ಸೋಮೇಶ್ವರ ಶ್ರೀಗಳಿಗೆ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಅಧಿಕಾರ ಹಸ್ತಾಂತರ.
ಮಹಾಲಿಂಗಪುರ ; ಮನಸ್ಸಿಗೆ ಶಾಂತಿ ಸತ್ಬುದ್ದಿ ಕೊಡುವುದೆ ವೇದಾಂತ. ಜೀವನದ ಭಾವನೆಗಳು ಹೋಗಿ ಬೃಹ್ಮ ಸ್ವರೂಪವಾಗುವುದೆ ಜೀವನ ಮುಕ್ತಿ ಎಂದು ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ಸ್ಥಳೀಯ ಸಿದ್ದಾರೂಢ ಬೃಹ್ಮ ವಿದ್ಯಾಶ್ರಮದಲ್ಲಿ ನಡೆದ ೩೦೩ ನೇ ಸತ್ಸಂಗ ಹಾಗೂ ಸೋಮೇಶ್ವರ ಶ್ರೀಗಳಿಗೆ ಉತ್ತರಾಧಿಕಾರಿಗಳಾಗಿ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ದಿವ್ಯೆ ಸಾನಿಧ್ಯವಹಿಸಿ ಮಾತನಾಡಿದ ಅವರು ಸದ್ಗುರುವಿಗೆ ಶರಣಾಗತರಾಗಿ ಸದ್ಗುರುವಿನ ಮೂಲಕ ಆದ್ಯಾತ್ಮ ಚಿಂತರನೆಗಳನ್ನು ಮಾಡಿ ಜೀವತ್ವಭಾವವನ್ನು ಕಳೆದುಕೊಂಡು ಪರಿಪೂರ್ಣ ಪರಬೃಹ್ಮ ಸ್ವರೂಪಿಗಳಾಗುತ್ತೀರಿ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಸಿದ್ದರೂಢ ಬೃಹ್ಮ ವಿದ್ಯಾಶ್ರಮಕ್ಕೆ ನೂತನ ಉತ್ತರಾಧಿಕಾರಿಯಾಗಿ ಗುಲಬರ್ಗಾದ ಸೋಮೇಶ್ವರ ಶ್ರೀಗಳನ್ನು ನೇಮಕ ಮಾಡಿ ಶಾಲು ಹೊದಿಸಿ ಸತ್ಕರಿಸಿ ಆರ್ಶಿವದಿಸಿದರು.
ನೂತನ ಉತ್ತರಾಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿ ಮಾತನಾಡಿದ ಸೋಮೇಶ್ವರ ಶ್ರೀಗಳು ಅಧಿಕಾರ ಸ್ವೀಕಾರ ಎಂಬುದು ಸಂತಸದ ವಿಷಯವಿಷಯವಾದರೂ ತುಂಬಾ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ, ಸಿದ್ದಾರೂಢ ಬೃಹ್ಮ ವಿದ್ಯಾಶ್ರಮದ ಅಭಿವೃದ್ದಿಗಾಗಿ ನಾವು ಸದಾ ಹಗಲಿರುಳು ಎನ್ನದೆ ಶ್ರಮಿಸುತ್ತೇವೆ, ನಮಗೆ ಶ್ರೀಮಠದ ಭಕ್ತರ ಪ್ರೀತಿ ಮತ್ತು ನೆಮ್ಮದಿಯೇ ನಮ್ಮ ಗುರಿಯಾಗಿದೆ ಎಂದರು.
ನಂತರ ಮಾತನಾಡಿದ ಸಹಜಯೋಗಿ ಸಹಜಾನಂದ ಶ್ರೀಗಳು ಮಾತೋಶ್ರೀ ವಿದ್ಯಾವತಿತಾಯಿ ಮತ್ತು ಈ ಮಠಕ್ಕೆ ಯೋಗ್ಯ ಅಬ್ಯಾಸ iಡಿದವರನ್ನೆ ಉತ್ತರಾಧಿಕಾರಿಯಾಗಿ ಮಾಡಬೇಕೆಂಬುದು ನಮ್ಮ ಆಶೆಯಾಗಿತ್ತು ಅದು ಇಂದು ನೇರವೇರಿದಂತಾಗಿದೆ,ಇನ್ನೂ ಮುಂದೆ ಶ್ರೀಗಳ ಸಹಕಾರ ನಿಮಗಿರಲಿ ನಿಮ್ಮ ಸಹಕಾರ ಅವರಿಗಿರಲಿ, ಇದು ದೊಟ್ಟ ಮಠ ಇದಕ್ಕೆ ಇಲ್ಲಿನ ಭಕ್ತರೇ ಆಸ್ತಿ, ಗುರುನಾಥನ ಆಶೆಯದಂತೆ ನಾವು ಈ ಮಠಕ್ಕೆ ನಮ್ಮ ಕೈಲಾದ ಸೇವೆ ಮಾಡುತ್ತೇವೆ, ನಾವು ಬಂದಿದ್ದೇ ಸಿದ್ದಾರೂಢರ ಸೇವೆ ಮಾಡುವುದಕ್ಕಾಗಿ ಎಂದರು.
ಈ ಸಂದರ್ಭದಲ್ಲಿ ಕಮೀಟಿ ಸದಸ್ಯರಿಂದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳಿಗೆ ೫ ಕೋಟಿ ಜಪಯಜ್ಞ ಪುಸ್ತಕಗಳಿಂದ ತುಲಾಭಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಹೋಸೂರದ ಪರಮಾನಂದ ಶ್ರೀಗಳು,ಬೆಳಗಲಿಯ ಸದಾಶಿವ ಗುರುಜೀ, ಶಂಕರಾನಂದ ಶ್ರೀಗಳು, ವಿಜಯಪುರದ ವಿರೂಪಾಕ್ಷದೇವರು, ಹುಣಶ್ಯಾಳದ ಪ್ರಭುದೇವರು, ವಕೀಲರಾದ ಶಾಮಾನಂದ ಪೂಜಾರಿ, ಮತ್ತು ಅಲ್ಲಪ್ಪ ಗುಂಜಿಗಾಂವಿ, ಬಸವರಾಜ ಡಪಳಾಪುರ, ಮಹಾಂತೇಶ ಘಟ್ನಟ್ಟಿ, ಯಲ್ಲನಗೌಡ ಪಾಟೀಲ, ಮಲ್ಲಪ್ಪ ಬಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಮಹಾಲಿಂಗಪ್ಪ ಕರೆಹೊನ್ನ, ಮಹೇಶ ಇಟಕನ್ನವರ, ಕಲ್ಲಪ್ಪ ಚಿಂಚಲಿ, ಕುಮಾರ ವಾಲಿ, ಚನ್ನಪ್ಪಣ್ಣ ಪಟ್ಟಣಶೆಟ್ಟಿ, ಚನಬಸು ಹುರಕಡ್ಲಿ ಸೇರಿದಂತೆ ಹಲವರು ಇದ್ದರು. ಎಸ್.ಕೆ ಗಿಂಡೆ ಮತ್ತು ಹುಮಾಯುನ ಸುತಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಫೋಟೊ: ೨೭ ಎಂ.ಎಲ್.ಪಿ ೨
ಮಹಾಲಿಂಗಪುರ : ಸಿದ್ದಾರೂಢ ಬೃಹ್ಮ ವಿದ್ಯಾಶ್ರಮದ ನೂತನ ಉತ್ತರಾಧಿಕಾರಿಯಾಗಿ ಸೋಮೇಶ್ವರ ಶ್ರೀಗಳನ್ನು ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳು ನೇಮಕ ಮಾಡಿ ಆರ್ಶಿವದಿಸಿದರು.