LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News | Education News

ಎನ್‌ಟಿಎ ಬಿಗ್ ಆಪರೇಷನ್: 50ಕ್ಕೂ ಹೆಚ್ಚು ಸಿಬ್ಬಂದಿ ವಜಾ, ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಮುಂದು

ನವದೆಹಲಿ: ನೀಟ್​, ಯುಜಿಸಿ-ನೆಟ್​ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸುವಲ್ಲಿ ವಿಫಲವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯ ಶುದ್ಧೀಕರಣಕ್ಕೆ ಕೇಂದ್ರ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಸಂಸ್ಥೆಯ 50ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ವಜಾಗೊಳಿಸಿದೆ. ಪರೀಕ್ಷೆ ಮತ್ತು ಸಂಸ್ಥೆಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಸ್ಥಾನಗಳಿಗೆ ವೃತ್ತಿಪರರನ್ನು ಆಯ್ಕೆ ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ.

ಭಾನುವಾರ ಯುಜಿಸಿ-ನೆಟ್ ಪರೀಕ್ಷೆಯ ಮೂರು ವಿಷಯಗಳಿಗೆ ಮರು ಪರೀಕ್ಷೆಗೆ ಎನ್‌ಟಿಎ ಆದೇಶಿಸಿತ್ತು. ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಯಾಗಿ ಎನ್‌ಟಿಎ ದೊಡ್ಡ ವಿವಾದ, ಜನಾಕ್ರೋಶಕ್ಕೆ ತುತ್ತಾಗಿತ್ತು.

ಎನ್​ಟಿಎ ಮರುರಚನೆಯ ಕುರಿತು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್​ ಜೋಶಿ ಅವರು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಎನ್‌ಟಿಎ ಮಹಾನಿರ್ದೇಶಕರು ಮತ್ತು ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇತ್ತೀಚಿನ ಸಮಸ್ಯೆಗಳು ಮತ್ತು ಒಟ್ಟಾರೆ ಪರೀಕ್ಷಾ ವ್ಯವಸ್ಥೆ ಸುಧಾರಿಸುವ ಹಿನ್ನೆಲೆಯಲ್ಲಿ ಸಂಸ್ಥೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಸುಧಾರಣಾ ಕ್ರಮಗಳಿವು:

  • ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ 50 ಸಿಬ್ಬಂದಿ ವಜಾ.
  • ಮುಖ್ಯ ತಂತ್ರಜ್ಞಾನ ಅಧಿಕಾರಿ, ಮುಖ್ಯ ಹಣಕಾಸು ಅಧಿಕಾರಿ, ಸಿಐಎಸ್​​ಒ, ಜಿಎಂ (ಪರೀಕ್ಷಾ ಭದ್ರತೆ) ಮತ್ತು ಜಿಎಂ (R ಮತ್ತು D ಮತ್ತು ಸೈಕೋಮೆಟ್ರಿಕ್ಸ್) ಸೇರಿದಂತೆ ಹತ್ತು ಹೊಸ ವೃತ್ತಿಪರ ಹುದ್ದೆಗಳಿಗೆ ವೃತ್ತಿಪರರ ಸೇರ್ಪಡೆಗೆ ಕ್ರಮ. ಅವರ ನೇಮಕಾತಿಗಾಗಿ ಅರ್ಜಿ ಆಹ್ವಾನ.
  • ಸೈಬರ್ ಭದ್ರತೆ, ಸೈಕೋಮೆಟ್ರಿಕ್ಸ್, ಪ್ರಶ್ನೆಪತ್ರಿಕೆ ವಿನ್ಯಾಸ ಮತ್ತು ಇತರೆ ವಿಶೇಷ ಕ್ಷೇತ್ರಗಳಿಗಾಗಿ ಖಾಸಗಿ ವಲಯದಿಂದ ವಿಷಯ ತಜ್ಞರ ನೇಮಕ.

ದೇಶದಲ್ಲಿ ಜಾರಿಯಲ್ಲಿರುವ ಅಧಿಕೃತ ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಕೇಂದ್ರ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ ಗೌಪ್ಯ ಕಾರ್ಯಾಚರಣೆಗಳ ವಿನ್ಯಾಸ, ಪ್ರತ್ಯೇಕ ಸುರಕ್ಷಿತ ಕೊಠಡಿಗಳು, ಇಂಟರ್​ನೆಟ್​ ಸಂಪರ್ಕವಿಲ್ಲದ ಕಂಪ್ಯೂಟರ್​ ವ್ಯವಸ್ಥೆಗಳು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಡಿವೈಸ್​​ಗಳನ್ನು ಕಡ್ಡಾಯವಾಗಿ ಜಮಾ ಮಾಡಿಕೊಳ್ಳುವ ನಿಯಮಾವಳಿಗಳನ್ನು ಯುದ್ಧೋಪಾದಿಯಲ್ಲಿ ಸಂಪೂರ್ಣವಾಗಿ ಸುಧಾರಿಸುವಂತೆ ಸಚಿವರು ಆದೇಶಿಸಿದ್ದಾರೆ.

ಮತ್ತೊಂದೆಡೆ, ತನ್ನ ಎಲ್ಲಾ ಪರೀಕ್ಷಾ ಪ್ರಕ್ರಿಯೆಗಳ ಬಗ್ಗೆ ಸಮಗ್ರ ಮತ್ತು ಆಳವಾದ ಆಡಿಟ್​ (ತಪಾಸಣೆ) ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ತಿದ್ದುಪಡಿ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಕಡ್ಡಾಯ ನಿರ್ದೇಶನ ನೀಡಲಾಗಿದೆ.

ಜೂನ್​​ನಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆಯ ಮೂರು ಪತ್ರಿಕೆಗಳಾದ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಭಾನುವಾರ ಘೋಷಿಸಿದೆ. ಆ ಪತ್ರಿಕೆಗಳಲ್ಲಿ ಹಲವಾರು ದೋಷಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಇಂಗ್ಲಿಷ್ ಮತ್ತು ವಾಣಿಜ್ಯ ಪತ್ರಿಕೆಗಳು ಸೆಪ್ಟಂಬರ್ 9 ರಂದು ನಡೆದರೆ, ಸಮಾಜಶಾಸ್ತ್ರದ ಪರೀಕ್ಷೆ ಸೆಪ್ಟಂಬರ್ 10 ರಂದು ನಡೆಯಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ**ಶ್ರೀ ವರದ ಶಂಕರ ಪೂಜೆ ಮತ್ತು ಮಹಾಪ್ರಸಾದ**ರೈತರಿಂದ ಮತ್ತು ಬಿಜೆಪಿಯಿಂದ  ಲೋಡ್ ಶೆಡ್ಡಿಂಗ್ ವಿರೋಧಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ. ತನವ್ ಮೋಹನ್ ಗೆ ವರ್ಷದ ಕನ್ನಡಿಗ ಪ್ರಶಸ್ತಿರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪಿ.ಟಿ. ಪರಮೇಶ್ವರ ನಾಯ್ಕ ಪ್ರವಾಸಸಮಾಜ ಸಂಘಟನೆಯಲ್ಲಿ ಹಾನಗಲ್ ಕುಮಾರಸ್ವಾಮಿಗಳ ಕೊಡುಗೆ ಅನನ್ಯ-ಪ್ರೊ ಮಿಥುನ ಅಂಕಲಿ ಅಭಿಮತಬಳ್ಳಾರಿ: ಕಂಪ್ಲಿ ಮತ್ತು ಕುಡುತಿನಿ ವ್ಯಾಪ್ತಿಯ 3 ಗ್ರಾಮಗಳಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ - ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಮಾದಕ ವ್ಯಸನಮುಕ್ತ ಸಮಾಜದಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ: ಡಾ. ವೀರೇಂದ್ರ ಕುಮಾರ್ ಕರೆಗುಣಾತ್ಮ ಶಿಕ್ಷಣ, ಒಳ್ಳೆಯ ಸಂಸ್ಕಾರ ನೀಡುವುದು ಶಿಕ್ಷಕರ ಆಧ್ಯ ಕರ್ತವ್ಯ: ಶಾಸಕ ಂiಶವಂತರಾಯಗೌಡ ಪಾಟೀಲಬರ ಪೀಡಿತ ತಾಲೂಕು ಘೋಷಣೆ ಶೇ.೨೦೦ ಖಚಿತ-ಶಾಸಕ ನಾಡಗೌಡ