LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Belagavi

ಶ್ರೀ ಮಹಾವೀರ ಸಹಕಾರಿ ಬ್ಯಾಂಕ್‌ಗೆ ₹4.01 ಕೋಟಿ ನಿವ್ವಳ ಲಾಭ

 ಹುಕ್ಕೇರಿ: ಶ್ರೀ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಕಳೆದ 2025-26 ನೇ ಸಾಲಿನ ವರ್ಷದಲ್ಲಿ ಪ್ರಗತಿ ಪಥದತ್ತ ಸಾಗಿದ್ದು, ₹4.01 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಮಹಾವೀರ ನಿಲಜಗಿ ಹೇಳಿದರು.

 ಮಾಧ್ಯಮದವರೊಂದಿಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ತತ್ವದ ಮೂಲಕ ಬ್ಯಾಂಕ್ನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಆದ್ಯತೆ ನೀಡಲಾಗಿದೆ. ಬ್ಯಾಂಕ್ನ ಮುಂದಿನ ಕಾರ್ಯ ಯೋಜನೆ ಗಳು ಎಲ್ಲವೂ ಕ್ರಿಯಾತ್ಮಕ ಹಾಗೂ ಜನೋಪಕಾರಿಯಾಗಿವೆ. ಗ್ರಾಹಕ- ಸದಸ್ಯರ ಏಳಿಗೆಯಲ್ಲಿ ಬ್ಯಾಂಕಿನ ಏಳಿಗೆ ಇದೆಂಬ ಭಾವನೆ ಮತ್ತು ಧೈಯದೊಂದಿಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಒಟ್ಟು 3042 ಸದಸ್ಯರಿದ್ದು, ಪ್ರಧಾನ ಕಚೇರಿ ಸೇರಿ ಸಹಕಾರಿಯು ಒಟ್ಟು 17 ಶಾಖೆಗಳನ್ನು ಹೊಂದಿದೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಹಕಾರಿ ಒಟ್ಟು ವಾರ್ಷಿಕ ₹1333 ಕೋಟಿ ₹96 ಲಕ್ಷ ₹73 ಸಾವಿರ ವಹಿವಾಟು ನಡೆಸಿದೆ. 43.28 ಲಕ್ಷಶೇರು ಬಂಡವಾಳವಿದೆ. ₹11.66 ಕೋಟಿ ಕಾಯ್ದಿಟ್ಟ ಹಾಗೂ 2 2, 351.76 ಕೋಟಿ ದುಡಿಯುವ ಬಂಡವಾಳವಿದೆ. ₹275 ಕೋಟಿ, 25 ಲಕ್ಷ ಸಾಲ ವಿತರಿಸಲಾಗಿದ್ದು, ₹312 ಠೇವುಗಳಿವೆ . ₹48.85 ಕೋಟಿ ಹೂಡಿಕೆಗಳಿದ್ದು, ₹4.01 ಕೋಟಿ ಲಾಭ ಗಳಿಸಿದ್ದು. ಶೇ.25 ರಷ್ಟು ಲಾಭಾಂಶವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ 

ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಸುಕುಮಾರ ಖತಗಲ್ಲಿ, ಬಾಹುಬಲಿ ಸೊಲ್ಲಾಪುರೆ, ಭರಮಪ್ಪ ಲಟ್ಟಿ , ಸುಕುಮಾರ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಅಕ್ಕಪ್ಪ ಖತಗಲ್ಲಿ, ಅಶೋಕ ಪಾಟೀಲ

ಪ್ರಜ್ವಲ ನಿಲಜಗಿ, ಪಾರೇಶ ಗದ್ದಿ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಸಿದ್ದಪ್ಪ ಕಂಠಿಕಾರ, ಅಶೋಕ ನಾಯಿಕ, ಮುಖ್ಯ ಕಾರ್ಯ ನಿರ್ವಾಹಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷ ರಜಪೂತ, ಪ್ರವೀಣ ಪಾಟೀಲ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಕ್ರವಾರ ಇಳಿಕೆ ಕಂಡರೂ ವಾರದ ಅಂತ್ಯಕ್ಕೆ ಲಾಭದಲ್ಲೇ ಮುಕ್ತಾಯಗೊಂಡ ಷೇರು ಮಾರುಕಟ್ಟೆ₹23,731 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದನೆಗೆ ಉತ್ತೇಜನಉದಯೋನ್ಮುಖ ಅವಕಾಶಗಳಿಗೆ ಯುವಕರನ್ನು ಸಿದ್ಧಪಡಿಸಲಿ ಶಿಕ್ಷಣ ವ್ಯವಸ್ಥೆಕಿತ್ತೂರು ಸಂಸ್ಥಾನದ ಭವ್ಯ ಪರಂಪರೆಯ ಸಂರಕ್ಷಣೆ: ಐತಿಹಾಸಿಕ ವೈಭವದ ಮರುಜೀವಕ್ಕೆ  ಬೇಕಾಗಿದೆ ಸಮಗ್ರ ಯೋಜನೆರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನ ಕೊಡಿ: ಕುರುಬ ಮುಖಂಡರ ಆಗ್ರಹಬಸರಕೋಡ ಮೂರ್ತಿ ಕಳ್ಳರು ದರ್ಗಾ ಜೇಲಿಗೆನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಅಥಣಿ ಪೊಲೀಸರ ಕಾರ್ಯಾಚರಣೆ – ಕಳವಾದ ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಸಮುದಾಯ ಭವನ ಸಹಕಾರಿ: ಈರಣ್ಣ ಕಡಾಡಿಬೆಳಗಾವಿಯ ಸಾವಿರಾರು ಕೋಟಿ 'ಶಿವಂ ಅಸೋಸಿಯೇಟ್ಸ್' ವಂಚನೆ ಪ್ರಕರಣ: ಉದ್ಯಮಿ ಶಿವಾನಂದ ನೀಲಣ್ಣನವರ್‌ ಆಸ್ತಿಗಳ ಮೇಲೆ ಇಡಿ ತ್ರಿಮುಖ ಸಮರ!ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಬದಲಾವಣೆ ಬಿರುಗಾಳಿ: ಬಂಡಾಯ ಶಮನಕ್ಕೆ 'ಹೈಕಮಾಂಡ್ ಶಸ್ತ್ರಚಿಕಿತ್ಯೆ'!