ವಿಜಯನಗರ: ಜಿಲ್ಲಾ ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಹೂಡಾ ಮಾಜಿ ಹೂಡಾ ಅದ್ಯಕ್ಷ ಆರ್. ಕೊಟ್ರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಯ್ಯಾಳಿ ತಿಮ್ಮಪ್ಪನವರಿಂದ ತೆರವಾಗಿದ್ದ ಸ್ಥಾನಕ್ಕೆಆರ್. ಕೊಟ್ರೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಪಂಪ ಕಲಾಮಂದಿರದಲ್ಲಿ ಸೋಮವಾರ ನಡೆದ ಕುರುಬರ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಹೊಸಪೇಟೆ ನಗರ, ಹೊಸಪೇಟೆ ಗ್ರಾಮೀಣ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹಡಗಲಿ ತಾಲೂಕುಗಳಿಂದ 45 ಜನ ನಿರ್ದೇಶಕರನ್ನೊಳಗೊಂಡಿರುವ ಸಂಘದ ಸಭೆ ಜರುಗಿ .ಹೊಸ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು.
ಅಧ್ಯಕ್ಷರು : ಆರ್. ಕೊಟ್ರೇಶ್ . ಪ್ರಧಾನ ಕಾರ್ಯದರ್ಶಿ: ಮಹೇಶ್, ವಕೀಲರು
. ಗೌರವಾಧ್ಯಕ್ಷ: ಅಯ್ಯಾಳಿ ತಿಮ್ಮಪ್ಪ
ಖಜಾಂಚಿ: ಕೂರಿ ಶಿವಮೂರ್ತಿ
. ಕಾರ್ಯಾಧ್ಯಕ್ಷ: ದಲ್ಲಾಲಿ ಕುಬೇರ
ಉಪಾಧ್ಯಕ್ಷ : ನಶಿಪುಡಿ ಕೋಲ್ ಶಾಂತಪ್ಪ, ನಾಗೇಶ್, ಜಿ. ಮಂಜುನಾಥ, ಪರಶುರಾಮಪ್ಪ
ಸಂಘಟನಾ ಕಾರ್ಯದರ್ಶಿಗಳಾಗಿ : ಜಿ. ಈಶ್ವರಪ್ಪ, ಬಪ್ಪಲಾಪುರ ಬಸವರಾಜ, ಎನ್. ಪಾಂಡುರಂಗ
ಸೇರಿದಂತೆ ಇಪ್ಪತ್ತು ಜನ ಪದಾಧಿಕಾರಿಗಳು ಹಾಗೂ 25 ಜನ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು: ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜಿ. ರಾಮಚಂದ್ರಗೌಡ, ಮುಟುಗನ ಹಳ್ಳಿ ಕೊಟ್ರೇಶ್, ಉಉಜ್ಜಿನಿ ರುದ್ರಪ್ಪ, ಚೆನ್ನಪ್ಪ ಸಾಹುಕಾರ, ಎಂ. ವೀರೇಶ್, ಗೋಪಾಲಕೃಷ್ಣ, ಎಲ್. ಆನಂದ, ಎರಿಸ್ವಾಮಿ, ಮೈನಳ್ಳಿ ಶಿವರಾಜ್, ಹನುಮೇಶ್, ಸಾಲಿ ವೆಂಕಟೇಶ್, ಪಿ. ಸಿದ್ದೇಶ್, ಬಸವರಾಜ ಮೇಟಿ, ಪಂಪಯ್ಯ, ಸದ್ದೋಜಾತಪ್ಪ, ಭಂಡಾರಿ ಭರಮಪ್ಪ, ಹಡಗಲಿ ಹುಲುಗಪ್ಪ, ತಾಯಪ್ಪ, ಹಲಗೂರು ಮಂಜುನಾಥ, ಹರಪನಹಳ್ಳಿ ವಸಂತಪ್ಪ ಸೇರಿದಂತೆ ದಾನಪ್ಪ ಉಪಸ್ಥಿತರಿದ್ದರು.