ರಾಮದುರ್ಗ: ಪಟ್ಟಣದ ಸ್ಟೇಟ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಐಶ್ವರ್ಯ ಬಿಳಿಗಿರಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾಮಟ್ಟದ ಸಂಸ್ಕೃತಿಕ ಸ್ಪರ್ಧೆಗಳಲ್ಲಿ ಇಂಗ್ಲಿಷ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಹನುಮವ್ವ ಕೈನಕಟ್ಟಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಅನಿತಾ ಪಮ್ಮಾರ್ ತೃತೀಯ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಲಕ್ಷ್ಮಿ ಮಣಿಕಟ್ಟಿ ತೃತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ದಿವ್ಯಾ ಲಮಾಣಿ ಹಾಗೂ ಹರ್ಷಿತಾ ಬೆಳ್ಳೇರಿಮಠ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಬಿವಿವಿ ಸಂಘದ ಕಾರ್ಯಧ್ಯಕ್ಷ ವೀರಣ್ಣ ಚರಂತಿವ್ಮಠ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಹಾಂತೇಶ್ ಶೆಟ್ಟರ, ಶಾಲಾ ಆಡಳಿತ ಮಂಡಳಿಯ ಶಿಕ್ಷಣ ವಿಸ್ತಿರ್ಣಾಧಿಕಾರಿ ಸುರೇಶ್ ಹೆಗಡೆ, ಪದನಿಮಿತ್ತ ಕಾರ್ಯದರ್ಶಿ ಕೆ.ಎಚ್. ಹೊಸೂರ, ಪ್ರಾಚಾರ್ಯ ಎ.ಎಚ್, ಬರಗಿ, ಉಪನ್ಯಾಸಕರು ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.