ರಾಮದುರ್ಗ,:ಅ,೦೩ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೆ, ಸಮಾಜದಲ್ಲಿರುವ ಅನೇಕ ಪಿಡುಗುಗಳ ವಿರುದ್ದವೂ ಹೋರಾಡಿದ ಮಹಾನ ನಾಯಕರು ಅವರು ಎಂದು ಲಯನ್ಸ್ ಕ್ಲಬ್ ಅದ್ಯಕ್ಷ ಗಂಗಾಧರ ಕಂಬಾರ ಹೇಳಿದರು.
ಪಟ್ಟಣ ಎಂಎಲ್‌ಬಿಸಿ ಯಲ್ಲಿರುವ ಶ್ರೀಮತಿ ಎಂ.ಪಿ. ಪಾಲರೇಶಾ ಲಯನ್ಸ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಗಾಂಧಿಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಗಾಂಧಿಜಿ ಅವರ ಜಯಂತಿಯನ್ನು ಆಚರಿಸಲಾಯಿತು.
ಗಾಂಧಿಜೀಯವರು ಅಸ್ಪೃಶ್ಯತಾ ನಿವಾರಣೆಗಾಗಿ ಮತ್ತು ಹಿಂದು-ಮುಸ್ಲೀಂ ಐಕ್ಯತೆಗಾಗಿ ಶ್ರಮಿಸಿದರು. ಸ್ವಚ್ಚತೆ, ಸಮಾನತೆ ಮತ್ತು ಸೌಹಾರ್ದತೆ ಇವು ಗಾಂಧಿಜಿ ಅವರ ಕನಸುಗಳಾಗಿದ್ದವು ಎಂದು ಹೇಳಿದರು.
ನಂತರ ಕಣ್ಣಿನ ಆಸ್ಪತ್ರೆಗೆ ಹೋಗುವ ರಸ್ತೆ ಹಾಗೂ ಕಣ್ಣಿನ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ (ಶ್ರಮದಾನ ಕಾರ್ಯಕ್ರಮ )ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಸ್.ಎಂ. ಸಕ್ರಿ, ಖಜಾಂಚಿ ಬಿ.ಪಿ. ಅರಳಿಮಟ್ಟಿ, ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ, ವಿಜಯಕುಮಾರ ದಿಂಡವಾರ, ಬಿ.ಎಲ್. ಸಂಕನಗೌಡರ, ನಿಜಗುಲಿ, ಪ್ರಭಾಕರ, ಸುನೀಲ್ ಹೊಂಗಲ ಸೇರಿದಂತೆ ಇತರರು ಉಪಸ್ಥಿತರಿದ್ದರು.