Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಡಿ.5, 6ರಂದು ದೇಶಿ ತಳಿ ಶ್ವಾನ ದತ್ತು ಪಡೆಯುವ ಅಭಿಯಾನ

ಪ್ರಾಣಿಗಳ ಕಲ್ಯಾಣದಲ್ಲಿ ಸಾರ್ವಜನಿಕರು ಕೈಜೋಡಿಸಲು ಮನವಿ

ಹಸಿರು ಕ್ರಾಂತಿ ವರದಿ ವಿಜಯಪುರ
ಟೇಲ್ಸ್ ಆಫ್ ಬಿಜಾಪುರ ಮತ್ತು ಪ್ರಾವ್ಯ ಅನಿಮಲ್ ಫೌಂಡೇಶನ್ ಜಂಟಿಯಾಗಿ ಡಿಸೆಂಬರ್ 5 ಮತ್ತು 6ರಂದು ಎರಡು ದಿನಗಳ ಕಾಲ ದೇಶಿ ತಳಿ ನಾಯಿಮರಿಗಳ ದತ್ತು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಟೇಲ್ಸ್ ಆಫ್ ಬಿಜಾಪುರದ ಫೌಂಡರ್‌ ಅನಿರುದ್ಧ ಗುಡಿ ಮತ್ತು ಪ್ರಾವ್ಯ ಅನಿಮಲ್ ಫೌಂಡೇಶನ್ ಅಭಿಲಾಷ ಜೆ.ಕೆ ಮನವಿ ಮಾಡಿದ್ದಾರೆ.


ಸಾಕುಪ್ರಾಣಿಗಳನ್ನು ಖರೀದಿಸುವ ಬದಲು ದತ್ತು ಪಡೆಯುವ ಮನೋಭಾವವನ್ನು ಜನರಲ್ಲಿ ಬೆಳೆಸುವುದು, ದೇಶಿ ತಳಿ ನಾಯಿಗಳ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ 90ಸ್‌ ನೆಸ್ಟ್‌ ಕೆಫೆಯಲ್ಲಿ ಡಿ.5ರಂದು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಮತ್ತು ಡಿ.6ರಂದು ಅರ್ಬನ್‌ ಬ್ರ್ಯೂವ್ಸ್‌ನಲ್ಲಿ ಮಧ್ಯಾಹ್ನ 12ರಿಂದ 3ವರೆಗೆ ಶಿಬಿರ ನಡೆಯಲಿದೆ.


ಇದಕ್ಕಾಗಿ ದೇಶಿ ತಳಿ ನಾಯಿಗಳನ್ನೇ ದತ್ತು ನೀಡಿ, ಅವುಗಳನ್ನು ಪ್ರೋತ್ಸಾಹಿಸುವುದು ಟೇಲ್ಸ್ ಆಫ್ ಬಿಜಾಪುರ ಮತ್ತು ಪ್ರಾವ್ಯ ಅನಿಮಲ್ ಫೌಂಡೇಶನ್‌ನ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಜತೆಗೆ ದೇಶಿ ತಳಿ ನಾಯಿಗಳಿಗೆ ಸಾಕು ಪ್ರಾಣಿಗಳನ್ನು ಪ್ರೀತಿಸುವ ಉತ್ತಮ ಕುಟುಂಬಗಳಿಗೆ ನೀಡುವ ಪರಿಕಲ್ಪನೆ ಹೊಂದಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಕೂಡ ದತ್ತು ಪಡೆಯುವ ಅವಕಾಶ ಪಡೆಯಲಿದ್ದಾರೆ. 


ಕಾರ್ಯಕ್ರಮದಲ್ಲಿ ಮುದ್ದಾದ ನಾಯಿಮರಿಗಳನ್ನು ನೋಡಿ, ಅವುಗಳ ಬಗ್ಗೆ ಮಾಹಿತಿ ಪಡೆದು ದತ್ತು ಪಡೆಯಲು ಸಾರ್ವಜನಿಕರಿಗೆ ಮುಕ್ತವಾದ ಅವಕಾಶ ಕಲ್ಪಿಸಲಾಗಿದೆ. ದೇಶಿ ತಳಿ ಶ್ವಾನಗಳು ಇಲ್ಲಿಯ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಹೀಗಾಗಿ ಅವುಗಳಿಗೂ ಪ್ರೀತಿಯ ಮನೆ ಮತ್ತು ಸುರಕ್ಷಿತ ಜೀವನದ ಹಕ್ಕು ಇದೆ. ಈ ಹಿನ್ನೆಲೆಯಲ್ಲಿ ದತ್ತು ಸ್ವೀಕಾರದ ಮೂಲಕ ಪ್ರಾಣಿಗಳ ಕಲ್ಯಾಣದಲ್ಲಿ ಸಾರ್ವಜನಿಕರು ಕೈಜೋಡಿಸಬೇಕು ಎಂದು ಸಂಘಟಕರು ಕೋರಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿ.5, 6ರಂದು ದೇಶಿ ತಳಿ ಶ್ವಾನ ದತ್ತು ಪಡೆಯುವ ಅಭಿಯಾನಡಿ.5, 6ರಂದು ದೇಶಿ ತಳಿ ಶ್ವಾನ ದತ್ತು ಪಡೆಯುವ ಅಭಿಯಾನಮನಸ್ಸಿಗೆ ಶಾಂತಿ ಸತ್ಬುದ್ದಿ ಕೋಡುವುದೆ ವೇದಾಂತ- ಶಿವಾನಂದ ಭಾರತಿ ಶ್ರೀಗಳುಸರ್ಕಾರದ ಎಲ್ಲ ಯೋಜನೆಗಳು ಕಟ್ ಕಡೆಯ ಮನುಷ್ಯನಿಗೆ ಸಿಗಲು ಸಂಕಲ್ಪ : ಬಾಬಾಸಾಹೇಬ ಪಾಟೀಲ ಭೀರಪ್ಪ ಹೊಸೂರಗೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನಭೀರಪ್ಪ ಹೊಸೂರಗೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನಭೀರಪ್ಪ ಹೊಸೂರಗೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ*ಶಿವನ ಸ್ಮರಣೆ ಹಾಗೂ ಆಚರಣೆಯೇ ನಿಜವಾದ ಶಿವಾನುಭವ: ಡಾ. ಪ್ರಶಾಂತಸಾಗರ ಶಿವಾಚಾರ್ಯ ಶ್ರೀಗಳು**ಶಿವನ ಸ್ಮರಣೆ ಹಾಗೂ ಆಚರಣೆಯೇ ನಿಜವಾದ ಶಿವಾನುಭವ: ಡಾ. ಪ್ರಶಾಂತಸಾಗರ ಶಿವಾಚಾರ್ಯ ಶ್ರೀಗಳು*ಬಳ್ಳಾರಿಯಲ್ಲಿ ಎಫ್‌ಎಫ್‌ಎಸ್ ಆ್ಯಪ್ ಜಾಗೃತಿ ಕಾರ್ಯಕ್ರಮ