Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ರಾಮದುರ್ಗದಲ್ಲಿ ಸಂಭ್ರಮದ ದೇವಲ ಮಹರ್ಷಿ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವ


ರಾಮದುರ್ಗ: ದೇವಾಂಗ ಸಮಾಜದ ಮೂಲ ಪುರುಷ, ಶಿವನ ಪಾಲನೇತ್ರದಿಂದ ಜನಿಸಿದ ಶ್ರೀದೇವಲ ಮಹರ್ಷಿ ಅವರ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವ ಸಮಾರಂಭವು ಪಟ್ಟಣದ ನೇಕಾರಪೇಟೆಯಲ್ಲಿ ಶನಿವಾರ ಸಂಭ್ರಮದಿಂದ ಜರುಗಿತು.
ಉತ್ಸವದ ಪ್ರಯುಕ್ತ ದೇವಾಂಗ ಸಮಾಜದ ಬಾಂಧವರು ಬಾಣಕಾರಪೇಟೆ ಈಶ್ವರ ದೇವಸ್ಥಾನದಿಂದ ಮತ್ತು ರಾಧಾಪೂರ ಪೇಟೆಯ ಶ್ರೀಬನಶಂಕರಿ ದೇವಸ್ಥಾನದಿಂದ ಶ್ರೀದೇವಲ ಮಹರ್ಷಿಯವರ ಆಳೆತ್ತರದ ಪ್ರತಿಮೆಯನ್ನು ವಾಹನದಲ್ಲಿ ಪ್ರತಿಷ್ಠಾಪಿಸಿ, ಪ್ರತ್ಯೇಕ ಪಾಲಿಕೆ ಉತ್ಸವ ಮೆರವಣಿಗೆ ನೇಕಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ಜರುಗಿತು. ಮಹಿಳೆಯರ ಡೊಳ್ಳು ಕುಣಿತ, ಕರಡಿ ಮಜಲು ವಾಧ್ಯಗಳೊಂದಿಗೆ ಸುಮಂಗಲೆಯರ ಆರತಿಯು ಮೆರವಣಿಗೆ ಕಳೆ ಹೆಚ್ಚಿಸಿತು.
ತೊಟ್ಟಿಲೋತ್ಸವ: 
ರಾಧಾಪೂರ ಪೇಟೆಯ ಶ್ರೀದೇವಲ ಮಹರ್ಷಿ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ರುದ್ರಾಭಿಷೇಕ, ಅಲಂಕಾರ ಪೂಜೆ ನೆರವೇರಿಸಿದ ನಂತರ ಶ್ರೀದೇವಲ ಮಹರ್ಷಿ ಉತ್ಸವ ಮೂರ್ತಿಯನ್ನು ತೊಟ್ಟಿಲಕ್ಕೆ ಹಾಕಿದ ಸುಮಂಗಲೆಯರು ಸಾಂಪ್ರದಾಯಿಕ ಪದಗಳನ್ನು ಹಾಡುವ ಮೂಲಕ ದೇವಾಂಗನೆಂದು ನಾಮಕರಣ ಮಾಡಿ ತೊಟ್ಟಿಲೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ಕುಬೇರ ಗರಡಿಮನಿ, ಉಪಾಧ್ಯಕ್ಷ ರವಿ ಕರಡಿಗುಡ್ಡ, ಸಮಾಜ ಮುಖಂಡರಾದ ಈರಪ್ಪಜ್ಜ ಕೊಣ್ಣೂರ, ಎಸ್.ಎಂ. ಮುರುಡಿ, ಏಕನಾಥ ಕೊಣ್ಣೂರ, ಪಿ.ಆರ್. ಸೂಳಿಭಾವಿ, ಶಿವಾನಂದ ಬಳ್ಳಾರಿ, ಮಾರುತಿ ಚಂದರಗಿ, ನೇಮಣ್ಣ ಆರಿ, ಆನಂದಪ್ಪ ಶಿರಸಂಗಿ, ಬಸಪ್ಪ ಕರಿಚನ್ನವರ, ನಾರಾಯಣ ಹೂಲಿ, ರಾಜು ಕೊಳದೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉಗಾರ–ಐನಾಪೂರ ಬಾರಿಗಡ್ಡೆ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನದಲ್ಲಿ ಶಾಸಕ ರಾಜು ಕಾಗೆ ಭೂಮಿ ಪೂಜೆಮೊಬೈಲ್ ವ್ಯಸನದಿಂದ ದೂರವಿದ್ದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಅಡಿವೇಶ ಇಟಗಿ ಕರೆಇಟಗಿ ಗ್ರಾಮದ ದ್ಯಾಮವ್ವ ಗುಡಿಗೆ ಅನುದಾನ ನೀಡುವ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್ಮಕ್ಕಳ ಪ್ರತಿಭೆ ಅನಾವರಣಕ್ಕೆ ‘ಪ್ರತಿಭಾ ಕಾರಂಜಿ’ ಉತ್ತಮ ವೇದಿಕೆ: ಆರ್.ವೈ. ಮೇತ್ರಿರಾಮದುರ್ಗದಲ್ಲಿ ಸಂಭ್ರಮದ ದೇವಲ ಮಹರ್ಷಿ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಿಭಾಗ ಮಟ್ಟಕ್ಕೆ ಆಯ್ಕೆಯಾದ ಐಶ್ವರ್ಯ ಬಿಳಿಗಿರಿಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಮರ್ಥವಾಗಿ ಕಾರ್ಯನಿರ್ವಹಿಸುವ ಶಕ್ತಿ ಹೊಂದಿದ್ದಾರೆ: ಡಾ. ಪ್ರಜ್ಞಾ ಮತ್ತಿಹಳ್ಳಿವಿಶ್ವಗುರು ಬಸವಣ್ಣನವರ ಅವಮಾನ ಖಂಡಿಸಿ ರವಿ ಹಂಜ್ ಪ್ರತಿಕೃತಿ ದಹಿಸಿ ಆಕ್ರೋಶ/ ಲೇಖಕ, ಪ್ರಕಾಶಕರ ಬಂಧನಕ್ಕೆ ಆಗ್ರಹ; ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಾದರ್ಶಗಳಿಗೆ ಧಕ್ಕೆ ತರುವವರನ್ನು ಸಹಿಸಲ್ಲ: ಪ್ರಭು ಚನ್ನಬಸವ ಸ್ವಾಮೀಜಿಬಸವ ಮಂಟಪ ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿ ಪ್ರತಿಭಟನೆಮೇಳದಿಂದ ವ್ಯವಹಾರ ಕುಶಲತೆಯ ಮಹತ್ವ ಅರಿಯಲು ಸಾಧ್ಯ-ವಿರಕ್ತಮಠ