ಮಹಾಲಿಂಗಪುರ : ಈ ಜಗತ್ತಿನಲ್ಲಿ ಭಕ್ತಿಯಿಂದಲೇ ದೇವರನ್ನು ಸಾಕ್ಷಾತಕರಿಸಿದ ಮಹಾನ ದಾರ್ಶನಿಕ ನಾಡು ಕಂಡ ಶ್ರೇ? ಸಂತ ಭಕ್ತ ಕನಕದಾಸರು ಎಂದು ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು.
ಬುದ್ನಿ ಪಿ ಡಿ ಯ ಮೇಟಿ ಅವರ ತೋಟದಲ್ಲಿರುವ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಭಕ್ತ ಕನಕದಾಸ ನೂತನ ವೃತ್ತವನ್ನು ಕನಕದಾಸರ ಭಾವಚಿತ್ರದ ಮೇಲಿನ ಪರದೆ ಸರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ ದೇಶ ಅನೇಕ ಸಾಧು ಸಂತರನ್ನು ದಾರ್ಶನಿಕರನ್ನು, ಅವದೂತರನ್ನು, ಮೇಧಾವಿಗಳನ್ನು, ಸಿದ್ದರನ್ನು, ಸ್ವಾಮೀಜಿಗಳನ್ನು ಕಂಡಿದೆ ಆದರೆ ಅವರಲ್ಲಿ ತಮ್ಮ್ ಶ್ರೇ? ಭಕ್ತಿಯಿಂದಲೇ ದೇವರನ್ನು ಪ್ರತ್ಯಕ್ಷಕರಿಸಿದ ಜಗತ್ತಿನ ಏಕೈಕ ಸಂತ. ದಾಸ ಪರಂಪರೆಯಲ್ಲಿ ಬರುವ ದಾಸರಲ್ಲಿ ಕನ್ನಡ ಭಾ?ಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕೊಡುಗೆ ನೀಡಿದವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದೆ ಬಣ್ಣಿಸಲಾಗಿದೆ.ಅವರು ಹುಟ್ಟಿದ ನಾಡಿನಲ್ಲಿ ಹುಟ್ಟಿದ ನಾವುಗಳೇ ಪುಣ್ಯವಂತರು ಎಂದರು.
ನಂತರ ಮಾತನಾಡಿದ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಾಂತೇಶ್ ಹಿಟ್ಟಿನಮಠ "ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ "ಎನ್ನುವ ಕನಕದಾಸರ ಉಕ್ತಿಯಂತೆ ದಾಸರು ಜನರಲ್ಲಿ ಬೇರು ಬಿಟ್ಟಿದ್ದ ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು. ಉಡುಪಿಯ ಶ್ರೀ ಕೃ? ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು "ಬಾಗಿಲನು ತೆರೆದು ಸೇವೆಯನ್ನು ಕೊಡೊ ಹರಿಯೇ "ಹಾಡತೋಡಗಿದರು.ಆಗ ಅವರ ಭಕ್ತಿಗೆ ಮೆಚ್ಚಿ ಹಿಂಭಾಗದ ಗೋಡೆ ಒಡೆದು ಕೃ?ನ ವಿಗ್ರಹ ಹಿಮ್ಮುಖವಾಗಿ ತಿರುಗಿ ದರ್ಶನ್ ಕೊಟ್ಟ ಕೃ? ಇಂದಿಗೂ ಆ ಕಿಂಡಿ ಕನಕನ ಕಿಂಡಿಯಾಗಿ ಹಾಗೆ ಉಳಿದಿದ್ದೆ. ಸಾಕ್ಷಿ ಎಂದರು.
ಈ ಸಂಧರ್ಭದಲ್ಲಿ ಮಹಾದೇವ ಮಾರಾಪುರ, ಸಿದ್ದು ಶಿರೋಳ, ವೀರೇಶ್ ಆಸಂಗಿ, ಮಹಾಲಿಂಗಪ್ಪ ಜಕ್ಕಣ್ಣವರ, ಶ್ರೀಶೈಲ್ ಕಳ್ಯಾಗೊಳ, ಕರೆಪ್ಪ ಮೇಟಿ, ಅರ್ಜುನ್ ಮೇಟಿ, ಮಾರುತಿ ಕಳ್ಯಾಗೋಳ, ಹಣಮಂತ ಜಮಾದಾರ, ರಫೀಕ್ ಮಾಲದಾರ,ಪರಶು ಕೊಣ್ಣೂರ, ಮಹಾಲಿಂಗಪ್ಪ ಬಾಡಗಿ, ಕರೆಪ್ಪ ಪೂಜೇರಿ, ಹಣಮಂತ ಅವಟಗಿ, ದುಂಡಪ್ಪ ಮಾದರ, ಸೇರಿ ಹಲವರು ಇದ್ದರು. ಮಹಾಮಂಗಳಾರತಿಯೊಂದಿಗೆ ಮಹಾಪ್ರಸಾದ ಜರುಗಿತು.