LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನನ್ನ  ತೇಜೋವಧೆಗೆ ರಾಜಕೀಯ ಷಡ್ಯಂತ್ರ : ಎಚ್‌.ಎಂ. ಗುರುಮೂರ್ತಿ ಆರೋಪ

ಬಳ್ಳಾರಿ, ಜು.24:: ಜಿಲ್ಲೆಯ ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ ಸರ್ವೇ ಸಂಖ್ಯೆ 51ಎ1/ಎ2 ಹಾಗೂ 51/21 ಜಮೀನಿನಲ್ಲಿ ಅಕ್ರಮ ಗ್ರಾವೆಲ್ ಸಾಗಾಣಿಕೆ ನಡೆಸಿದ ಆರೋಪದಲ್ಲಿ ನನ್ನ  ವಿರುದ್ಧ  ದಾಖಲಾಗಿರುವ ಪ್ರಕರಣ ಸಂಪೂರ್ಣ ಸುಳ್ಳಾಗಿದ್ದು, ರಾಜಕೀಯ ದುರುದ್ದೇಶದಿಂದ ತಮ್ಮ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ  ಎಂದು ದಲಿತ ಮುಖಂಡ ಹಾಗೂ ಮಾಜಿ  ಗ್ರಾಮ ಪಂಚಾಯತ್ ಸದಸ್ಯ  ನಾಯಕ ಎಚ್‌.ಎಂ. ಗುರುಮೂರ್ತಿ ಆರೋಪಿಸಿದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಗುರುವಾರದಂದು  ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2026ರ ಮೇ 19ರಂದು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಏಳುಬೆಂಚಿ ಗ್ರಾಮದ ಬ್ಯಾಳೆ ಶರಣಪ್ಪ, ಬ್ಯಾಳೆ ಮುದಿಯಪ್ಪ, ವೇಣಿ ವೀರಾಪುರ ಗ್ರಾಮದ ಕೆ. ಕರಿಬಸಪ್ಪ, ತಿಮ್ಮಲಾಪುರ ಗ್ರಾಮದ ಗೋಸುವಾಳ ಗೂಳೆಪ್ಪ ಹಾಗೂ ಸ್ವಾರೆ ಬನವರಾಜ ಸೇರಿದಂತೆ ಇನ್ನಿತರರು  ನನ್ನ  ವಿರುದ್ಧ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸುವುದರ ಜೊತೆಗೆ ಮಾಧ್ಯಮಗಳಲ್ಲಿಯೂ ತಪ್ಪು ಪ್ರಚಾರ ನಡೆಸಿದ್ದಾರೆ 
 ನನ್ನ  ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು,  ಜಮೀನಿನಲ್ಲಿ ತಾವು ಯಾವುದೇ ರೀತಿಯ ಗ್ರಾವೆಲ್ ಗಣಿಗಾರಿಕೆ ಅಥವಾ ಸಾಗಾಣಿಕೆ ನಡೆಸಿಲ್ಲ ಅದೆಲ್ಲವೂ ಕಟ್ಟುಕತೆಯಾಗಿದೆ ಎಂದರು.
 ಅವರು ತಿಳಿಸಿರುವ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ಅದರಲ್ಲಿ ಇನ್ನೆಷ್ಟು ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಆರೋಪಿತರೆ ರಾತ್ರೋರಾತ್ರಿ ತನ್ನಗಟ್ಟಲೆ ಗ್ರಾವೆಲ್  ಕಳ್ಳ ಸಾಗಣೆ ಮಾಡಿರುತ್ತಾರೆ ಅವರ ಮೇಲೆ ಏನು ಕ್ರಮವಾಗದಂತೆ ಈ ರೀತಿಯಾಗಿ ನನ್ನ ಮೇಲೆ ಗೂಬೆ  ಕೂರಿಸುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು 
ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಮ್ಮನ್ನು ನಿರ್ದೋಷಿ ಎಂದು ಘೋಷಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ ಗುರುಮೂರ್ತಿ , ತನ್ನ  ವಿರುದ್ಧ ಸುಳ್ಳು ಆರೋಪ ಮಾಡಿ ಮಾನಹಾನಿಗೆ ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ರೀತಿಯಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದರು 
ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ, ವೆಂಕಟೇಶ್, ಕೆಂಚಪ್ಪ, ಶೇಖ್ ವಲಿ, ಮೊಹಮ್ಮದ್ ಅಲಿ, ಬಸವರಾಜ್, ದನಪ್ಪ, ಬಾಳಪ್ಪ ಹಾಗೂ ನಳಿನ್ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಯುಜಿ ಫಲಿತಾಂಶದಲ್ಲಿ ಒಎಂಆರ್ ವ್ಯತ್ಯಾಸ: ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗಳುಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿ