LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಪಟ್ಟಣದ ಸ್ವಚ್ಛತೆ ಆರೋಗ್ಯಕ್ಕೆ ಪೂರಕ: ಈರಣ್ಣ ದಡ್ಡಿ

 

ರನ್ನ ಬೆಳಗಲಿ, ಅ. ೩: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಆಶ್ರಯದಲ್ಲಿ ‘ಸ್ವಚ್ಛತಾ ಹಿ ಸೇವಾ?೨೦೨೬’ ಕಾರ್ಯಕ್ರಮವನ್ನು ಪಟ್ಟಣದ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ, ಒಗ್ಗೂಡಿದ ಪ್ರಯತ್ನದಿಂದ ಪಟ್ಟಣದ ಸ್ವಚ್ಛತೆ ಹಾಗೂ ನೈರ್ಮಲ್ಯದಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಸಾಧ್ಯ. ಸ್ವಚ್ಛ ಪರಿಸರವು ಸಾರ್ವಜನಿಕರ ಆರೋಗ್ಯಕ್ಕೆ ಪೂರಕವಾಗಿದ್ದು, ಪೌರಕಾರ್ಮಿಕರೊಂದಿಗೆ ನಾಗರಿಕರೂ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಮನೆ ಹಾಗೂ ಅಂಗಡಿಗಳಲ್ಲಿ ಕಸವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ವಿಲೇವಾರಿ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಿರುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದು ಸೇರಿದಂತೆ ಪರಿಸರ ಸಂರಕ್ಷಣಾ ಕ್ರಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸಿಬ್ಬಂದಿಗಳಾದ ಬಾಬು ಜಕಾತಿ, ಮಹಾಲಿಂಗ ಸಮೇರ, ರಾಜು ಮುಗಳಖೋಡ, ಉಮಾಶ್ರೀ ಜಾಡರ, ಶಿವಾನಂದ ಸುನ್ನಾಳ, ಸತ್ಯಪ್ಪ ಹನಗಂಡಿ, ಪೂನಂ ಕುಂಬಾರ ಸೇರಿದಂತೆ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಬನ್ನಿ ವಿನಿಮಯ ಸೌಹಾರ್ದತೆ, ಸಂಬಂಧ ಬೆಸೆಯಲಿದೆ-ಶಾಸಕ ರಾಜುಗೌಡ ವ್ಯಕ್ತಿಯ ಕಾಣೆ ಠಾಣೆಗೆ ದೂರು * ಮೂರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ, ವಿಚಾರ ಸಂಕಿರಣ, ಕ್ರೀಡಾಕೂಟ ಇಂದಿನಿಂದ  ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲಸ್ವಾತಂತ್ರ್ಯ ಹೋರಾಟದ ಮೊದಲ ಕಿಚ್ಚು ಹೊತ್ತಿಸಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಾಜಿರೈತರು ಹಾಗೂ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನಜನ ಮನ ಸೆಳೆದ ಮಹಿಳೆಯರ ಬೈಕ್ ರ್‍ಯಾಲಿ ವೈಭವದ ‘ಚೆನ್ನಮ್ಮನ ಕಿತ್ತೂರು ಉತ್ಸವ - 2026’  ನಾಳೆಯಿಂದ ಪ್ರಾರಂಭ  : ಶಾಸಕ ಬಾಬಾಸಾಹೇಬ ಪಾಟೀಲ ಮೂರು ಕಾಮಗಾರಿಗಳಿಗೆ ಭೂಮಿಪೂಜೆ, ಚಿಕ್ಕುಬಾಗ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್