Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"೮೯೨ನೇ ಹಡಪದ ಅಪ್ಪಣ್ಣ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದ ಹೊಳೆಬಸಪ್ಪ ಹಡಪದ.

ಕ್ಷೌರದ ಅಂಗಡಿಯೇ ಬಸವ ತತ್ವದ ದೇವಾಲಯ; 



ಮಹಾಲಿಂಗಪುರ: ನಗರದ ಡಬಲ್ ರಸ್ತೆಯಲ್ಲಿರುವ ಕ್ಷೌರಿಕರಾದ ಹೊಳೆಬಸಪ್ಪ ಹಡಪದ ಅವರ ಕ್ಷೌರದ ಅಂಗಡಿಗೆ ಕಾಲಿಟ್ಟರೆ ಅದು ಸಾಮಾನ್ಯ ಅಂಗಡಿಯಂತೆ ಕಾಣುವುದಿಲ್ಲ. ಹನ್ನೆರಡನೇ ಶತಮಾನದ ಬಸವ ತತ್ವ, ಶರಣರ ವಚನಗಳು, ಮಹಾತ್ಮರ ಭಾವಚಿತ್ರಗಳು ಹಾಗೂ ನೂರಾರು ಪುಸ್ತಕಗಳ ಸಂಗ್ರಹದಿಂದ ಕೂಡಿರುವ ಈ ಅಂಗಡಿ, ಗ್ರಾಹಕರಿಗೆ ಒಂದು ಪುಟ್ಟ ದೇವಾಲಯದ ಅನುಭವವನ್ನು ನೀಡುತ್ತದೆ.
ಬಸವಣ್ಣನವರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಹೊಳೆಬಸಪ್ಪ ಹಡಪದ ಅವರು, ೮೯೨ನೇ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯ ಅಂಗವಾಗಿ ತಮ್ಮ ಅಂಗಡಿಯ ಮುಂಭಾಗದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಸರಳವಾಗಿ ಆದರೆ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಿ ಸಾರ್ವಜನಿಕರ ಗಮನ ಸೆಳೆದರು. ಅಂಗಡಿಗೆ ಆಗಮಿಸಿದ ಗ್ರಾಹಕರು ಹಾಗೂ ಸ್ನೇಹಿತರು ಸಹ ಪೂಜೆಯಲ್ಲಿ ಪಾಲ್ಗೊಂಡು ಶರಣರ ಆದರ್ಶಗಳನ್ನು ಸ್ಮರಿಸಿದರು.
ಹೊಳೆಬಸಪ್ಪ ಹಡಪದ ಅವರ ಅಂಗಡಿಯ ಗೋಡೆಗಳ ಮೇಲೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರ ವಚನಗಳು ಬರೆಯಲ್ಪಟ್ಟಿದ್ದು, ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯ ಕೃತಿಗಳ ಪುಸ್ತಕಗಳು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಇದರಿಂದ ಅಂಗಡಿಗೆ ಬರುವ ಪ್ರತಿಯೊಬ್ಬರಿಗೂ ಜ್ಞಾನ, ಸಂಸ್ಕಾರ ಮತ್ತು ಆಧ್ಯಾತ್ಮಿಕತೆಯ ವಾತಾವರಣ ಅನುಭವವಾಗುತ್ತದೆ.
ಕ್ಷೌರ ವೃತ್ತಿಯನ್ನು ಕೇವಲ ಜೀವನೋಪಾಯವಾಗಿ ನೋಡದೆ, "ಕಾಯಕವೇ ಕೈಲಾಸ" ಎಂಬ ಬಸವಣ್ಣನ ಸಂದೇಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಹೊಳೆಬಸಪ್ಪ ಹಡಪದ ಅವರು, ದಿನನಿತ್ಯದ ಕಾಯಕದ ಜೊತೆಗೆ ಮನೆಗಳಲ್ಲಿ ಧಾರ್ಮಿಕ ಹಾಗೂ ಶುಭ ಸಮಾರಂಭಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುವ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ಹಡಪದ ಅಪ್ಪಣ್ಣನವರ ತತ್ವ, ಬಸವ ಚಿಂತನೆ ಹಾಗೂ ವಚನ ಸಾಹಿತ್ಯವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ತಮ್ಮ ಅಂಗಡಿಯನ್ನು ಜ್ಞಾನ ಮಂದಿರವನ್ನಾಗಿಸಿರುವ ಅವರ ಸೇವಾಭಾವ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
"ಇದೇ ಸಂದರ್ಭದಲ್ಲಿ ಮಹಾಲಿಂಗಪುರ ಪುರಸಭೆಯಲ್ಲಿ ಸಹ ಶಿವಶರಣ ಹಡಪದ ಅಪ್ಪಣ್ಣನವರ ೮೯೨ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಭಕ್ತಿಪೂರ್ವಕವಾಗಿ ಆಚರಿಸಲಾಯಿತು."
ಹಡಪದ ಸಮಾಜದ ಅಧ್ಯಕ್ಷ ಪ್ರಭು ನಾವಿ ಮಾತನಾಡಿ, "ಶಿವಶರಣ ಹಡಪದ ಅಪ್ಪಣ್ಣನವರ ಜೀವನ, ಕಾಯಕ ನಿಷ್ಠೆ ಹಾಗೂ ಬಸವ ತತ್ವಗಳು ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದ್ದು, ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿ ಆಚರಣೆ ಕೇವಲ ಸಂಪ್ರದಾಯವಾಗದೆ, ಅವರ ಆದರ್ಶಗಳನ್ನು ಅನುಸರಿಸುವ ಸಂಕಲ್ಪವಾಗಬೇಕು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ಅಧ್ಯಕ್ಷರಾದ ಪ್ರಭು ನಾವಿ, ವಕೀಲರಾದ ಹಣಮಂತ ನಾವಿ, ಪುರಸಭೆ ಅಧಿಕಾರಿಗಳಾದ ರಾಜು ಹೂಗಾರ, ಮಾರುತಿ ದಳವಾಯಿ, ದುರ್ಗಪ್ಪ ಜಮಖಂಡಿ, ಸದಾಶಿವ ಕತ್ತಿ, ವಿಕ್ರಮ ಹವಾಲ್ದಾರ, ಶಿವಾನಂದ ಚೌಧರಿ, ಸಿಪಾಯಿ ರಾಮು, ಬಸವರಾಜ ಮಡಿವಾಳ, ಭಗವಂತ ಬಂಡಿವಡ್ಡರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
೨೯ mಟಠಿ ೦೧ ಫೋಟೋ

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST