LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bellary

ಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು

ಬಳ್ಳಾರಿ,ಆ,04: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ ಹಾಗೂ ರಸ್ತೆಗಳ ಪರಿಶೀಲನೆ, ಸಿಗ್ನಲ್ ಹಾಗೂ ವೇಗ ಮಿತಿ ಮರುಪರಿಶೀಲನೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ನೂತನ ಜಿಲ್ಲಾಡಳಿತ ಭವನದ ವಿಡೀಯೋ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಮುಖ್ಯ ರಸ್ತೆಗಳಲ್ಲಿ ಭಾರಿ ಸರಕು ಮತ್ತು ಸಾರಿಗೆ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಚೆಕ್‌ಪೋಸ್ಟ್ ಗಳು ಹಾಗೂ ಬೈಪಾಸ್ ರಸ್ತೆಗಳ ಮೂಲಕ ಮಾರ್ಗ ಬದಲಾವಣೆ ಮಾಡಬೇಕು. ಹೊಸಪೇಟೆ ಬೈಪಾಸ್ ರಸ್ತೆಯ ಸುತ್ತಮುತ್ತಲಿನ ಸೈಡ್ ರೋಡ್‌ಗಳಲ್ಲಿ ಭಾರಿ ವಾಹನಗಳನ್ನು ಡೈವರ್ಟ್ ಮಾಡಿ ನಗರದೊಳಗಿನ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ಕ್ರೀಯಾಯೋಜನೆ ಸಿದ್ಧಪಡಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ರಸ್ತೆ ಪಕ್ಕದಲ್ಲಿ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದನ್ನು ತಡೆಯಲು 13 ಪ್ರಮುಖ ಸ್ಥಳಗಳಲ್ಲಿ ನೂತನ ಬಸ್ ಬೇ ನಿರ್ಮಿಸಲು ಗುರುತಿಸಲಾಗಿದೆ. ಪಾಲಿಕೆಯಿಂದ ಬಸ್ ಬೇ ಗಳನ್ನು ನೇರವಾಗಿ ನಿರ್ಮಿಸಲು ಎದುರಾಗುವ ತಾಂತ್ರಿಕ/ಆಡಳಿತಾತ್ಮಕ ಸವಾಲುಗಳಿದ್ದು, ಈ ಕುರಿತು ಲೋಕೋಪಯೋಗಿ ಇಲಾಖೆ ಹಾಗೂ ಪಾಲಿಕೆ ಇಂಜಿನಿಯರ್‌ಗಳು ಜಂಟಿಯಾಗಿ ಪರಿಶೀಲಿಸಿ, ಬಸ್ ಬೇ ನಿರ್ಮಾಣಕ್ಕೆ ಅಗತ್ಯವಿರುವ ಜಾಗದ ಲಭ್ಯತೆ ಕುರಿತು ವರದಿ ನೀಡಿದ ತಕ್ಷಣವೇ ಮುಂದಿನ ಯೋಜನಾ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸಮ್ಮತಿಸಿದರು.

ನಗರದಾದ್ಯಂತ ಸಂಚಾರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ವೇಗ ಮಿತಿ ಹಾಗೂ ಸ್ಕೂಲ್ ಝೋನ್ ಸೂಚನಾ ಫಲಕಗಳನ್ನು ಅಳವಡಿಸಬೇಕು. ಶಾಲೆಗಳು ಹಾಗೂ ಆಸ್ಪತ್ರೆಗಳಿರುವ ಸೂಕ್ಷö್ಮ ಪ್ರದೇಶಗಳಲ್ಲಿ ಗರಿಷ್ಠ ವೇಗವನ್ನು 40 ಕಿ.ಮೀ/ಗಂಟೆಗೆ ನಿಗದಿಪಡಿಸಿ ಬೋರ್ಡ್ ಗಳನ್ನು ಹಾಕಬೇಕು. ಸಂಚಾರ ವಿಭಾಗ ಹಾಗೂ ಸಿವಿಲ್ ಇಲಾಖೆಯ ಜಂಟಿ ಪರಿಶೀಲನೆ ನಂತರ ವೇಗ ಮಿತಿಯ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ವರದಿ ಬಂದ ನಂತರ ಒಂದು ವಾರದೊಳಗೆ ಅಗತ್ಯ ಸ್ಥಳಗಳಲ್ಲಿ ‘ವೇಗ ಮಿತಿ ಬೋರ್ಡ್’ಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು ಎಂದು ತಿಳಿಸಿದರು.

ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ: ಸಾರ್ವಜನಿಕರ ಸುರಕ್ಷಿತ ಪಾದಚಾರಿ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್‌ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಕಟ್ಟುನಿಟ್ಟಿನ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.

ರೈಲ್ವೆ ಸರಕು ಸಾಗಣೆ ಸಮಯದ ಸಮನ್ವಯ: ರೈಲ್ವೇ ಗೂಡ್ಸ್ ಗಾಡಿಗಳ ಮುಖಾಂತರ ಬರುವ ಸಿಮೆಂಟ್ ಹಾಗೂ ರಸಗೊಬ್ಬರ ಲೋಡಿಂಗ್/ಅನ್‌ಲೋಡಿAಗ್ ಸರಕು ರೈಲುಗಳಿಂದ ನಗರದಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ರೈಲ್ವೇ ಇಲಾಖೆಯಿಂದ ಸರಕು ರೈಲುಗಳು ಆಗಮಿಸುವ ಮತ್ತು ನಿರ್ಮಿಸುವ ನಿಖರ ಸಮಯದ ಮಾಹಿತಿ ಪಡೆದುಕೊಳ್ಳಬೇಕು. ನಗರದಲ್ಲಿ ಸಂಚಾರ ದಟ್ಟಣೆ ತಡೆಯಲು, ಪೀಕ್ ಅವರ್ ಹೊರತುಪಡಿಸಿ ಸಾಗಣೆ ಮಾಡಲು ಸಾಧ್ಯವೇ ಎಂಬುದರ ಕುರಿತು ರೈಲ್ವೇ ಸ್ಟೇಷನ್ ಮಾಸ್ಟರ್ ಹಾಗೂ ಸಂಬAಧಿಸಿದ ಅಧಿಕಾರಿಗಳೊಂದಿಗೆ ತಕ್ಷಣವೇ ಸಮನ್ವಯ ಸಭೆ ನಡೆಸಬೇಕು ಎಂದು ತಿಳಿಸಿದರು.

ಲಾರಿ ಟರ್ಮಿನಲ್ ನೈರ್ಮಲ್ಯ ಹಾಗೂ ಲೈಟಿಂಗ್ ನಿರ್ವಹಣೆ:  ನಗರದ ಟ್ರಕ್ ಟರ್ಮಿನಲ್‌ನಲ್ಲಿ ಮೂಲಸೌಕರ್ಯ ಹಾಗೂ ನೈರ್ಮಲ್ಯ ಕೊರತೆ ಕಂಡುಬAದಿದೆ. ಟರ್ಮಿನಲ್ ಆವರಣದಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಸರಿಪಡಿಸುವುದು ಮತ್ತು ನಿಯಮಿತ ನೈರ್ಮಲ್ಯ ಕಾಪಾಡುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

ಇದೇ ವೇಳೆ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್ ಅವರು, ಟರ್ಮಿನಲ್ ನಿರ್ವಹಣೆಯಿಂದ ವಸೂಲಾಗುವ ತೆರಿಗೆ ಮತ್ತು ನಿಧಿಯ ಕುರಿತು ಪರಿಶೀಲಿಸಿ, ಕೆಕೆಆರ್‌ಟಿಸಿ ಹಾಗೂ ಸ್ಥಳೀಯ ಸಾರಿಗೆ ಸಂಸ್ಥೆಗಳೊAದಿಗೆ ಸಮಾಲೋಚನೆ ನಡೆಸಿ, ನಿಗದಿತ ಸುಂಕದ ಆಧಾರದಲ್ಲಿ ಟರ್ಮಿನಲ್ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರುದ್ರಪ್ಪ ಅವರು ಮಾತನಾಡಿ, ಆಗಸ್ಟ್ 15 ರಿಂದ ನಗರದಲ್ಲಿ ಸಂಚರಿಸುವ ಆಟೋಗಳ ದಾಖಲೆಗಳು, ಪರವಾನಗಿ ಮತ್ತು ನಿಯಮ ಉಲ್ಲಂಘನೆಗಳನ್ನು ತಪಾಸಣೆ ಮಾಡಲು ‘ವಿಶೇಷ ಡ್ರೆöÊವ್' ನಡೆಸಲಾಗುವುದು. ನಿಯಮ ಮೀರಿದ ಮತ್ತು ಬಿಳಿ ಬೋರ್ಡ್ ಬಳಸಿ ಅನಧಿಕೃತವಾಗಿ ಸಂಚರಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ನಗರದಲ್ಲಿ ಆಟೋ ಚಾಲಕರು ರಾತ್ರಿಯ ಸಮಯದಲ್ಲಿ ಪ್ರಯಾಣಿಕರಿಂದ ರೂ.300, 400 ಅಥವಾ 500 ರಂತೆ ಅತಿಯಾದ ಬಾಡಿಗೆ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗಿವೆ. ಇದನ್ನು ತಡೆಯಲು ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಿಎಂಸಿಆರ್‌ಸಿ ಮುಂಭಾಗದ ವೃತ್ತ ಸೇರಿದಂತೆ ಮೂರೂ ಕಡೆಗಳಲ್ಲಿ ಪ್ರಿಪೇಡ್ ಆಟೋ ಸೇವೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರತಿಕ್ರಿಯಿಸಿ, ನಗರದಲ್ಲಿ  ಪ್ರಯಾಣಿಕರ ಹಿತರಕ್ಷಣೆ ಮತ್ತು ಸಂಚಾರ ವ್ಯವಸ್ಥೆಯ ಸುಧಾರಣೆಗಾಗಿ ಶೀಘ್ರದಲ್ಲೇ ಪ್ರಿಪೇಡ್ ಆಟೋ ಸೇವೆಯನ್ನು ಆರಂಭಿಸಬೇಕು. ಮತ್ತು ಅಧಿಕ ಬಾಡಿಗೆ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಕೂಡಲೇ ಆರ್.ಟಿ.ಒ ಅಧಿಕಾರಿಗಳು, ಸಂಚಾರ ಪೊಲೀಸ್ ಇಲಾಖೆ ಹಾಗೂ ಆಟೋ ಚಾಲಕರ ಸಂಘಟನೆಗಳ ಜೊತೆ ಜಂಟಿ ಸಭೆ ನಡೆಸಿ ಸ್ಥಿರ ದರಪಟ್ಟಿ ನಿಗದಿಪಡಿಸಬೇಕು. ಪ್ರಿಪೇಡ್ ಆಟೋ ಸೇವೆ ಆರಂಭವಾದ ನಂತರ ನಾನೇ ಖುದ್ದಾಗಿ ಆಗಮಿಸಿ ಉದ್ಘಾಟನೆ ಮಾಡುವೆ ಎಂದು ಹೇಳಿದರು.
ಖಾಸಗಿ ವ್ಯಕ್ತಿಗಳು ಅಥವಾ ಅನಧಿಕೃತವಾಗಿ ಎಲ್ಲೆಂದರಲ್ಲಿ ಆಟೋ ಸ್ಟಾö್ಯಂಡ್ ನಿರ್ಮಿಸುವುದನ್ನು ತಡೆಯಲು, ಮಹಾನಗರ ಪಾಲಿಕೆ ಹಾಗೂ ಟ್ರಾಫಿಕ್ ಇಲಾಖೆಯ ಇಂಜಿನಿಯರ್‌ಗಳು ಜಂಟಿಯಾಗಿ ಸೂಕ್ತ ಸ್ಥಳಗಳನ್ನು ಗುರುತಿಸಿ ಅಧಿಕೃತ ಬೋರ್ಡ್ ಗಳು, ಬ್ಯಾರಿಕೇಡ್‌ಗಳು ಮತ್ತು ಶೇಡ್‌ಗಳನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಪಘಾತಗಳನ್ನು ತಡೆಯಲು ಹಾಗೂ ಪಾದಚಾರಿಗಳ ಸುರಕ್ಷತೆಗೆ ಅನುಕೂಲವಾಗುವಂತೆ ಅಗತ್ಯವಿರುವ ಕಡೆ ತಕ್ಷಣವೇ ಸೂಕ್ತ ಸೈನ್ ಬೋರ್ಡ್ ಗಳನ್ನು ಹಾಗೂ ವಾಹನಗಳ ವೇಗ ಚಲನೆ ತಡೆಗೆ ರಸ್ತೆಗಳಲ್ಲಿ ಹಂಪ್ಸ್ ಗಳನ್ನು ವೈಜ್ಞಾನಿಕವಾಗಿ ಅಳವಡಿಸಲು ಸೂಚಿಸಿದರು.

ಸಭೆಯಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಸಾರ್ವಜನಿಕರ ಮೇಲೆ ಮತ್ತು ಅವರ ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು, ನಿಷ್ಕಾಳಜಿ ವಹಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಬಳ್ಳಾರಿ ವಿಭಾಗದ ಲೋಕೋಪಯೋಗಿ ಇಲಾಖೆಯ ಇಇ ವಿಜಯ ಭಾಸ್ಕರ್, ಎಇಇ ಗವಿಯಪ್ಪ ಸೇರಿದಂತೆ ರಾಜ್ಯ ಮತ್ತು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗ್ರಹಿತ ಅಧಿಕೃತ ಲಿಂಗಾಯತ ಧರ್ಮದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಹಂಚಲಾಗುವುದು : ಡಾ.ಎಸ್ ಎಮ್ ಜಾಮದಾರಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮಹಾತ್ಮ ಗಾಂಧಿ ಪುತ್ಥಳಿಗೆ ಪೂಜೆಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರುಕೆಪಿಎಸ್‌ಸಿ ಅಕ್ರಮ ಆರೋಪದ ಬಿಸಿ: ಪರೀಕ್ಷಾ ನಿಯಂತ್ರಕರ ಎತ್ತಂಗಡಿ, ಆಯೋಗಕ್ಕೆ ಹೊಸ ಐಎಎಸ್ ಅಧಿಕಾರಿಗಳ ಸರಪಳಿ