LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Belagavi

ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀ

ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಹಲವು ಜನಪರ ಕಾರ್ಯಕ್ರಮ ನೆರವೇರಿಸಿದ ಭಕ್ತಸಮೂಹ

ಘಟಪ್ರಭಾ :- ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪರಮಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ 42 ನೇ ಜನ್ಮದಿನದ ಪ್ರಯುಕ್ತ ಅವರ ಭಕ್ತಸಮೂಹ, ಅನೇಕ ಆಸ್ಪತ್ರೆ  ಹಾಗೂ ಸಂಘ ಸಂಸ್ಥೆಗಳು ಪ್ರಯೋಜಕತ್ವದಲ್ಲಿ ಅನೇಕ ಜನಪರ ಅರೋಗ್ಯ, ದಾಸೋಹ, ದೇಣಿಗೆ, ರಕ್ತದಾನ ಶಿಬಿರ ಅನೇಕ ವಿನೂತನ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.

ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ ದಿ.4-8-2026 ರಂದು ಬೆಳಿಗ್ಗೆ 8 ಘಂಟೆಗೆ  ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ಗೋಕಾಕ ರೋಟರಿ ರಕ್ತ ಭಂಡಾರ ಇವರ ನೇತೃತ್ವದಲ್ಲಿ  ಬೃಹತ್ ಐಚ್ಚಿಕ್  ರಕ್ತದಾನ ಶಿಬಿರ ನಡೆಯಿತು. ಭಕ್ತಿಪೂರ್ವಕವಾಗಿ ಅನೇಕ ಜನ ರಕ್ತದಾನ ಮಾಡಿ ಶ್ರೀಗಳ ಹಾಗೂ ಶ್ರೀ ಕೆಂಪಯ್ಯಸ್ವಾಮಿ ಮಠದ ಪ್ರೀತಿಗೆ ಪಾತ್ರರಾದರು.

news_1785859185_0_974.webp

ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬೆಳಿಗ್ಗೆ ಮಹಾಪೂಜೆ, ಕರ್ತುಗದ್ದುಗೆಗೆ ಮಹಾಭಿಷೇಕ,ತದನಂತರ ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯ ದಿ. ಡಾ ಗಂಗಾಧರ ಮಹಾಸ್ವಾಮಿಗಳ ಪುತ್ತಳಿಗೆ ಪೂಜೆ ನೆರವೇರಿಸಿ, ಶಾಲೆ ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರೊಂದಿಗೆ ಜನ್ಮದಿನ ಆಚರಿಸಿಕೊಂಡರು. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಜನ್ಮದಿನದ ನಿಮಿತ್ಯ ಕೆ.ಎಲ್.ಇ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಜೆ.ಎನ್.ಮೆಡಿಕಲ್ ಕಾಲೇಜು ವೈದ್ಯರು ಹಾಗೂ ಜೆ.ಜಿ.ಕೋ ಆಸ್ಪತ್ರೆ, ಕೆ.ಎಚ್.ಐ. ಆಸ್ಪತ್ರೆ, ಗೋಕಾಕ ತಾಲೂಕಾ ಆಸ್ಪತ್ರೆ, ಶಿಂದಿಕುರಬೇಟ ಪ್ರಾಥಮಿಕ ಅರೋಗ್ಯ ಕೇಂದ್ರ  ಇವರ ಸಹಯೋಗದಲ್ಲಿ ಚಿಕಿತ್ಸೆ ಹಾಗೂ ಅರೋಗ್ಯ ತಪಾಸಣೆ ಶಿಬಿರ ನೆರವೇರಿತು. ಘಟಪ್ರಭಾ ಭಾಗದ ಸಹಸ್ರಾರು ಜನರು ಅರೋಗ್ಯ ತಪಾಸಣೆ  ಶಿಬಿರದ ಸದುಪಯೋಗ ಪಡೆದುಕೊಂಡರು.

ಘಟಪ್ರಭಾ ಪಟ್ಟಣದ ಜೆ.ಜಿ.ಸಹಕಾರಿ ಆಸ್ಪತ್ರೆ ಮತ್ತು ಅರೋಗ್ಯ ಧಾಮದ (ಕೆ.ಎಚ್.ಐ.) ಆಸ್ಪತ್ರೆಯ ಒಳರೋಗಿಗಳಿಗೆ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಹಣ್ಣು ಹಂಪಲು ವಿತರಿಸಲಾಯಿತು.

ಶ್ರೀಗಳ ಆಶಯದಂತೆ ಅನೇಕ  ಬಡ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಯಿತು. ಹಿಡಕಲ ಡ್ಯಾಮ ನ ವಿಕಲ ಚೇತನ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಅರೋಗ್ಯ ತಪಾಸಣೆ, ಊಟ ಉಪಚಾರ, ಗೋಕಾಕ ಅನಾಥ ಆಶ್ರಮ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಣೆ ಮಾಡಲಾಯಿತು. ನಂತರ ಅವರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 

ಸಹಸ್ರಾರು ಜನ ಭಕ್ತ ಸಮೂಹ, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು, ಜೆ.ಜಿ.ಸಹಕಾರಿ ಆಸ್ಪತ್ರೆ ಅಧ್ಯಕ್ಷ, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ವೈದ್ಯರು, ಸಿಬ್ಬಂದಿ, ಘಟಪ್ರಭಾ ಪಟ್ಟಣದ ಅನೇಕ ಸಹಕಾರಿ ಸಂಘಗಳ ಅಧ್ಯಕ್ಷರು ಆಡಳಿತ  ಮಂಡಳಿ, ರೈತ ಮುಖಂಡರು, ರಾಜಕೀಯ ಮುಖಂಡರು, ಕರವೇ ಸಂಘಟನೆ ಪದಾಧಿಕಾರಿಗಳು, ಸದಸ್ಯರು, ಹೆಚ್ಚಿನ ಮಹಿಳಾ ಭಕ್ತರು ಸರದಿ ಸಾಲಿನಲ್ಲಿ ನಿಂತು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ಆಶೀರ್ವಾದ ಪಡೆದರು

news_1785859023_2_754.webp

 

ತಮ್ಮ 42 ಹುಟ್ಟುಹಬ್ಬದ ಸಂದರ್ಭದಲ್ಲಿ ಭಕ್ತ ಸಾಗರವನ್ನು ಉದ್ದೇಶಿಸಿ ಮಾತನಾಡಿದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಳೆದ 13 ವರ್ಷಗಳಿಂದ ತಾವೆಲ್ಲರೂ ನನ್ನ ಜನ್ಮದಿನದಂದು ಬಡವರ, ಬಡ ವಿದ್ಯಾರ್ಥಿಗಳ, ಅನಾಥರ, ವಿಕಲ ಚೇತನರ, ರೋಗಿಗಳು ಸೇರಿದಂತೆ ಸಕಲ ಜನತೆಯ ಒಳಿತಿಗೆ ಅರೋಗ್ಯ ತಪಾಸಣೆ, ಚಿಕಿತ್ಸೆ, ರಕ್ತದಾನ, ಸಲಕರಣೆ ವಿತರಣೆ, ಮಹಾಪ್ರಸಾದದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನನಗೆ ಮುಂದಿನ ದಿನಮಾನಗಳಲ್ಲಿ ತಮ್ಮ ಒಳಿತಿಗೆ ಹೋರಾಟ, ತಪಸ್ಸು, ನಿಸ್ವಾರ್ಥ ಸೇವೆ ಸಲ್ಲಿಸಲು ಪ್ರೇರಣೆ ಹಾಗೂ ಹುಮ್ಮಸ್ಸು ಬಂದಿದ್ದು ಈ ಘಟಪ್ರಭಾ ಭಾಗದ ಜನತೆಯ ಸಲುವಾಗಿ ಸದಾ ಒಳ್ಳೆಯದನ್ನು ಮಾಡಲು ಸಿದ್ದನಿದ್ದೇನೆ ಎಂದು  ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

news_1785859022_1_202.webp

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ