LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಸಹಸ್ರಾರು  ಕೋಟಿ ವಂಚನೆ ಹಗರಣ ಆರೋಪಿ ಶಿವಾನಂದ  ನಿಲಣ್ಣವರ, 10 ದಿನ ಸಿ ಐ ಡಿ ಕಷ್ಟಡಿಗೆ

ಬೆಳಗಾವಿ : ಬಹುಕೋಟಿ ಹಗರಣದ ಕಿಂಗ್ ಪಿನ್  ಶಿವಾನಂದ ನೀಲಣ್ಣವರ ಅವನನ್ನು ಬೆಳಗಾವಿ ಜಿಲ್ಲಾ  ನ್ಯಾಯಾಲಯ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ವಿಚಾರಣೆ ವೇಳೆ ಕೋರ್ಟ್ ಹಾಲ್ ನಲ್ಲಿ  ಹಾಗೂ ಆರೋಪಿ ನಡುವೆ ಮಹತ್ವದ ಸಂಭಾಷಣೆ ನಡೆದಿದ್ದು, ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.
ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ ಕೆ.ಎನ್. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಸುಮಾರು 35 ಸಾವಿರ ಹೂಡಿಕೆದಾರರ 1 ಸಾವಿರ ಕೋಟಿ ರೂಪಾಯಿ ಹಗರಣ ಇದಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ತೆರಳಿ ತನಿಖೆ ನಡೆಸಬೇಕಿರುವುದರಿಂದ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರಿದ್ದರು. 
ಇದೇ ವೇಳೆ ಆರೋಪಿ ತನಗೆ ಶುಗರ್ ಮತ್ತು ಹಾರ್ಟ್ ಪ್ರಾಬ್ಲಮ್ ಇರುವುದಾಗಿ ಹೇಳಿಕೊಂಡಾಗ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರು ಸೂಚಿಸಿದರು. ಇನ್ನು "35 ಸಾವಿರ ಜನರಿಗೆ ಹಣ ಬೇಕಿಲ್ ನಾನು ಬೇಕಾಗಿದ್ದೇನೆ" ಎಂದ ಆರೋಪಿಗೆ ತಿರುಗೇಟು ನೀಡಿದ ನ್ಯಾಯಾಧೀಶರು, "ಅಮಾಯಕ ಜನರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ, ಸಾಕಷ್ಟು ಜನ ಹಣ ತಗೊಂಡು ಓಡಿಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ, ಧರ್ಮೋ ರಕ್ಷತಿ ರಕ್ಷಿತಃ” ಎಂದು ಶ್ಲೋಕದ ಉದಾಹರಣೆ ನೀಡಿ ಬುದ್ಧಿವಾದ ಹೇಳಿದರು. ಕೊನೆಗೆ ಕೋರ್ಟ್ ಹಾಲ ನಿಂದ  ಹೊರಬರುತ್ತಿದ್ದಂತೆ ಸಹೋದರನನ್ನು ಕಂಡು ಶಿವಾನಂದ ನೀಲಣ್ಣವರ ಕಣ್ಣೀರು ಹಾಕಿದ್ದಾರೆ.
ಸಿಐಡಿ ಡಿಜಿಪಿ ಭೀಮಾಶಂಕರ ಗುಳೇದ ನೇತೃತ್ವದ ತಂಡ ಈಗಾಗಲೇ ಪ್ರಾಥಮಿಕ ತನಿಖೆ ಮುಗಿಸಿದ್ದು, ಮಾಳಮಾರುತಿ ಪೊಲೀಸರು ಕಲೆಹಾಕಿದ್ದ ಎಲ್ಲಾ ಮಹತ್ವದ ದಾಖಲೆಗಳೊಂದಿಗೆ ಆರೋಪಿಯನ್ನು ಸೋಮವಾರ  ಬೆಂಗಳೂರಿಗೆ ಕರೆದೊಯ್ದು ತೀವು ವಿಚಾರಣೆ ನಡೆಸಲಿದೆ.
ಹೂಡಿಕೆದಾರರ ಹಣ ನೀಡಲು ರೆಡಿ ಇದ್ದಾರೆ ಎಂಬ ಆರೋಪಿ ಪರ ವಕೀಲರ ವಾದವನ್ನು ಸದ್ಯಕ್ಕೆ, ಆಲಿಸಲು ನ್ಯಾಯಾಧೀಶರು ನಿರಾಕರಿಸಿದ್ದರು,  ಇನ್ನೊಂದೆಡೆ, ಆರೋಪಿ ಪರ ವಕೀಲರಾದ ಮಂಜುನಾಥ ಜಿ.ಎಲ್. ಅವರು, ಇದು ಕೇವಲ ತಾಂತ್ರಿಕ ಕಾರಣಗಳಿಗಾಗಿ ಆರ್ಬಿಐ ಗೈಡ್ಲೈನ್ಸ್ ಉಲ್ಲಂಘನೆಯಾಗಿದೆ ಎಂದು ಪೊಲೀಸರೆ  ದಾಖಲಿಸಿರುವ ಸುಮೋಟೋ ಕೇಸ್ ಆಗಿದೆ. ಗ್ರಾಹಕರು ಯಾರೂ ದೂರು ನೀಡಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ. ವಿರೋಧಿಗಳು ತಪ್ಪು ಮಾಹಿತಿ ಹರಡುತ್ತಿದ್ದು ಈಗಾಗಲೇ ಬೇಲ್ಗಾಗಿ ಅರ್ಜಿ ಸಲ್ಲಿಸಿದ್ದೇವೆ" ಎಂದು ಶಿವಾನಂದ ನೀಲಣ್ಣವರ ಪರ ವಕೀಲರು ಹೇಳಿದರು.
   ಆರೋಪಿ ಶಿವಾನಂದ ನಿಲಣ್ಣವರ  ಆತನಿಗೆ ನ್ಯಾಯಾಧೀಷರು  ಅರೋಗ್ಯ ರಕ್ಷಣೆ ನೀಡಿ ತನಿಖೆ ಮಾಡಲು ಅದೇಶಿಸಿದ್ದಾರೆ ಎಂದು ವಕೀಲರು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗ್ರಹಿತ ಅಧಿಕೃತ ಲಿಂಗಾಯತ ಧರ್ಮದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಹಂಚಲಾಗುವುದು : ಡಾ.ಎಸ್ ಎಮ್ ಜಾಮದಾರಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮಹಾತ್ಮ ಗಾಂಧಿ ಪುತ್ಥಳಿಗೆ ಪೂಜೆಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರುಕೆಪಿಎಸ್‌ಸಿ ಅಕ್ರಮ ಆರೋಪದ ಬಿಸಿ: ಪರೀಕ್ಷಾ ನಿಯಂತ್ರಕರ ಎತ್ತಂಗಡಿ, ಆಯೋಗಕ್ಕೆ ಹೊಸ ಐಎಎಸ್ ಅಧಿಕಾರಿಗಳ ಸರಪಳಿ