Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

263ನೇ ದಿನದಲ್ಲಿ ಬಲ್ದೋಟ ಹಟಾವೋ, ಮಾಲಿನ್ಯ ವಿರೋಧಿ ಹೋರಾಟ ಯಶಸ್ವಿ 

 ಹೋರಾಟಕ್ಕೆ  ರಾಜ್ಯಾಧ್ಯಕ್ಷ ಬಡಗಲಪುರ ಬೆಂಬಲ

 
ಕೊಪ್ಪಳ: ಇಲ್ಲಿನ ಕಾರ್ಖಾನೆಗಳು ಜನರ ಜೀವ, ಆರೋಗ್ಯಕ್ಕಿಂತ ತಮ್ಮ ಲಾಭವನ್ನೇ ಮುಖ್ಯವಾಗಿ ಇಟ್ಟುಕೊಂಡು ಇಡೀ ಪರಿಸರವನ್ನು ನಾಶಪಡಿಸಿವೆ. ಭೂಮಿ, ಕೃಷಿ ಬಗ್ಗೆ ಸರಕಾರ ತಾತ್ಸಾರ ಮಾಡಿದರೆ ರೈತರು ತಕ್ಕ ಪಾಠ ಹೇಳಬೇಕಾಗುತ್ತದೆ. ಕೊಪ್ಪಳ ಹೋರಾಟ ರಾಷ್ಟ್ರದ ಗಮನವನ್ನೂ ಸೆಳೆಯುತ್ತಿದೆ. ಈ ಹೋರಾಟ ಗೆಲ್ಲುವತನಕ ವಿರಮಿಸದು. ಬಸಾಪುರ ಕೆರೆ ಹೋರಾಟ ಮುಂದುವರೆಯುತ್ತದೆ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೆಂದ್ರ ಮಾತನಾಡಿದರು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಮಂಗಳವಾರ ಬೆಳಗ್ಗೆ 9-30ಕ್ಕೆ ಧರಣಿ ಸ್ಥಳದಿಂದ ಪಾದಯಾತ್ರೆ ಮಾಡಿ ಬಲ್ಡೋಟ ಗೇಟ್ ಎದುರು ನಡೆಯುವ ಬಸಾಪುರ ಕೆರೆ ಹೋರಾಟಕ್ಕೆ ಬೆಂಬಲಿಸಲು ನಗರಧ ನಾಗರಿಕರು, ಬಾಧಿತ ಹಳ್ಳಿ ಜನರು ಆಗಮಿಸಲು ವಿನಂತಿ ಮಾಡಿದರು.
ಧರಣಿಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ವಸಂತಕುಮಾರ ಎನ್.ಡಿ, ಬಸವರಾಜ ರಾಯಚೂರು, ಎಂ.ಎಲ್.ಕೆ ನಾಯ್ಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ರವಿ ಕಾಂತನವರ, ಡಿ.ಎಂ. ಬಡಿಗೇರ,  ಬಿ. ಜಿ. ಕರಿಗಾರ, ರಾಜಶೇಖರ ಏಳುಬಾವಿ, ಶಿವಪ್ಪ ಜಲ್ಲಿ ಮುಂತಾದವರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST