ಯಾದವ್ ವಿರುದ್ಧ ಬಿಎನ್ಎಸ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಕರಿಮುದ್ದೀನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿಯಾಗಿದ್ದಾರೆ.
ಮಾರ್ಚ್ 1 ರಂದು, ಬಾಲಕಿ ಗಣಿತ ಪರೀಕ್ಷೆ ಬರೆಯಲು ಶಾಲೆಗೆ ಹೋಗಿದ್ದಾಗ, ಯಾದವ್ ಆಕೆಯನ್ನು ಸಹಾಯ ಮಾಡುವ ನೆಪದಲ್ಲಿ ಕೋಣೆಗೆ ಕರೆದೊಯ್ದು ನಂತರ ಅತ್ಯಾಚಾರ ಎಸಗಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆತ ಆಕೆಗೆ ಬೆದರಿಕೆ ಹಾಕಿದ್ದ.
ಆಕೆ ಕೆಲ ಸಮಯದವರೆಗೆ ನಡೆದಿರುವ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಆಕೆ ಭಯದಿಂದ ಇರುತ್ತಿದ್ದಳು. ಇದನ್ನು ಗಮನಿಸಿದ ಪೋಷಕರು ಪದೇ ಪದೇ ವಿಚಾರಿಸಿದಾಗ ಆಕೆ ಬಾಯ್ಬಿಟ್ಟಿದ್ದಾಳೆ. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಾಗಿದೆ.