LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಇವಿಎಂ ವಿವಿಪ್ಯಾಟ್ ಪ್ರಕರಣದಲ್ಲಿ ಸುಪ್ರೀಂ ವಿಚಾರಣೆ ಮುಕ್ತಾಯ: ತೀರ್ಪು ಕಾಯ್ದಿರಿಸಿದ ಕೋರ್ಟ್

ನವದೆಹಲಿ, ಏಪ್ರಿಲ್ 24: ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಇವಿಎಂ ಮತ್ತು ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕು  ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿದೆ. ಇದೂಗ ತೀರ್ಪನ್ನು ಕಾಯ್ದಿರಿಸಿದೆ.

ಅರ್ಜಿ ವಿಚಾರಣೆ ವೇಳೆ ನಡೆದ ವಾದ ಪ್ರತಿವಾದದ ವೇಳೆ ನ್ಯಾಯಪೀಠದ ಜಡ್ಜ್​ಗಳು ಕೆಲವಿಷ್ಟು ಮಹತ್ವದ ಅನಿಸಿಕೆಗಳನ್ನು ತೋರ್ಪಡಿಸಿದ್ದುಂಟು. ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬದಲು ಹಿಂದಿನ ಬ್ಯಾಲಟ್ ಪೇಪರ್ ವೋಟಿಂಗ್ ವ್ಯವಸ್ಥೆ ಬಗ್ಗೆ ಜಡ್ಜ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ, ವಿವಿಪ್ಯಾಟ್ ವಿಚಾರದಲ್ಲಿ ನ್ಯಾಯಾಧೀಶರು ಕಾಮೆಂಟ್ ಮಾಡಿದ್ದು, ಚುನಾವಣೆ ನಡೆಸಲೆಂದು ಬೇರೆ ಸ್ವಾಯತ್ತ ಸಂಸ್ಥೆ ಇದೆ. ಚುನಾವಣೆಯನ್ನು ಕೋರ್ಟ್ ನಿಯಂತ್ರಿಸಲು ಆಗಲ್ಲ ಎಂದೂ ಹೇಳಿದ್ದಾರೆ.

ಇವಿಎಂಗಳಲ್ಲಿ ಚಲಾಯಿಸಿದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್​ನೊಂದಿಗೆ ಪರಿಶೀಲನೆ ನಡೆಸಬೇಕು ಎಂದು ವಿವಿಧ ಅರ್ಜಿಗಳು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆ ಆಗಿದ್ದವು. ಅವೆಲ್ಲವನ್ನೂ ಒಟ್ಟು ಸೇರಿಸಿ ನ್ಯಾಯಪೀಠ ವಿಚಾರನೆ ನಡೆಸಿದೆ. ಈ ನ್ಯಾಯಪೀಠದಲ್ಲಿ ನ್ಯಾ| ಸಂಜೀವ್ ಖನ್ನ ಮತ್ತು ನ್ಯಾ| ದೀಪಂಕರ್ ದತ್ತ ಇದ್ದಾರೆ. ಅರ್ಜಿದಾರರ ಪರವಾಗಿ ಪ್ರಶಾಂತ್ ಭೂಷಣ್ ಮೊದಲಾದ ಹಿರಿಯ ವಕೀಲರು ವಾದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ಮುದ್ದೇಬಿಹಾಳ ಬರಪೀಡಿತ ತಾಲೂಕು ಘೋಷಣೆ: ರೈತರಿಗೆ ಸಿಹಿ ಸುದ್ದಿಇಂದು ಅನಂತಪೂರ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಸಭೆ ವ್ಯಾಪಾರಸ್ಥರಿಗೆ ಆಧುನಿಕ ಮಳಿಗೆ, ಗ್ರಾಹಕರಿಗೆ ವಾಹನ ನಿಲುಗಡೆ ವ್ಯವಸ್ಥೆ; ₹15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ: ಶಾಸಕ ನಾಡಗೌಡವಂದೇ ಮಾತರಂ ಮೊಟಕು ಖಂಡಿಸಿ ಬೀಳಗಿಯಲ್ಲಿ ಬಿಜೆಪಿ ಪ್ರತಿಭಟನೆ: ರಾಜ್ಯಪಾಲರಿಗೆ ಮನವಿಹೊಸಪೇಟೆ ಸಕ್ಕರೆ ಕಾರ್ಖಾನೆ ಆರಂಭಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ: ರೈತ ಸಂಘ ಎಚ್ಚರಿಕೆಇಂದು ಯರಗಟ್ಟಿಯಲ್ಲಿ ಜಿಲ್ಲಾ ಮಟ್ಟದ ಪ್ರಜಾಸೇವೆ ಅಂದೋಲನ ಸಭೆಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ