ರನ್ನ ಬೆಳಗಲಿ: ಅ.೩೦., ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಜರುಗಿದ ರಾಜ್ಯಮಟ್ಟದ ನೆಟ್ಬಾಲ್ ಕ್ರೀಡಾಕೂಟದಲ್ಲಿ ರನ್ನ ಬೆಳಗಲಿಯ ಎಸ್ಜಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿ ತೃತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಯಶೋಧ ಚಂದ್ರಪ್ಪನವರ, ಯಶೋಧ ಗರಗದ, ಸುಧಾ ಲಾಲಿಬುಡ್ಡಿ, ಸವಿತಾ ಸವಳ್ಯಾಗೋಳ, ಸೌಮ್ಯ ಹೊಸಪೇಟೆ, ಭಾಗ್ಯಶ್ರೀ ಟಾಕಳೆ, ಅಕ್ಷತಾ ಹಿರೇಮಠ, ಕಾವೇರಿ ಸಂಕ್ರಟ್ಟಿ, ಸೃಷ್ಟಿ ದೊಡಮನಿ, ಲಕ್ಷ್ಮಿ ಅಮ್ಮನಗಿ, ವೇದಾ ಗಡ್ಡಿ ಹಾಗೂ ವೇದಾ ಪೂಜೇರಿ ಅವರ ಕ್ರೀಡಾ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ನಾಯಕ ಹಾಗೂ ತಂಡದ ವ್ಯವಸ್ಥಾಪಕರಾದ ಉಮಾಶ್ರೀ ನ್ಯಾಮಗೌಡ ಮತ್ತು ಶ್ರೀಶೈಲ ಪಾಲಬಾವಿ ಅವರ ಪರಿಶ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿ ಶ್ಲಾಘಿಸಿದೆ.ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಿ.ವಿ. ಬರಮನಿ, ಚೇರ್ಮನ್ ಪಿ.ಬಿ. ಪೂಜಾರಿ, ಸಂಘದ ಎಲ್ಲ ಪದಾಧಿಕಾರಿಗಳು, ಕಾಲೇಜಿನ ಪ್ರಾಚಾರ್ಯ ಪರಶುರಾಮ ನಾಯಕ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹ? ವ್ಯಕ್ತಪಡಿಸಿ ಸಾಧಕ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.