ಸಂಕೇಶ್ವರ : ಸ್ಥಳೀಯ ನಿಡಸೋಸಿ ರಸ್ತೆಯಲ್ಲಿನ ರಾಯಲ್ ಕಾಲನಿದಲ್ಲಿನ ಪುರಸಭೆಯ ಜಾಗೆಯಲ್ಲಿ ಬಸವ ವೃತ ನಿರ್ಮಿಸಲು ಅನುಮತಿ ನೀಡಬೇಕು ಎಂದು ರಾಯಲ್ ಕಾಲನಿಯ ನಿವಾಸಿಗಳು ಪುರಸಭೆಯ ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಅವರಗೆ ಮನವಿ ಸಲ್ಲಿಸಿದರು.
ಪಟ್ಟಣದ ವಾರ್ಡ ನಂ1ರಲ್ಲಿ ಬರುವ ಪುರಸಭೆಯ ಜಾಗೆ ಸರ್ವೆ.ನಂ. 266/2ರಲ್ಲಿ ಬಸವ ವೃತ ನಿರ್ಮಿಸಲು ಅಲ್ಲಿನ ನಿವಾಸಿಗಳು ಸಭೆ ನಡೆಸಿ, ವೃತ ನಿರ್ಮಿಸಲು ಎಲ್ಲರು ತೀರ್ಮಾನಿಸಿದ್ದು, ಮುಖ್ಯಾಧಿಕಾರಿಗಳು ಬಸವ ವೃತ ನಿರ್ಮಿಸಲು ಅನುಮತಿ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿಗಳು ಮನವಿಯನ್ನು ಸ್ವೀಕರಿಸಿ, ಮಾತನಾಡಿ ತಮ್ಮ ಮನವಿಯನ್ನು ಆಡಳಿತಾಧಿಕಾರಿಗಳ ಗಮನಕ್ಕೆ ತರುವುಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶ್ರೀಕಾಂತ ಪರೀಟ,
ಬಿ.ಬಿ ಚಂಡಕಿ, ದುಂಡಪ್ಪಾ ವಾಳಕಿ, ಕಾಡಪ್ಪಾ ನಾಯಕ, ಸತೀಶ ಭಾವಚಿ ಸೇರಿದಂತೆ ಅನೇಕರು ಹಾಜರಿದ್ದರು.


