ಇಂಡಿ : ಧಾರವಾಡ ದ.ರಾ. ಬೇಂದ್ರೆಭವನದಲ್ಲಿ ಭುವನೇಶ್ವರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಧಾರವಾಡ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾದ್ಯಮ ಕ್ಷೇತ್ರಕ್ಕೆ ಕೊಡಮಾಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಕರುನಾಡು ಕೋಗಿಲೆ ಕನ್ನಡ ದಿನ ಪತ್ರಿಕೆ ಸಂಪಾದಕರಾದ ಭೀರಪ್ಪ ಹೊಸೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ರೊಟ್ಟಿಗವಾಡ,ಡಾ. ಸುರೇಶ ಕಮ್ಮಾರ,ಶಿವಾನಂದ ಪಂಡಿತ,ಶ್ರೀಮತಿ ಸಿಂಧು. ವಿ.,ಪ್ರೊ. ರಾಮಚಂದ್ರ ಹೆಗಡೆ,ಡಾ.ಭರತೇಶಗೌಡ. ಶಿ.,ಸಿರಿಯಪ್ಪಗೌಡ್ರ,ಡಾ. ಕರೆಪ್ಪ ಗೌಡ ಪಾಟೀಲ,ಶ್ರೀಮತಿ ಜಯಶ್ರೀ ಪಾಟೀಲ,ಶ್ರೀಮತಿ ಪ್ರತಿಭಾಪಾಟೀಲ,ಶ್ರೀಮತಿ ಯಶಸ್ವಿನಿ,ಶ್ರೀಮತಿ ಪಾರ್ವತಿ ಹಮ್ಮಿಗಿ,ಸೇರಿದಂತೆ ಮತ್ತಿತ್ತರರು ಇದ್ದರು.