾಗಿ ಚಿಕಿತ್ಸೆಗೆ ಒಳಪಡಿಸಬೇಕು. ಯಾವುದೇ ಸಾವು, ನೋವುಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಬೇಕು.ಸರಿಯಾದ ಸಮಯಕ್ಕೆ ಮೇಲಾಧಿಕಾರಿಗಳಿಗೂ ಹಾಗೂ ಜಿಲ್ಲಾ ಕಚೇರಿಗಳಿಗೆ ವರದಿ ಮಾಡಬೇಕು.
-ಡಾ.ಜಗದೀಶ ಜಿಂಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಖಾಸ್ಗತನ ಮಿರ್ಚಿಬಜಿ-ಪಲಾವ್ ಪ್ರಸಾದ ಸವಿದ ಸದ್ಭಕ್ತರು"ರಾಷ್ಟ್ರಧ್ವಜವು ನಾಗರಿಕರ ದೇಶಭಕ್ತಿಯನ್ನು ಬಲಪಡಿಸುತ್ತದೆ"ಮಂದಿರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ವೇಗ: ಗ್ರಾಮಸ್ಥರೊಂದಿಗೆ ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ ದಕ ಮಾದರಿಯಲ್ಲಿ ಉಕ ದೇವಾಲಯಗಳ ಅಭಿವೃದ್ಧಿಪಡಿಸಿಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಬೋಧಿಸಲು ಮನವಿಮಲೇರಿಯಾ, ಡೆಂಘೀ ಪ್ರಕರಣಗಳಿಗೆ ಅಗತ್ಯ ಕ್ರಮಕೈಗೊಳ್ಳಿವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ : ಆಕಾಶ ನಂದಗಾಂವನಾಳೆ ಸುರೇಬಾನ-ಮನಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಸಾಂಸ್ಕೃತಿಕ ಕ್ರೀಡೆ, ಇ ಎಲ್ ಸಿ. ರೇಂಜರ್ ಮತ್ತು ರೋವರ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭರೈತರಲ್ಲಿ ಪರ್ಯಾಯ ಬೆಳೆ ಬೆಳೆಯಲು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳದೆಹಲಿ ಪೊಲೀಸರು ಪ್ರತಿಭಟನೆ ನಿರತ ವಿದ್ಯಾರ್ಥಿ ಗಳ ಮೇಲೆ   ಶಾಕ್ ಬಟನ್, ಪೆಲ್ಲೆಟ್ ಗನ್ ಬಳಸಿ ದೌರ್ಜನ್ಯ:   ಕ್ರಮ ವಿರುದ್ಧ ಹೊಸಪೇಟೆಯಲ್ಲಿ ಎಐಡಿಎಸ್‌ಒ ಆಕ್ರೋಶ*