ಹೊಸಪೇಟೆ : ಚಾಪಲ ಗಡ್ಡ ಬಳಿ ಯ (ಸ್ಟೇಷನ್ ರಸ್ತೆ) ಸ್ಲಂ ಪ್ರದೇಶದ ಸ್ಲಂ ಬೋರ್ಡ್ ಕಚೇರಿಗೆ ಎ.ಇ.ಶಿವಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಸ್ಲಂ ಸಂಘಟನೆ ವತಿಯಿಂದ ಇಲ್ಲಿನ ಹಕ್ಕುಪತ್ರಗಳಲ್ಲಿ ಆಗಿರುವ ಲೋಪ ದೋಷಗಳನ್ನು ಸರಿಪಡಿಸಿ ನೋಂದಣಿಗೆ ಅರ್ಜಿ ಸ್ವೀಕರಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.*
ಈ ಸಂದರ್ಭದಲ್ಲಿ ಮಾತನಾಡಿದ ಎ.ಇ ಶಿವಕುಮಾರ್ ಮುಂದಿನ ವಾರ ಸ್ಲಂ ಬೋರ್ಡ್, ಸ್ಲಂ ಜನರ ಸಂಘಟನೆ ಪದಾಧಿಕಾರಿಗಳು ಹಾಗೂ ಸ್ಥಳೀಯ ನಗರ ಸಭೆ ಸದಸ್ಯರನ್ನು ಒಳಗೊಂಡಂತೆ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದು ತಿಳಿಸಿದರು.
*ಈ ಸಂದರ್ಭದಲ್ಲಿ ಸ್ಲಂ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಮಹಿಳಾ ಘಟಕದ ಅಧ್ಯಕ್ಷರಾದ ಹುಲಿಗೆಮ್ಮ, ಯುವ ಘಟಕದ ಭರತ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು*


