ನೇಸರಗಿ. ಇಲ್ಲಿನ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಭೀಮಶಿ ಹನಮಂತಪ್ಪ ಮಾಳಗಿ ಇವರು 80 ನೇ ಸ್ವಾತಂತ್ರ್ಯ ದಿನವಾದ 15-08-2026 ರಂದು ಕಳೆದ 19 ವರ್ಷ ನೇಸರಗಿ ಪಂಚಾಯತನಲ್ಲಿ ಕ್ಲರ್ಕ್ ಆಗಿ ತದ ನಂತರ ಪಧೋನ್ನತಿ ಹೊಂದಿ ಪಂಚಾಯತಿ ಕಾರ್ಯದರ್ಶಿಯಾಗಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ತಾಲೂಕಾ ಪಂಚಾಯತ ಬೈಲಹೊಂಗಲ ಮತ್ತು ಕಿತ್ತೂರು ಹಾಗೂ ಗ್ರಾಮ ಪಂಚಾಯತ ನೇಸರಗಿ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸತ್ಕರಿಸಿ, ಸನ್ಮಾನಿಸಲಾಯಿತು.
ಈ ಸನ್ಮಾನ ಸಮಾರಂಭದಲ್ಲಿ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜು ಜಿನ್ನೂರು ಮಾತನಾಡಿ ಭೀಮಶಿ ಮಾಳಗಿ ಅವರು ಪಂಚಾಯತಗೆ ಸಲ್ಲಿಸಿದ ಸೇವೆ ಅಪಾರ ಎಂದರು.
ನೇಸರಗಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸವಿತಾ ಹಾಲಹಳ್ಳಿ ಮಾತನಾಡಿ ಭೀಮಶಿ ಅವರು ನೇಸರಗಿ ಗ್ರಾಂ ಪಂ ನಲ್ಲಿ ಕ್ಲರ್ಕ್ ಆಗಿ ಸೇವೆ ಆರಂಭಿಸಿ 19 ವರ್ಷ ಸೇವೆ ಮಾಡಿ, 9 ವರ್ಷ ಕಾರ್ಯದರ್ಶಿ ಆಗಿ ಹುಣಶೀಕಟ್ಟಿ, ವನ್ನೂರ, ಸುತಗಟ್ಟಿ, ನೇಸರಗಿ ಗ್ರಾ ಪಂ ಗಳಲ್ಲಿ ಜನಪರ ಸೇವೆ ಸಲ್ಲಿಸಿ ಸ್ವಂತ ಊರಲ್ಲಿ ವಯೋ ನಿವೃತ್ತಿ ಹೊಂದುತ್ತಿರುವದು ಹೆಮ್ಮೆ ಎಂದರು.
ಈ ಸನ್ಮಾನ ಸಮಾರಂಭದಲ್ಲಿ ತಾ ಪಂ ಬೈಲಹೊಂಗಲ ಮತ್ತು ತಾ ಪಂ ಕಿತ್ತೂರು ಅಧಿಕಾರಿಗಳು, ಸಿಬ್ಬಂದಿ, ಮತ್ತು ನೇಸರಗಿ ತಾ ಪಂ ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರು, ಎಲ್ಲ ಪಿಡಿಓ, ಎಸ್ ಡಿ ಎ, ಮಾಜಿ ಸದಸ್ಯರು, ಗ್ರಾಮದ ಎಲ್ಲ ಸಮಾಜದ ಮುಖಂಡರು, ಗ್ರಾಮಸ್ಥರು, ಮಾಳಗಿ ಕುಟುಂಬದ ಸದಸ್ಯರು ಭಾಗವಹಿಸಿ ಸತ್ಕರಿಸಿ, ಸನ್ಮಾನಿಸಿದರು.