ಬಳ್ಳಾರಿ,ಅ.30: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಹಾಗೂ ಅವರ ಹಕ್ಕುಗಳನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಳ್ಳಾರಿಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ. ದೇವರಡ್ಡಿ ಅವರು ಹೇಳಿದರು.
ಗುರುವಾರ, ನಗರದ ಕೋಟೆ ಪ್ರದೇಶದ ಸಂತ ಜಾನರ ಪ್ರೌಢಶಾಲೆಯಲ್ಲಿ ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ, ಜಿಲ್ಲಾಡಳಿತ, ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸುರಕ್ಷಿತ ಬಚ್‌ಪನ್ ಅಭಿಯಾನ’ ಅಂಗವಾಗಿ ಆಯೋಜಿಸಿದ್ದ ಪೋಕ್ಸೋ ಕಾಯ್ದೆ-2012 ಕುರಿತ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2012ರಲ್ಲಿ ದೇಶದಲ್ಲಿ ಜಾರಿಗೆ ಬಂದ ಪೋಕ್ಸೊ ಕಾಯ್ದೆಯು 18 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಿಂದ ರಕ್ಷಿಸುವ ಉದ್ದೇಶ ಹೊಂದಿದೆ. ಈ ಕಾಯ್ದೆಯು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿರದೆ, ಗಂಡುಮಕ್ಕಳ ರಕ್ಷಣೆಗೂ ಸಮಾನವಾಗಿ ಅನ್ವಯಿಸುತ್ತದೆ. ಅಪರಾಧ ಎಸಗುವವರು ಯಾರೇ ಆಗಿರಲಿ, ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರೂ, ಮನುಷ್ಯನ ಆತ್ಮಸಾಕ್ಷಿಯೇ ಎಲ್ಲಕ್ಕಿಂತ ಮಿಗಿಲಾದ ಕಾನೂನು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸಮಾಜಕ್ಕೆ ಹಾನಿಯಾಗದಂತೆ ಬದುಕಿದರೆ ಯಾವುದೇ ಕಠಿಣ ಕಾನೂನುಗಳ ಅಗತ್ಯವೇ ಇರುವುದಿಲ್ಲ. ಆದರೆ ವಿಕೃತ ಮನಸ್ಸುಗಳಿಂದಾಗಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಕಾರಣ, ಇಂತಹ ಕಾಯ್ದೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇವಲ ಅಂಕಪಟ್ಟಿ, ಪದವಿ ಅಥವಾ ಪದಕಗಳು ಮಾತ್ರ ಜೀವನದ ನಿಜವಾದ ಸಾಧನೆಯಲ್ಲ. ತಂದೆ-ತಾಯಿ ಹಾಗೂ ಗುರು-ಹಿರಿಯರನ್ನು ಗೌರವಿಸಿ, ಸಮಾಜದಲ್ಲಿ ಉತ್ತಮ ನಡವಳಿಕೆಯೊಂದಿಗೆ ಇತರರಿಗೆ ನೆರವಾಗುತ್ತಾ ಬದುಕುವುದು ನಿಜವಾದ ಸಾಧನೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ 18 ವಷÀðಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬರೂ ಮಕ್ಕಳೇ. ಮಕ್ಕಳ ಸುರಕ್ಷತೆಗಾಗಿ ಪೋಕ್ಸೊದಂತಹ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಆದರೆ ಕೇವಲ ಕಾನೂನಿನಿಂದ ಮಾತ್ರ ರಕ್ಷಣೆ ಸಾಧ್ಯವಿಲ್ಲ; ಪ್ರತಿಯೊಬ್ಬ ಮಗುವಿನ ಸುರಕ್ಷತೆಯು ಮೊದಲು ಮನೆಯಿಂದ ಮತ್ತು ಶಾಲೆಯಿಂದಲೇ ಆರಂಭವಾಗಬೇಕು ಎಂದು ತಿಳಿಸಿದರು.
ಹದಿಹರೆಯದ ವಯಸ್ಸಿನಲ್ಲಿ ಮೊಬೈಲ್ ಬಳಕೆ ಮತ್ತು ಆಕರ್ಷಣೆಗಳಿಂದಾಗಿ ವಿದ್ಯಾರ್ಥಿಗಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಮ್ಮತಿಗೂ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ ಎಂಬುದನ್ನು ನೆನಪಿಸಿದ ಅವರು, ವಿದ್ಯಾರ್ಥಿಗಳು ಕುದುರೆಯಂತೆ ತಮ್ಮ ಏಕಾಗ್ರತೆಯನ್ನು ಕೇವಲ ವಿದ್ಯಾಭ್ಯಾಸದ ಕಡೆಗೆ ಮಾತ್ರ ಕೇಂದ್ರೀಕರಿಸಬೇಕು. ಈಗ ಕಷ್ಟಪಟ್ಟು ಓದಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಳ್ಳಾರಿ ನಗರ ಡಿ.ವೈ.ಎಸ್.ಪಿ ಹಾಗೂ ವಿಶೇಷ ಮಕ್ಕಳ ಪೊಲೀಸ್ ಘಟಕದ ಅಧಿಕಾರಿ ಗೋವಿಂದ್ ರಾಜು ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೆರೆಹೊರೆಯವರು ಮತ್ತು ಪರಿಚಿತರಿಂದಲೇ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಅಹಿತಕರ ಘಟನೆ ನಡೆದರೂ ಮುಚ್ಚಿಡದೆ ತಕ್ಷಣ ಪಾಲಕರು, ಶಿಕ್ಷಕರು ಅಥವಾ ನಂಬಿಕಸ್ಥ ಸ್ನೇಹಿತರ ಗಮನಕ್ಕೆ ತರಬೇಕು. ಇಲ್ಲವೇ ಸಹಾಯವಾಣಿ ಸಂಖ್ಯೆ 112, 1098 ಗೆ ಕರೆಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಮಂಜುಳಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬಳಿಕ ಸಂಸ್ಥೆಯ ತರಗತಿ ಕೊಠಡಿಗಳಿಗೆ ಗಣ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ ಟಿ.ಎಂ., ಶಾಲೆಯ ವ್ಯವಸ್ಥಾಪಕ ಫಾ. ಫ್ರಾನ್ಸಿಸ್, ಪ್ರಾಂಶುಪಾಲ ಸಣ್ಣ ಶಿವರಾಮ್ ಮತ್ತು ಮುಖ್ಯಗುರು ಆರೋಗ್ಯ ದಾಸ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು