Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಮಕ್ಕಳ ಪ್ರತಿಭೆ ಅನಾವರಣಕ್ಕೆ ‘ಪ್ರತಿಭಾ ಕಾರಂಜಿ’ ಉತ್ತಮ ವೇದಿಕೆ: ಆರ್.ವೈ. ಮೇತ್ರಿ


ರಾಮದುರ್ಗ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಒಂದು ಮಹತ್ವದ ವೇದಿಕೆಯಾಗಿದೆ. ಈ ವೇದಿಕೆಯ ಮೂಲಕ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹ ನೀಡುವುದೇ ಶಿಕ್ಷಣ ಇಲಾಖೆಯ  ಉದ್ದೇಶವಾಗಿದೆ ಎಂದು ಶಿಕ್ಷಣ ಸಂಯೋಕ ಆರ್.ವೈ. ಮೇತ್ರಿ ಹೇಳಿದರು.
ತಾಲೂಕಿನ ಬಟಕುರ್ಕಿಯ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಬಟಕುರ್ಕಿ ವಲಯದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಕಲಿಕಾ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ವಿದ್ಯಾಭಾರತಿ ಶಿಕ್ಷಣ ಸಮಿತಿಯ ಸದಸ್ಯ ಸುರೇಶಗೌಡ ಡುಳ್ಳೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. ಅವರ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಹಾಗೂ ತರಬೇತಿ ನೀಡುವ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. 
ವಿ.ಬಿ.ಎಸ್ ಶಿಕ್ಷಣ ಸಂಸ್ಥೆಯ ಸದಸ್ಯರಾದ ಬಸವರಾಜ ಪ್ಯಾಟಿಗೌಡ್ರ, ನಾರಾಯಣ ಡುಳ್ಳೊಳ್ಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಹನಮಂತ ಲಕ್ಕನ್ನವರ, ವಿರುಪಾಕ್ಷಿ ಮುದಕವಿ, ಶಿಕ್ಷಣ ಸಂಯೋಜಕರಾದ ಐ.ಎ ಶೇಕ್, ಕೆ.ವೈ.ಪಾಟೀಲ, ಟಿ.ಜಿ.ಕರದಿನ, ಎಂ.ಐ.ಜಿರಂಕಳಿ, ಎಸ್.ವಿ.ಯರಗುದ್ರಿ, ಅಶೋಕ ಗಾಣಿಗ, ಬಿ.ಬಿ.ಸಂಗನ್ನವರ, ಜಿ.ಎಚ್.ಮುದಕವಿ, ಡಾ. ವಾಗಮೋರಿ ಸೇರಿದಂತ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಐ.ಡಿ.ಡಂಗೆನ್ನವರ ಪ್ರಾಸ್ತಾವಿಕ ಮಾತನಾಡಿದರು. ಎನ್.ಟಿ.ಹಳ್ಳಿಕೇರಿ ಸ್ವಾಗತಿಸಿದರು. ವಿ.ಎಲ್.ಬೂದಿಹಾಳ ನಿರೂಪಿಸಿದರು. ಎಲ್.ಎಸ್.ಯರಗಣವಿ ವಂದಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉಗಾರ–ಐನಾಪೂರ ಬಾರಿಗಡ್ಡೆ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನದಲ್ಲಿ ಶಾಸಕ ರಾಜು ಕಾಗೆ ಭೂಮಿ ಪೂಜೆಮೊಬೈಲ್ ವ್ಯಸನದಿಂದ ದೂರವಿದ್ದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಅಡಿವೇಶ ಇಟಗಿ ಕರೆಇಟಗಿ ಗ್ರಾಮದ ದ್ಯಾಮವ್ವ ಗುಡಿಗೆ ಅನುದಾನ ನೀಡುವ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್ಮಕ್ಕಳ ಪ್ರತಿಭೆ ಅನಾವರಣಕ್ಕೆ ‘ಪ್ರತಿಭಾ ಕಾರಂಜಿ’ ಉತ್ತಮ ವೇದಿಕೆ: ಆರ್.ವೈ. ಮೇತ್ರಿರಾಮದುರ್ಗದಲ್ಲಿ ಸಂಭ್ರಮದ ದೇವಲ ಮಹರ್ಷಿ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಿಭಾಗ ಮಟ್ಟಕ್ಕೆ ಆಯ್ಕೆಯಾದ ಐಶ್ವರ್ಯ ಬಿಳಿಗಿರಿಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಮರ್ಥವಾಗಿ ಕಾರ್ಯನಿರ್ವಹಿಸುವ ಶಕ್ತಿ ಹೊಂದಿದ್ದಾರೆ: ಡಾ. ಪ್ರಜ್ಞಾ ಮತ್ತಿಹಳ್ಳಿವಿಶ್ವಗುರು ಬಸವಣ್ಣನವರ ಅವಮಾನ ಖಂಡಿಸಿ ರವಿ ಹಂಜ್ ಪ್ರತಿಕೃತಿ ದಹಿಸಿ ಆಕ್ರೋಶ/ ಲೇಖಕ, ಪ್ರಕಾಶಕರ ಬಂಧನಕ್ಕೆ ಆಗ್ರಹ; ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಾದರ್ಶಗಳಿಗೆ ಧಕ್ಕೆ ತರುವವರನ್ನು ಸಹಿಸಲ್ಲ: ಪ್ರಭು ಚನ್ನಬಸವ ಸ್ವಾಮೀಜಿಬಸವ ಮಂಟಪ ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿ ಪ್ರತಿಭಟನೆಮೇಳದಿಂದ ವ್ಯವಹಾರ ಕುಶಲತೆಯ ಮಹತ್ವ ಅರಿಯಲು ಸಾಧ್ಯ-ವಿರಕ್ತಮಠ