LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಎನ್‌ಕೌಂಟರ್‌ನಲ್ಲಿ ಹತರಾದ ಎಂಟು ಮಾವೋವಾದಿಗಳ ಗುರುತು ಪತ್ತೆ

ಹೈದರಾಬಾದ್​02: ಛತ್ತೀಸ್‌ಗಢದ ಅಬುಜಮದ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹತ್ತು ಮಂದಿ ಮಾವೋವಾದಿಗಳು ಹತರಾಗಿದ್ದು, ಈ ಪೈಕಿ ಎಂಟು ಜನರ ಗುರುತು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಮೂವರು ತೆಲಂಗಾಣದವರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೆದ್ದಪಲ್ಲಿ ಜಿಲ್ಲೆಯ ಪಾಲಕುರ್ತಿ ಮಂಡಲದ ಜಿಯಾರಂ ಗ್ರಾಮದ ಜೋಗಣ್ಣ ಅಲಿಯಾಸ್ ಜಿಸ್ಸು ಅಲಿಯಾಸ್ ಚೀಮ ನರ್ಸಯ್ಯ (66), ಮಂಚಿರ್ಯಾಲ ಜಿಲ್ಲೆಯ ವಿನಯ್ ಅಲಿಯಾಸ್ ಕೇಶಬೋಯಿನಾ ರವಿ (55) ಮತ್ತು ವರಂಗಲ್‌ನ ಸುಶ್ಮಿತಾ ಅಲಿಯಾಸ್ ಚೈತೆ (26) ಎಂದು ಗುರುತಿಸಲಾಗಿದೆ.


ಮೃತ ಜೋಗಣ್ಣನ ವಿರುದ್ಧ 196 ಪ್ರಕರಣಗಳಿದ್ದು, ಈತನ ಮಾಹಿತಿ ನೀಡಿದವರಿಗೆ ಸರಕಾರ 25 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ ಮಾವೋವಾದಿ ವಿಭಾಗೀಯ ಸಮಿತಿ ಸದಸ್ಯ ರವಿ ಬಗ್ಗೆ ಮಾಹಿತ ನೀಡಿದರೆ 8 ಲಕ್ಷ ರೂ., ಮಾವೋವಾದಿ ಪಕ್ಷದ ಸದಸ್ಯೆ ತಿಕ್ಕ ಸುಶ್ಮಿತಾ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು.


ಕಳೆದ ತಿಂಗಳು 16 ರಂದು ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಅರಣ್ಯದಲ್ಲಿ ನಡೆದ ಭಾರಿ ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳು ಹತರಾಗಿದ್ದರು, ಅವರಲ್ಲಿ ಭೂಪಾಲಪಲ್ಲಿ ಜಿಲ್ಲೆಯ ಶಂಕರ್ ರಾವ್ ಮತ್ತು ಅವರ ಪತ್ನಿ ಅದಿಲಾಬಾದ್ ಜಿಲ್ಲೆಯ ದಾಸರ್ವರ್ ಸುಮನಾ ಅಲಿಯಾಸ್ ರಜಿತಾ ಹತರಾಗಿದ್ದರು. ಇತ್ತೀಚೆಗಷ್ಟೇ 15 ದಿನಗಳೊಳಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ತೆಲಂಗಾಣ ಮಾವೋವಾದಿಗಳು ಹತರಾಗಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್