LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ಮುಂಬಯಿಯಲ್ಲಿ ಭವ್ಯ ಸತ್ಕಾರ

ಮುಂಬಯಿ, ಆ. 16: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಮಹಾರಾಷ್ಟ್ರ ರಾಜ್ಯ, ಮುಂಬಯಿ ವತಿಯಿಂದ ಪದ್ಮಶ್ರೀ ಪುರಸ್ಕೃತ ಹಾಗೂ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಕೆಎಎಚ್‌ಇಆರ್) ಕುಲಾಧಿಪತಿ ಡಾ. ಪ್ರಭಾಕರ ಬಿ. ಕೋರೆ ಅವರನ್ನು ಭಾನುವಾರ ಮುಂಬೈನ ನಾರಿಮನ್ ಪಾಯಿಂಟ್‌ನ ಯಶವಂತರಾವ್ ಚವಾಣ್ ಮೆಮೋರಿಯಲ್ ಹಾಲ್‌ನಲ್ಲಿ ಭವ್ಯವಾಗಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಸಚಿವ ಈಶ್ವರ ಖಂಡ್ರೆ, ಮಹಾರಾಷ್ಟ್ರ ವಿಧಾನಸಭೆಯ ಸಭಾಪತಿ ರಾಹುಲ್ ನಾರ್ವೇಕರ್, ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಮಾಜಿ ಶಾಸಕ ಅಶೋಕ ಕೇಣಿ, ಪಂಡರಾಪುರ ದೇವಸ್ಥಾನದ ಅಧ್ಯಕ್ಷ ಗಹಿನೀನಾಥ ಮಹಾರಾಜ ಔಸೇಕರ್, ಮಾತೋಶ್ರೀ ದ್ರಾಕ್ಷಾಯಿಣಿ ಅವ್ವಾಜಿ, ಮಹೇಶ ಚಿವಟೆ, ಮಹಾರಾಷ್ಟ್ರ ರಾಜ್ಯ ಮಹಾಸಭೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಶ್ವನಾಥ ಚಕೋಟೆ, ಮಹಿಳಾ ಸಮಿತಿ ಅಧ್ಯಕ್ಷೆ ಉಮಾ ನಾಯ್ಕ, ಮಹೇಶ ಮುದ್ದ ಸೇರಿದಂತೆ ಮುಂಬಯಿಯ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ಹಾಗೂ ಬಾಂಧವರು ಉಪಸ್ಥಿತರಿದ್ದರು.

ಡಾ. ಪ್ರಭಾಕರ ಕೋರೆ ಅವರ ಶಿಕ್ಷಣ, ಆರೋಗ್ಯ, ಸಹಕಾರ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ದೀರ್ಘಕಾಲದ ಸೇವೆಯನ್ನು ಗಣ್ಯರು ಸ್ಮರಿಸಿ ಅಭಿನಂದಿಸಿದರು. ಅವರ ಸೇವೆ ಮತ್ತು ಸಾಧನೆಗಳು ಸಮಾಜಕ್ಕೆ ಸದಾ ಪ್ರೇರಣೆಯಾಗಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಾ. ಪ್ರಭಾಕರ ಕೋರೆ ಅವರಿಗೆ ಶುಭಾಶಯಗಳನ್ನು ಸಲ್ಲಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾರಂಗ ದಿಟ್ಟತನದಿಂದ ಪ್ರಜಾಪ್ರಭುತ್ವದ ಕಾವಲು ಕಾಯುತ್ತಿದೆ: ಸಿ.ಎಂ. ತ್ಯಾಗರಾಜಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ಮುಂಬಯಿಯಲ್ಲಿ ಭವ್ಯ ಸತ್ಕಾರಸಿದ್ದಾರ್ಥ ವಿಹಾರ ಟ್ರಸ್ಟ್ ಭೂ ಹಂಚಿಕೆ ವಿವಾದ: ತುರ್ತು ನೋಟಿಸ್ ಜಾರಿ ಮಾಡಲು ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಆದೇಶ"ಮೂಡಲಗಿಯಲ್ಲಿ ಹರ ಘರ್ ತಿರಂಗಾ ಅಭಿಯಾನದ ಅಂಗವಾಗಿ ತ್ರಿವರ್ಣ ಯಾತ್ರೆ"16ಕ್ಕೆ ಕರ್ನಾಟಕ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಸನ್ಮಾನಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಗ್ರಂಥಾಲಯಗಳು ಜ್ಞಾನ ವೃದ್ಧಿ ಕೇಂದ್ರಗಳುಚನ್ನಮ್ಮನ ಕಿತ್ತೂರಿನಲ್ಲಿ ಆಕರ್ಷಕವಾಗಿ ಮೂಡಿಬಂದ ‘ಹರ್ ಘರ್ ತಿರಂಗಾ’ ಅಭಿಯಾನ: ರಾಷ್ಟ್ರಭಕ್ತಿಯ ಸಂಭ್ರಮ​ಗ್ರಂಥಾಲಯವು ಮಹಾವಿದ್ಯಾಲಯದ ಹೃದಯವಿದ್ದಂತೆ : ಪ್ರೊ.ಬಿ.ಎ.ಪಾಟೀಲಪುಸ್ತಕ ಸಂಸ್ಕೃತಿಯಿಂದ ಮಸ್ತಕವನ್ನು ಅರಳಿಸಬೇಕಾದ ಅವಶ್ಯಕತೆಯಿದೆ : ಶ್ರೀಗಳು