LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಸೆ ೨೫ ರಂದು ರಜತ ಮಹೋತ್ಸವ, ನೂತನ ಕಟ್ಟಡದ ಉದ್ಘಾಟನೆ

 

, ಜಮಖಂಡಿ ;ನಗರದ ಗಂಗಾ ಪರಮೇಶ್ವರಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಸೆ.೨೫ ಶುಕ್ರವಾರ ದಂದು ಬಾಕ್ಷೆಗಲ್ಲಿಯ ಚಾವಡಿಯ ಹತ್ತಿರದ ನೂತನ ಕಟ್ಟಡದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಹೇಶ ಕೋಳಿ ತಿಳಿಸಿದರು. ಮಂಗಳವಾರ ಪತ್ರಿಕಾಭವನ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಘ ಸ್ಥಾಪನೆಯಾಗಿ ೨೫ ವರ್ಷಗಳಾಗಿವೆ. ಠೇವಣಿ ದಾರರು, ಶೇರು ದಾರರು, ಸಾಲಗಾರರ ಸಹಕಾರ ದಿಂದ ಸ್ವಂತ ಕಟ್ಟಡ ಸಿದ್ಧಗೊಂಡಿದೆ. ೪ ಕೋಟಿ ರೂಪಾಯಿ ದುಡಿಯುವ ಬಂಡವಾಳ ವಿದ್ದು, ೧೦೫೦ ಶೇರುದಾರರಿದ್ದಾರೆ, ೩೧ ಲಕ್ಷ ಶೇರು ಬಂಡವಾಳ ವಿದ್ದು ೪.೮೫ ಲಕ್ಷ ಒಟ್ಟು ವಹಿವಾಟಿ ನೊಂದಿಗೆ ಸಂಘ ಲಾಭದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು, ಈ ಬಾರಿ ಎಲ್ಲ ಶೇರು ದಾರರಿಗೆ ಶೇ,೧೦ ರಷ್ಟು ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುತ್ತಿನ ಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮಿಗಳು, ಹಾವೇರಿಯ ಅಂಬಿರ ಚೌಡಯ್ಯ ಗುರುಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮಿಗಳು, ಓಲೆಮಠದ ಆನಂದ ದೇವರು, ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು, ಸಿದ್ಧಕ್ಷೇತ್ರದ ಸಿದ್ಧಮುತ್ಯಾ, ಮುಖ್ಯ ಅತಿಥಿಗಳಾಗಿ ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿಶಾಸಕ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ, ಜಿ,ಎಸ್,ನ್ಯಾಮಗೌಡ, ಮಾಜಿ ಸಚಿವ ಅಜಯ ಕುಮಾರ ಸರ ನಾಯಕ ಸೇರಿ ದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರು, ಸಿಬ್ಬಂದಿಗಳು ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಕೃಷ್ಣಪ್ಪ ತಳವಾರ, ಉಮೇಶ ಗಸ್ತಿ, ರಾಮು ತಳವಾರ, ಚೆನ್ನಪ್ಪ ಕೋಳಿ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಕಾರ್ಮಿಕರು ಸ್ವಚ್ಚತೆಯ ಕಾವಲುಗಾರರು-ಸಿದ್ದಲಿಂಗಶ್ರೀಶಿವಾಪೂರ(ಹ) ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ೨೬ ಲಕ್ಷ ರೂ. ಲಾಭಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪ್ರವಾದಿ ಮಹಮ್ಮದರ ಸಂದೇಶ.ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಪ್ರೊ. ಎ. ಪಿ. ಜ್ಞಾನ ಪ್ರಕಾಶ ಬ್ಯಾಂಕ್ ಎಂಬುದು ಸ್ಪಂದನ ಪ್ರತಿಸ್ಪಂದನದಿಂದ ಬೆಳೆಯುವ ಕ್ಷೇತ್ರ-ಶ್ರೀಕಾಂತಸಂಕೇಶ್ವರ ಸೌಹಾರ್ದ ಸಹಕಾರಿಗೆ ₹91.76 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ. 25 ಡಿವಿಡೆಂಡ್ ಘೋಷಣೆಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿ: ವಿಪುಲ್ ಬನ್ಸಲ್