LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗಾಳಿ ಮಳೆಗೆ ಧ್ವಂಸಗೊಂಡ ತಡೆಗೋಡೆ ಮತ್ತು ಶೌಚಾಲಯ. 

ರನ್ನ ಬೆಳಗಲಿ: ಜು.೧೬., ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೋಟ ನಂಬರ್ -೦೧ರ ಶಾಲಾ ಕಾಂಪೌಂಡ್, ಶೌಚಾಲಯ ಮತ್ತು ಧ್ವಜ ಸ್ತಂಭದ ಕಟ್ಟೆ ಭಾರಿ ಮಳೆ ಹಾಗೂ ಭಾರಿ ಗಾಳಿಯಿಂದ ಆವರಣದಲ್ಲಿದ್ದ ಬೃಹದಾಕಾರದ ಅರಳಿಮರ ಉರಳಿ  ದಿನಾಂಕ ೧೧/೦೫/೨೦೨೬ ರಂದು ಸಂಪೂರ್ಣ ಬಿದ್ದಿರುವ ಮಾಹಿತಿಯ ಕುರಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಯಮನಪ್ಪ ಉಸಳಿ ಮಾತನಾಡಿ ಸಂಬಂಧಪಟ್ಟ ಸಿಆರ್ಪಿ ಮುಖಾಂತರ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ,ಪಟ್ಟಣ ಪಂಚಾಯಿತಿಗೆ ಮತ್ತು ತಾಲೂಕಾ ದಂಡಾಧಿಕಾರಿಗಳಿಗೆ, ಶಾಲೆಯ ಮತ್ತು ಮಕ್ಕಳ ಸುರಕ್ಷತೆ ಹಿತ ದೃಷ್ಟಿಯಿಂದ ಶಾಲಾ ಕಾಂಪಾಂಡನ್ನು ತಾಲೂಕಿನ ಅತಿವೃಷ್ಟಿ ಅನುದಾನ ಮತ್ತು ವಿಶೇ? ಅನುದಾನಡಿಯಲ್ಲಿ ತುರ್ತಾಗಿ ನಿರ್ಮಾಣ ಮಾಡಿ ಕೊಡಬೇಕೆಂದು. ಕಚೇರಿಗಳಿಗೆ ಮನವಿ ಪತ್ರ ಸಲ್ಲಿಸಿ,ವಿನಂತಿಸಿ ಕೊಂಡರು. ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ವೃಂದ,ಮಕ್ಕಳಿಗೆ ಶೌಚಾಲಯ ಸಮಸ್ಯೆ ತಲೆದೂರುತ್ತಿದೆ,ಅಲ್ಲದೆ ಕೊಳವೆ ಬಾವಿ ಕೊರೆದರು ಅದಕ್ಕೆ ಪಂಪ್ಸೆಟ್ ಅಳವಡಿಕೆ ಇಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕೂಡ ತಲೆದೂರಿದೆ. ಒಂದರಿಂದ ಐದನೇ ತರಗತಿ ಹೊಂದಿರುವ ನಮ್ಮ ಶಾಲೆಯು ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವುದರ ಜೊತೆಗೆ ಎಸ್‌ಡಿಎಂಸಿ ಸರ್ವ ಸದಸ್ಯರು ಜೊತೆ ಸೇರಿ ಅಭಿವೃದ್ಧಿ ಮಾಡಿ ಅತ್ಯುತ್ತಮ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶಾಲೆ, ಈಗ ಭಾರಿ ಮಳೆ ಗಾಳಿಯಿಂದ ಧ್ವಂಸಗೊಂಡ. ನಮ್ಮ ಶಾಲೆಯ ಶೌಚಾಲಯ, ಕಂಪೌಂಡ್ ಮತ್ತು ಧ್ವಜ ಸ್ತಂಭದ ಕಟ್ಟೆಯನ್ನು ಆದ? ಬೇಗ ಪುನಃ ನಿರ್ಮಾಣ ಮಾಡಿ ಕೊಡಬೇಕೆಂದು.ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಉಪಾಧ್ಯಕ್ಷ ಕುಮಾರ ವಗ್ಗನವರ, ಭೀಮನಗೌಡ ಪಾಟೀಲ,ಮಹಾಲಿಂಗಪ್ಪ ಲಾಗದವರ,ಜೋತೆಪ್ಪ ಕಡಪಟ್ಟಿ,ಶೇಖರ್ ಬದ್ರಶೇಟ್ಟಿ,ಶಿವಪ್ಪ ಹಂಚಿನಾಳ,ಮಾನಿಂಗ ಕಡಪಟ್ಟಿ,ಅಜಿತ ಆಲ್ಗೂರ,ಬಸಪ್ಪ ರಾಮದುರ್ಗ,ಆನಂದ ಪಾಟೀಲ ಮತ್ತು ಎಸ್ ಡಿ ಎಮ್ ಸಿ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ: ತೀವ್ರ ರಕ್ತಸ್ರಾವ, ಆಸ್ಪತ್ರೆಗೆ ದಾಖಲುಸಂಗ್ರಹಿತ ಅಧಿಕೃತ ಲಿಂಗಾಯತ ಧರ್ಮದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಹಂಚಲಾಗುವುದು : ಡಾ.ಎಸ್ ಎಮ್ ಜಾಮದಾರಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮಹಾತ್ಮ ಗಾಂಧಿ ಪುತ್ಥಳಿಗೆ ಪೂಜೆಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರು